ಕನಸಿಂದ ಕಲ್ಪನೆಯಾಗಿ ಕೈ ಬರಹದವರೆಗೆ......
ನಮ್ಮ ಜೀವನ ವಿವಿಧ ಕಥೆಗಳ ನಡುವಿನ ಅನಾವರಣ.ಪ್ರತಿಯೊಂದು ಕಥೆಗೂ ಒಂದು ಮುಖ್ಯವಾದ ಕಾರಣ ಇದ್ದೇ ಇರುತ್ತದೆ.ಅದು ಒಳ್ಳೆಯದ್ದಾಗಿರಬಹುದು ಅಥವಾ ಕೆಟ್ಟದ್ದಾಗಿಯೂ ಇರಬಹುದು.ನಮ್ಮ ಬದುಕು ಈ ಕಾರಣಗಳ ಮೇಲೆ ಅವಲಂಬಿತವಾಗಿ ನಡೆದಾಗ ಮಾತ್ರ ಜೀವನಕ್ಕೆ ನಿಜವಾದ ಅರ್ಥ ಸಿಗಲು ಸಾಧ್ಯ.
ಕೆಲವೊಂದು ಕಥೆಗಳಿಗೆ ಕನಸುಗಳೇ ಪ್ರೇರಣೆಯಾಗಿರುತ್ತದೆ.ಪ್ರತಿಯೊಬ್ಬರ ಜೀವಿತದಲ್ಲೂ ಒಂದಲ್ಲಾ ಒಂದು ಕಥೆ ಕನವರಿಸುತ್ತಾ ಕಾಡುವುದು ಸಹಜ.
ಕನಸಿನಿಂದ ನನಸಿನೆಡೆಗೆ ಸಾಗುವ ಪಯಣವೇ ಕಥೆ.ಕಹಿ ನೆನಪುಗಳ ಕಳೆಯುತ್ತಾ, ಸಿಹಿ ಹುರುಪುಗಳ ಬೆಳೆಸುತ್ತಾ,ತನ್ನ ಜೊತೆ ತನ್ನವರನ್ನೂ ಸಂತಸದಿಂದಿರಿಸುವುದೇ ಕಥೆಯ ಮುಖ್ಯ ಸಾರಾಂಶ.