ಕ್ರಿಮಿನೋಲಜಿ ಕಲಿಯುತ್ತಿದ್ದ ಪುಟ್ಟುಗೆ, ಘಾಟಿನ ರೂಟಿನಲ್ಲಿ ಆಕ್ಸಿಡೆಂಟ್ ಎಂದು ಬಿಂಬಿತವಾದ ಕೊಲೆಯ ಬಗ್ಗೆ ತನಿಖೆ ಮಾಡಲು ಮನವಿ ಬರುತ್ತದೆ. ಅವನು ಮಾಡುತ್ತಿರುವ ರಿಸರ್ಚ್ ಪ್ರಾಜೆಕ್ಟಿಗೆ, ಸಬ್ಜೆಕ್ಟ್ ಸಿಕ್ಕಿತೆಂದು ಪ್ರಮಾದದ ಕಡೆಗೆ ಪ್ರಯಾಣ ಬೆಳೆಸುವನು. ಅಲ್ಲಿ ಹತ್ತಾರು ಜನರೆದುರು ನೂರಾರು ಪ್ರಶ್ನೆಯಿಟ್ಟು, ಕೊಲೆಯ ಅಲೆಯನ್ನು ಭೇದಿಸತೊಡಗಿದ. ಒಂದು ಕೊಲೆಯ ಹಿಂದೆ ಹೋಗಿ, ಮತ್ತೊಂದು ಕೊಲೆಯ ಸುಳಿವಿನಿಂದ, ಮಗದೊಂದರ ತನಿಖೆಗೆ ಇಳಿದನು. ತನಗೂ ತನ್ನ ಆಪ್ತರಿಗೂ ದಾಳಿಯ ಗಾಳಿ ತಾಕಿದರೂ, ಹಿಮ್ಮೆಟ್ಟದೆ ಸತ್ಯದ ಸೊಗಟೆಯನ್ನು ಬಿಚ್ಚಿಟ್ಟನು. ನಡೆದ ಸೀರಿಯಲ್ ಮರ್ಡರ್ಗಳಿಗೆ ಕಾಲೇಜ್ ವಿದ್ಯಾರ್ಥಿಗಳೇ ಬಲಿಯಾಗಿದ್ದರು. ಕೊಲೆ, ಮಾಡಿದ್ದಲ್ಲ ಮಾಡಿಸಿದ್ದು ಎಂದು ಗೊತ್ತಾದ ಮೇಲೆ, ಮಾಡಿಸಿದ್ದು ಯಾರು ? ಏಕೆ ? ಹೇಗೆ ? ಇದಕ್ಕೆ ಕಾರಣ ಶಿಕ್ಷಣದ ಜಡತೆಯೋ ? ಅಥವಾ ಶಿಷ್ಟತೆಯ ಕೊರತೆಯೋ ? ಎಂದು ಕಂಡುಹಿಡಿದು, ಮುಂದಾಗುವ ಕೊಲೆಯನ್ನು ತಡೆಹಿಡಿದು, ಅವನ ಪ್ರಾಜೆಕ್ಟ್ ಮುಗಿಸುವುದೇ ಕಥೆಯ ಆಶಯ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners