Share this book with your friends

Chinakuruli / ಚಿನಕುರುಳಿ ಅನುಭವ ಸಿರಿ ಸೂತ್ರಗಳು/ Anubhava Siri Soothragalu

Author Name: N. Narasimha Prasad | Format: Paperback | Genre : Poetry | Other Details

ನಮ್ಮ ಜೀವನದ ಪೂರ್ವದಲ್ಲಿ ಶಿಕ್ಷಣ ಸಂಸ್ಥೆಗಳಿಂದ ಕ್ರಮ ಶಿಕ್ಷಣ ಹೊಂದುತ್ತೇವೆ. ಅಲ್ಲಿ ವ್ಯವಸ್ಥಿತವಾದ ವಿಷಯಗಳು, ಬೋಧನಾ ಕ್ರಮ ಹಾಗೂ ಮಾರ್ಗ ದರ್ಶನಗಳು ಲಭಿಸುತ್ತದೆ. ಇದು ಮುಂದೆ ಬರುವ ಸವಾಲುಗಳನ್ನು ಎದುರಿಸಲು ಸಿದ್ದ ಪಡಿಸುವ ಪ್ರಯತ್ನ. ವೃತ್ತಿ ಜೀವನಕ್ಕೆ ಕಾಲಿಟ್ಟ ಮೇಲೆ ತಿಳಿಯುವುದು, ಈ ಹಿಂದೆ ಕಲಿತ ಶಿಕ್ಷಣದ ವಿಷಯಗಳು ಹಾಗೂ ಕ್ರಮ ಅಗತ್ಯ ಆದರೆ ಸಾಕಾಗುವುದಿಲ್ಲ. ಈ ಉತ್ತರದಲ್ಲಿ, (ಉತ್ತರ ಭಾಗದಲ್ಲಿ) ಪ್ರಶ್ನೆಗಳೇ ಜಾಸ್ತಿ. ಹಾಗಾಗಿ, ಹೊಸ ಸನ್ನಿವೇಶಕ್ಕೆ ಹೊಂದುವಂಥ ವಿಷಯಗಳ ಹಾಗೂ ಕಲಿಕೆ ವಿಧಾನಗಳ ಶೋಧನೆ ಅತೀ ಅಗತ್ಯ. ಈ ಉತ್ತರ ಭಾಗದ ಕಲಿಕೆಯಲ್ಲಿ ಒಂದು ನಿರ್ದಿಷ್ಟ ಕ್ರಮ ಇರುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಶೈಲಿಗೆ ಒಪ್ಪುವಂತಹ ಹಾಗೂ ಅನ್ವಯಿಸುವಂತ ಸೂತ್ರ ಸಿದ್ದ ಪಡಿಸಿಕೊಳ್ಳ ಬೇಕು.

ಈ ಪುಸ್ತಕದ ತಿರುಳು ನನ್ನ ಅನುಭವದಿಂದ ನಾನು ಸಿದ್ಧಪಡಿಸಿಕೊಂಡ ಸೂತ್ರ ಗಳು. ನನ್ನ ವೃತ್ತಿ ಜೀವನಕ್ಕೆ ಬಹಳ ಉಪಯುಕ್ತವಾದ ಸೂತ್ರಗಳು. ಇದರಲ್ಲಿ 52 ಸೂತ್ರಗಳಿವೆ. ಒಂದು ವಾರಕ್ಕೆ ಒಂದರಂತೆ ವರ್ಷಕ್ಕೆ ಸಾಕಾಗುವಷ್ಟು.

ಇದರಲ್ಲಿ ಎಲ್ಲಾ ತರಹದ ವಿಷಯಗಳು ಪ್ರಸ್ತಾಪಿಸಲ್ಪಟ್ಟಿದೆ. ಉದಾಹರಣೆಗೆ, ಸಮಯದ ಮಹತ್ವ , ಅನಂತ ಭಾವನೆ, ರಾಜಕೀಯ, ಆವಿಷ್ಕಾರ, ಪೂರ್ವ ಸಿದ್ಧತೆ, ವಿಷಯ ವಿವರಿಸುವ ವಿಧಾನ, ಸ್ಪಷ್ಟತೆ, ಕರಗತ, ಅನುಕಂಪತೆ ಮುಂತಾದುವು.

ಇನ್ನು ಮೊದಲ ಭಾಗದಲ್ಲಿ, ನನ್ನ ತಾತ್ವಿಕ ಕಲಿಕೆಯ ಪ್ರಸ್ತಾಪ ಉಂಟು. ಮನುಷ್ಯ ಜನ್ಮದ ಉದ್ದೇಶದ ಅರಿವಿನ ಅರಿವು. ಮನುಷ್ಯ ಜನ್ಮ ಶ್ರೇಷ್ಠ ಜನ್ಮ. ಈ ಜನ್ಮ ತಳೆದಾಗ ನಮಗೆ ಎಷ್ಟೊಂದು ನಿಗೂಢ. ಈ ಜನ್ಮ ಋಣ ಪಡೆಯಲೆಂದೆ ಅಥವ ತೀರಿಸಲೆಂದೆ? ನಮ್ಮ ಋಣದ ಖಾತೆಯ ಬಾಕಿ ಏನು? ಅದು ಶೂನ್ಯದತ್ತ ಹೊರಡಲು ನಾವು ಏನು ಮಾಡಬೇಕು? ಈಗ ತಾನೇ ಬಂದಿಳಿದಿರುವ ಮಗುವಿನ ಸ್ವಗತವನ್ನು ಪದಗಳಲ್ಲಿ ಬಂಧಿಸುವ ಪ್ರಯತ್ನ.

ಇನ್ನು ಮೂರನೇ ಭಾಗ. ಇದು ವಿನೋದಕ್ಕಾಗಿ. ಇದು ಏನೆಂದು ಕಂಡು ಹಿಡಿಯಿರಿ ಸವಾಲುಗಳು. ನಮ್ಮ ಸುತ್ತ ಮುತ್ತ ಎಷ್ಟೊಂದು ವಿಷಯಗಳು ಚಮತ್ಕಾರಕ್ಕೆ ಉತ್ತೇಜನ ನೀಡುತ್ತದೆ. ಕೆಲವೊಂದನ್ನು ಪದದಲ್ಲಿ ಬಂಧಿಸುವ ಸಣ್ಣ ಪ್ರಯತ್ನ.

ಈ ನನ್ನ ಅನುಭವ ಸಿರಿ ನಿಮಗೆ ಕನಿಷ್ಟ ಪಕ್ಷ ಒಳ್ಳೆಯ ಓದಿನ ಅನುಭವ ನೀಡುವುದೆಂದು ಭಾವಿಸುವ ನಿಮ್ಮ ಉದಯೋನ್ಮುಖ ಲೇಖಕ

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ಎನ್. ನರಸಿಂಹ ಪ್ರಸಾದ್

ಎನ್. ನರಸಿಂಹ ಪ್ರಸಾದ್ ಮೂಲತಃ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರ್. ಇವರು ಬ್ಯಾಂಕಿಂಗ್ ಡೊಮೇನ್‌ನಲ್ಲಿ ಐಟಿ ಕ್ಷೇತ್ರದಲ್ಲಿ 24+ ವರ್ಷಗಳ ಶ್ರೀಮಂತ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಇನ್ಫೋಸಿಸ್ನ EdgeVerve ನಲ್ಲಿ ಹಿರಿಯ ಸ್ಥಾನವನ್ನು ನಿರ್ವಹಿಸುತ್ತಿದ್ದಾರೆ. ಭೌಗೋಳಿಕದಾದ್ಯಂತ ಗ್ರಾಹಕರೊಂದಿಗೆ ಕೆಲಸ ಮಾಡಿದ ಶ್ರೀಮಂತ ಅನುಭವ. ಅವರು 4 ಖಂಡಗಳಲ್ಲಿ ವ್ಯಾಪಕವಾಗಿ ಪ್ರಯಾಣಿಸಿರುತ್ತಾರೆ. ವಿವಿಧ ವಿಷಯಗಳನ್ನು ಸವಿಸ್ತಾರದಿಂದ ಅಮೂರ್ತಕ್ಕೆ ಮತ್ತು ಅಮೂರ್ತದಿಂದ ಸವಿಸ್ತಾರಾಗಿ ಬರೆಯುವುದು ಅವರ ವಿಶೇಷತೆ. ಅವರು ತಮ್ಮ ವೃತ್ತಿಪರ ಜೀವನದ ಭಾಗವಾಗಿ ಅನೇಕ ಚಿಂತನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಬರವಣಿಗೆ ಅವರ ಹವ್ಯಾಸ. ಅವರ ಒಂದು ನೈಜ ಪ್ರಪಂಚದ ಅನುಭವವನ್ನು ಪ್ರಜಾವಾಣಿ ಸುದ್ದಿ ಪತ್ರಿಕೆಯಲ್ಲಿ "ಇವಳವಳಲ್ಲ" ಎಂಬ ಶೀರ್ಷಿಕೆ ಅಡಿಯಲ್ಲಿ ಪ್ರಕಟ ಹೊಂದಿರುತ್ತದೆ.

Read More...

Achievements

+1 more
View All