ಉತ್ತರದಿಂದ ದಕ್ಷಿಣಕ್ಕೆ ಪಯಣ
.
ಉತ್ತರದಿಂದ ದಕ್ಷಿಣಕ್ಕೆ ಪಯಣ ಮೂಲತಃ ಬಾಲ ಸಾಹಿತಿ ಬಾಲ್ಯದಲ್ಲೇ ಬರೆದ ಪ್ರವಾಸ ಕಥನವಾಗಿದ್ದು ಸರಳ ಸ್ಪಷ್ಟವಾಗಿ ಮೂಡಿಬಂದಿದೆ,ತಾ ಕಂಡ ಕರ್ನಾಟಕವನ್ನು ಉತ್ತರದ ತುದಿಯಿಂದ ದಕ್ಷಿಣದವರೆಗಿನ ಅನುಭವ ನಿರಾಳವಾಗಿ ಗೀಚಿದ್ದಾನೆ, ಪ್ರತಿಯೊಂದರಲ್ಲೂ ಸೂಕ್ಷ್ಮತೆಯ ಸರಳತೆಯ ನೋಟ ಕಾಣಬಹುದು,ಅದಕ್ಕಿಂತ ಮಿಗಿಲಾಗಿ ಎಲ್ಲಾದರ ಹಿನ್ನೆಲೆಯೂ ತಿಳಿದು ಪುಟದಲ್ಲಿ ಬಳಿದಿದ್ದು ಇನ್ನೂ ವಿಶೇಷ
ಕನ್ನಡದ ಕಣಕಣದ ಸೌಗಂಧ ಅಂದವಾಗಿ ಕಾಣಬಹುದು
ಕನ್ನಡವ ಕೊಂಡಾಡಿದರ ಕುಡಿದ್ಹಂಗ ಕುಡ್ಲಾದೇಳನೀರ ಎನ್ನುವ ಅವರ ನುಡಿಯಂತೆ ಸ್ವಚ್ಚಂದವಾಗಿದೆ, ಮಲೆನಾಡ ಪ್ರಕ್ರತಿ ಸೌಂದರ್ಯವನ್ನು ಸವಿಯುತ್ತಾ ಅವರು ಬರೆದ ಸಾಲುಗಳು ಇಂತಿವೆ....
ಮೇಘ ಮದ್ಯದಿ
ದೂತನು ನಾನು,
ಸೊಂಕುವ ಮಂಜನು
ಸರಿಸುವ ಭಾನು!
ಮನಮೋಹನ ಮಡಗುವ
ಮನಮೋಹಕ ನೀನು,
ಹಾಡುತ-ಓಡುತ
ಹರಿ-ಗಿರಿರಾರಿ ಬಂದೇನು!
ಸಸ್ಯಶ್ಯಾಮಲ ಕಣ-ಕಣದಲು
ಇಳಿದುಳಿದ ಮಂಜಿನ ಹನಿಯಲು,
ಗಂಧ-ಸುಗಂಧ ಬೀರಲು
ತಂಪಲಿ ಇಂಪು ಕಾರಲು,
ಎಲ್ಲೆಯೂ ನಿನೇ,
ಎಲ್ಲೆಲ್ಲಿಯೂ ನಿನೇ!
ಒಲವಿನ ಚೆಲುವೆ,
ನಿನ್ನೆ ಕಂಡೆ, ನಿನ್ನೆ ಉಂಡೆ!
ಅವರು ಈ ಹೊತ್ತಿಗೆ ಬರೆದು ಎರಡು ವರ್ಷಗಳಾದರೂ ಮುದ್ರಣ ಮಾಡಿಸಲು ಗೊತ್ತಾಗದೆ ಇದ್ದರಿಂದ ಹಾಗೇ ಉಳಿದಿತ್ತು, ಓದುಗರ ಮಡಿಲು ಮುಟ್ಟಲು ಅರ್ಧ ದಶಕ ತೆಗೆದುಕೊಂಡಿತು ಆದರೂ ಕೊನೆಗಿಂದು ಇದು ನಿಮ್ಮ ಕೈಯಲ್ಲಿದೆ,ಹೊತ್ತಿಗೆಯಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ಅದರ ಹಿನ್ನೆಲೆ,ಮಲೆನಾಡಿನ ಕಾಡು ತಂಪಾದ ಬೀಡು, ಮಂಡಗದ್ದೆ ಪಕ್ಷಿಧಾಮ, ಜೋಗಿ ಜಲಪಾತ ತುಳುಕುವ ಬಳುಕುವ ಶೈಲಿ,ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಸೊಬಗು, ದಕ್ಷಿಣ ಭಾಗದ ಜನರ ಜೀವನ ಶೈಲಿ, ಧರ್ಮಸ್ಥಳದ ಮಾತುಬೀಡದ ಮಂಜುನಾಥರ ಮಹಿಮೆ, ಕುವೆಂಪುರವರ ಕವಿಮನೆ ಕವಿಶಚಲದ ಶಾಮಲದ ನಿಸರ್ಗ ಸೌಂದರ್ಯ ರಮಣೀಯವಾಗಿ ವಿವರಿಸಿದ್ದಾರೆ, ದಕ್ಷಿಣದ ಚಿರಾಪುಂಜಿ ಆಗುಂಬೆಯ ತಿರುವುಗಳು, ಶ್ರಂಗೇರಿಯ ಸೊಬಗುಗಳು,ಶಿಲ್ಪ ಸೌಂದರ್ಯದ ಕೈ ಚಳಕದಲ್ಲಿ ಭಾವ ಪುಳಕ, ಚಿಕ್ಕಮಗಳೂರಿನ ಕಾಫಿ ತೋಟ,ಮುಗಿಲಿನಲ್ಲಿನ ಮೇಘದೋಟ,ಬೇಲೂರಿನ ಐತಿಹಾಸಿಕ ಛಾಯೆ ಕಲ್ಲಲ್ಲೇ ಮೂಡಿಬಂದ ಮಾಯೆ! ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ,ಹಳೆಯ ಕಲ್ಲಿನ ಬುರುಜು,ಅಲ್ಲಿಂದ ಸಾಂಸ್ಕೃತಿಕ ನಗರಿ ಮೈಸೂ