Current View
ಬೆಟ್ಟ, ಬುಗ್ಗೆ, ಬೆಡಗು…
ಬೆಟ್ಟ, ಬುಗ್ಗೆ, ಬೆಡಗು…
₹ 780+ shipping charges

Book Description

ಪುರಾಣ ಪ್ರಸಿದ್ಧ ಕುರುಡುಮಲೆ ಕ್ಷೇತ್ರ ಕೋಲಾರ ಜಿಲ್ಲೆ ಮುಳಬಾಗಿಲಿನಿಂದ 10ಕಿ.ಮೀ ದೂರದ ಬೆಟ್ಟದಲ್ಲಿದೆ. ಚೋಳರ ಕಾಲದ ದೇಗುಲಗಳಿರುವ ಈ ಸ್ಥಳ ಕುರುಡುಮಲೆ ಗಣಪನ ಸನ್ನಿಧಿಯೆಂದೇ ಪ್ರಸಿದ್ಧಿ. ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಂತೂ ಇಲ್ಲಿ ಜನಜಾತ್ರೆ. ಗಣೇಶ ಚೌತಿ ಮರುದಿನ ಇಲ್ಲಿನ ಗಣೇಶನಿಗೆ ಅದ್ದೂರಿ ಬ್ರಹ್ಮರಥೋತ್ಸವ.          ಎಸ್ ವಿ ಉಪೇಂದ್ರ ಚಾರ್ಯ     ಪ್ರಜಾವಾಣಿ 2-10-2001   ಶ್ರೀ ಶಿವಕುಮಾರ ಸ್ವಾಮಿಗಳು ಸಿದ್ದಗಂಗೆಯಲ್ಲಿ ೧೯೪೦ರಿಂದ ಈ ವಿದ್ಯಾರ್ಥಿನಿಲಯವನ್ನು ನಡೆಸುತ್ತಿದ್ದಾರೆ. ಇಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿ ಹಾಗೂ ವ್ಯಾಸಂಗ ಸೌಕರ್ಯ ಎಲ್ಲಾ ಉಚಿತ, ಪ್ರತಿ ವರ್ಷ ೪೮೦೦ ಬಡ ಗ್ರಾಮೀಣ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಾರೆ. ವಿವಿಧ ಭಾಷೆ ಜಾತಿ-ಮತ ಮತ್ತು ರಾಜ್ಯದ ನಾನಾ ಭಾಗಗಳಿಂದ ಮತ್ತು ಹೊರ ರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳೂ ಇಲ್ಲಿರುತ್ತಾರೆ.   ಎಸ್ ವಿ ಉಪೇಂದ್ರ ಚಾರ್ಯ    ಕಸ್ತೂರಿ ಫೆಬ್ರವರಿ 1994   ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕದ ಸುಂದರ ಹೆಸರಿನ ವೃಷಭಾವತಿ ನದಿ ಪರಿಸರ ಹಿಂದೆ ಒಂದು ಪ್ರೇಕ್ಷಣೀಯ ಪ್ರಕೃತಿ ತಾಣವಾಗಿತ್ತೆಂದು ಯಾರಾದರೂ ಹಿರಿಯರು ಹೇಳಿದರೆ ನಂಬುವುದು ಕಷ್ಟ ಈಗ ಇಲ್ಲಿ ಹರಿಯುತ್ತಿರುವ ದುರ್ವಾಸನೆಯ ಚರಂಡಿ ನೀರಿನ ಕಪ್ಪು ಕಾಲುವೆ ನರಕದ ವೈತರಣಿಯ ಹೆಸರನ್ನು ನೆನಪಿಗೆ ತರುತ್ತದೆ       ಎಸ್ ವಿ ಉಪೇಂದ್ರ ಚಾರ್ಯ    ಕನ್ನಡ ಪ್ರಭ   15/7/1993   ದಕ್ಷಿಣ ಭಾರತದ ಹೆಸರಾಂತ ಯಾತ್ರಾ ಸ್ಥಳಗಳಲ್ಲಿ ಮಂತ್ರಾಲಯ ಬಹು ಮುಖ್ಯ ಪುಣ್ಯಕ್ಷೇತ್ರ. ನಮ್ಮ ರಾಜ್ಯದಿಂದ ಬರುವ ಯಾತ್ರಿಕರೇ ಜಾಸ್ತಿಯಾದರೂ, ಮಂತ್ರಾಲಯಕ್ಕೆ ದೇಶದ ಎಲ್ಲ ಭಾಗಗಳಿಂದ ಸಹಸ್ರಾರು ಮಂದಿ ಬರುತ್ತಾರೆ. ಹಿಂದೂಗಳಷ್ಟೇ ಅಲ್ಲದೇ ಅನ್ಯರೂ ಕೂಡ ವರ್ಷ ವಿಡೀ ಇಲ್ಲಿಗೆ ಬಂದು ಹೋಗುತ್ತಿರುತಾರೆ.                 ಎಸ್ ವಿ ಉಪೇಂದ್ರ ಚಾರ್ಯ’  ತರಂಗ  28 ಆಗಸ್ಟ್ 1983   ಕೆಳಬೆಟ್ಟ, ಬಂಗಲೆ ಬೆಟ್ಟ, ಕುಂಭಿಬೆಟ್ಟ. ತುಮಕೂರು ಬಳಿಯ ದೇವರಾಯನ ದುರ್ಗದಲ್ಲಿ ಕಣ್ಣಾಡಿಸಿದ ಕಡೆ ಕಾಡು ಪರಿಸರದ ಗುಡ್ಡ- ಬೆಟ್ಟಗಳು. ಹೊಯ್ಸಳರ ಕಾಲದಲ್ಲಿ ‘ಆನೆಬಿದ್ದಸರಿ’. ವಿಜಯನಗರ ಅರಸರ ಆಳ್ವಿಕೆಯಲ್ಲಿ ‘ಕರಿಗಿರಿ’ ಮತ್ತು ಚಿಕ್ಕದೇವರಾಜ ಒಡೆಯರ ಕಾಲದ ‘ದೇವರಾಯರ ದುರ್ಗ’ ಈಗ ದೇವರಾಯನದುರ್ಗ.        ಎಸ್ ವಿ ಉಪೇಂದ್ರ ಚಾರ್ಯ     ಪ್ರಜಾವಾಣಿ   9/8/2009