ಈ ಪುಸ್ತಕವು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪ್ರಾಚೀನ ದೇವಾಲಯಗಳ ಸಂಕ್ಷಿಪ್ತ ವಿವರಗಳನ್ನು ಛಾಯಾಚಿತ್ರಗಳ ಜೊತೆಗೆ ಹೊಂದಿದೆ. ಕಲೆ ಮತ್ತು ಕೆತ್ತನೆಗಳ ದೃಷ್ಟಿಕೋನದಿಂದ ಅಷ್ಟೇನು ಮಹತ್ವ ಹೊಂದಿಲ್ಲದ ಈ ದೇವಾಲಯಗಳು, ಐತಿಹಾಸಿಕವಾಗಿ ಬಹಳ ಮಹತ್ವವನ್ನು ಹೊಂದಿವೆ. ದೇವಾಲಯಗಳ ಆಡಳಿತ ಮತ್ತು ಆಚರಣೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಈ ಎಲ್ಲಾ ಪ್ರಾಚೀನ ದೇವಾಲಯಗಳು ಇನ್ನೂ ಸಕ್ರಿಯವಾಗಿರುವುದಕ್ಕೆ ಮುಖ್ಯ ಕಾರಣ. ಕಣ್ಣ ಮುಂದೆ ಇದ್ದೂ ಕಾಣದಂತಿರುವ ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ, ಈ ಪುಸ್ತಕ.