ಪ್ರವಾಸಿ ಕಂಪೆನಿಗಳು, ಟ್ರಾವೆಲ್ ಏಜೆಂಟ್ಸ್ ಕೇಳುವ ಅರ್ಧದಷ್ಟು ದುಡ್ಡಿನಲ್ಲಿ ನೀವೇ ಪ್ಲಾನ್ ಮಾಡಿ ನಿಮ್ಮ ವಿದೇಶ ಪ್ರಯಾಣ. ೩೯ ದೇಶ ಸುತ್ತಿಬಂದ ಅನುಭವ, ಮಾರ್ಗದರ್ಶನ ಮತ್ತು ಉಪಯುಕ್ತ ಸಲಹೆಗಳು. ೨೨೦ ರೂಪಾಯಿ ಪುಸ್ತಕ ಖರೀದಿಸಿ , ಸಾವಿರಾರು ರೂಪಾಯಿ ಉಳಿಸಿ!
ಶ್ರೀನಿಧಿ ಹಂದೆ: ಉಡುಪಿ ಜಿಲ್ಲೆಯ ಕೋಟ ದಲ್ಲಿ ಜನಿಸಿದ ಶ್ರೀನಿಧಿ ಹಂದೆ ವೃತ್ತಿಯಿಂದ ಐಟಿ ಉದ್ಯೋಗಿ. ಸತ್ಯಂ, ಅಕ್ಸೆನ್ ಚರ್ ಮೊದಲಾದ ಸಂಸ್ಥೆಯಲ್ಲಿ ದುಡಿದ ಅನುಭವದ ಜೊತೆಗೇ ಪ್ರಯಾಣವನ್ನೂ ಪ್ರಮುಖ ಹವ್ಯಾಸವಾಗಿ ಬೆಳೆಸಿಕೊಂಡವರು. ಕಡಿಮೆ ಬೆಲೆಯ ಟಿಕೆಟ್ ಗಿಟ್ಟಿಸುವ ಕಲೆಯನ್ನು ಕಲಿತು ಅತಿ ಕಡಿಮೆ ಬಜೆಟ್ನಲ್ಲಿ ಇದುವರೆಗೆ ಜಗತ್ತಿನ ೩೯ ದೇಶಗಳನ್ನು ಸುತ್ತಿದ್ದಾರೆ. ಕಳೆದ ೧೪ ವರ್ಷಗಳಿಂದ www.enidhi.net ಎಂಬ ಪ್ರಖ್ಯಾತ ಟ್ರಾವೆಲ್ ಬ್ಲಾಗ್ ನಡೆಸುತ್ತಿರುವ ಶ್ರೀನಿಧಿ ಕಳೆದ ೨ ವರ್ಷಗಳಿಂದ www.airlineblog.in ಎಂಬ ವಿಮಾನಯಾನ ಕುರಿತ ವಿಶೇಷ ಬ್ಲಾಗ್ ಕೂಡ ನಡೆಸುತ್ತಿದ್ದಾರೆ. ವಾಹನ ಹಾಗು ಪ್ರವಾಸ ಕುರಿತ ಇವರ ಹಲವು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಮ್ಮ ಅನುಭವನನ್ನು ಹಾಗೂ ಉಪಯೋಗಿ ಟ್ರಿಕ್ ಗಳನ್ನು ಕನ್ನಡ ನಾಡಿನ ಓದುಗರೊಡನೆ ಹಂಚಿಕೊಂಡು ಎಲ್ಲರೂ ತಮ್ಮ ತಮ್ಮ ವಿದೇಶ ಪ್ರವಾಸದ ಆಸೆ ನೆರವೇರಿಸಿಕೊಳ್ಳಲು ಸಾಧ್ಯವಾಗಬೇಕು ಎಂಬ ಆಶಯದೊಂದಿಗೆ ಇದು ಶ್ರೀನಿಧಿ ಹಂದೆ ಯವರ ಮೊದಲ ಪುಸ್ತಕ.