Current View
ಭಾರತದ ವೈವಿಧ್ಯಮಯ ಜಾನಪದ ಕಥೆಗಳು
ಭಾರತದ ವೈವಿಧ್ಯಮಯ ಜಾನಪದ ಕಥೆಗಳು
₹ 400+ shipping charges

Book Description

ಭಾರತದ ವಿವಿಧ ರಾಜ್ಯಗಳ ಮತ್ತು ಉಪಭಾಷೆಗಳ ವೈವಿಧ್ಯಮಯವಾದ ಜಾನಪದ ಕಥೆಗಳ ಸಂಗ್ರಹವಿದು. ಭಾರತದ ಸಂಸ್ಕøತಿಯು ಒಂದೇ ಆದರೂ ಅನೇಕ ಪ್ರಾದೇಶಿಕ ವೈವಿಧ್ಯತೆಗಳಿದ್ದು, ಅವು ಸ್ವಾರಸ್ಯಕರವಾಗಿವೆ. ಈ ವೈವಿಧ್ಯತೆಗಳನ್ನು ಅರಿಯಲು ಜಾನಪದ ಕಥೆಗಳು ಬಹಳ ಪ್ರಯೋಜನಕಾರಿಯಾಗಿವೆ. ಅಲ್ಲದೇ ಈ ಜಾನಪದ ಕಥೆಗಳಲ್ಲಿ, ಅತಿಮಾನುಷ ಕಥೆಗಳು, ಹಾಸ್ಯ ಕಥೆಗಳು, ಪ್ರಾಣಿಕಥೆಗಳು, ನೀತಿಕಥೆಗಳು, ಧಾರ್ಮಿಕ ಕಥೆಗಳು, ಬುದ್ಧಿಚಾತುರ್ಯದ ಕಥೆಗಳು, ಒಗಟಿನ ಕಥೆಗಳು, ಕಾರಣ ಕಥೆಗಳು, ಮೂರ್ಖರ ಕಥೆಗಳು, ರಾಜರಾಣಿಯರ, ರಾಜಕುಮಾರ, ರಾಜಕುಮಾರಿಯರ ಕಥೆಗಳು, ಪ್ರೇಮ ಕಥೆಗಳು, ಹಳ್ಳಿಗರ ಕಥೆಗಳು, ರಾಕ್ಷಸರ ಕಥೆಗಳು, ಮಾಯಾಮಂತ್ರದ ಕಥೆಗಳು, ತಂತ್ರಗಾರರು ಮೊದಲಾದ ಹಲವಾರು ಪ್ರಕಾರದ ಕಥೆಗಳಿವೆ. ಅನೇಕ ಕಥೆಗಳು ವಿವಿಧ ಪ್ರದೇಶಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿಂದ ಕೂಡಿದ್ದು ಬಹುತೇಕ ಒಂದೇ ಆಗಿರುತ್ತವೆ. ಇದಕ್ಕೆ ಕಾರಣ, ಪ್ರಯಾಣಿಕರು ಒಂದು ಸ್ಥಳದಿಂದ ಒಂದು ಸ್ಥಳಕ್ಕೆ ಪ್ರಯಾಣ ಮಾಡುತ್ತಾ ಇವುಗಳನ್ನು ಹರಡಿರುವುದೇ ಆಗಿರುತ್ತದೆ. ಹೀಗೆ ಬಾಯಿಂದ ಬಾಯಿಗೆ ಹರಿಡಿರುವ ಈ ಸ್ವಾರಸ್ಯಕರವಾದ ಕಥೆಗಳು ಇಂದಿನ ದಿನಗಳಲ್ಲಿ ಬಹಳ ಕಡಿಮೆಯಾಗುತ್ತಿವೆ. ಹಾಗಾಗಿ ಇಂಥ ಸಂಗ್ರಹಗಳು ಬಹಳ ಅವಶ್ಯವಾಗಿವೆ.