ಈ ಪುಸ್ತಕವು ಬಾರಕೂರಿನ ಇತಿಹಾಸದ ಸಂಕ್ಷಿಪ್ತ ವಿವರಣೆಯನ್ನು ಹೊಂದಿದೆ. ಪುಸ್ತಕವನ್ನು ಖಾಸಗಿ ವಿತರಣೆಯ ಸಲುವಾಗಿ ಮುದ್ರಿಸಲಾಗಿದೆ. ಅರುವತ್ತು ಪುಟಗಳ ಈ ಕಿರು ಪುಸ್ತಕವು ಬಾರಕೂರು ಸಾಮಾನ್ಯ ಶಕದ ಆರಂಭದಿಂದ ಸಾಗಿ ಬಂದ ರೀತಿ, ಆಳಿದವರು, ಅವರ ಕೊಡುಗೆಗಳು, ಪ್ರಾಚೀನ ದೇವಾಲಯಗಳು, ನಾಶವಾಗಿರುವ ದೇವಾಲಯಗಳು, ಕಣ್ಮರೆಯಾಗುತ್ತಿರುವ ದೇವಾಲಯಗಳು, ಕೆಲವು ಪ್ರಮುಖ ಶಾಸನಗಳು, ಆಳಿ ಹೋದವರ ಹೆಸರುಗಳು, ಇತ್ಯಾದಿ ಮಾಹಿತಿಗಳನ್ನು ಹೊಂದಿದೆ.