'ಯತ್ರ ಯೋಗೇಶ್ವರ: ಕೃಷ್ಣೋ, ಯತ್ರ ಪಾರ್ಥೋ ಧನುರ್ಧರಃ, ತತ್ರ ಶ್ರೀರ್ವಿಜಯೋರ್ಭೂತಿ, ಧ್ರುವಾನೀತಿರ್ಮತಿರ್ಮಮ'
ಎನ್ನುವ ಶ್ಲೋಕ ಗೀತೆಯ ಅಧ್ಯಯನದ ಮಹತ್ವವನ್ನು ಹೇಳುತ್ತದೆ. ನಾವು ಅರ್ಜುನನಂತೆ ಶ್ರೀ ಕೃಷ್ಣನ ಶಿಷ್ಯರಾಗಬೇಕು. ಗೀತೆಯ ಬೋಧನೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ 'ಶ್ರೀ' ಅಂದರೆ ವ್ಯಾವಹಾರಿಕ ಜೀವನದಲ್ಲಿ ಯಶಸ್ಸು ಮತ್ತು 'ವಿಜಯ' ಅಂದರೆ ಆಧ್ಯಾತ್ಮಿಕ ಜೀವನದಲ್ಲಿ ಗೆಲುವನ್ನು ಪಡೆಯುತ್ತೇವೆ. ಶ್ರೀ ಕೃಷ್ಣನು ಗೀತೆಯ ೧೮.೬೮ ಶ್ಲೋಕದಲ್ಲಿ ಹೇಳಿದ ಬಹುಮೂಲ್ಯ ವಿಷಯವಿದು. ಯಾರು ಶ್ರೀಮದ್ ಭಗವದ್ಗೀತೆಯನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೋ ಮತ್ತು ಇತರರಿಗೆ ಅದನ್ನು ತಿಳಿಸಿಕೊಡುತ್ತಾರೋ ಅವರು ಭಗವಂತನಿಗೆ ಅತ್ಯಂತ ಪ್ರಿಯರಾಗುತ್ತಾರೆ. ಭಗವಂತನಿಗೆ ಪ್ರಿಯರಾಗುವುದಕ್ಕಿಂತ ವಿಶೇಷವಾದದ್ದು ನಮಗೇನು ಬೇಕು?
ಶ್ರೀ ಪ್ರಭುಜಿ.