ಓ ಮನಸೇ ನಿನಗಾಗಿ ಎಂಬ ಈ ಒಂದು ಕವಿತೆಗಳನ್ನು ಒಳಗೊಂಡ ಸಣ್ಣ ಪುಸ್ತಕ, ಈ ಕವಿತೆಗಳನ್ನು ಬರೆಯಲು ಮುಖ್ಯ ಕಾರಣ ಇಂದಿನ ಯುವ ಪೀಳಿಗೆಗೆ ಸಾಹಿತ್ಯದ ಶಕ್ತಿಯನ್ನು ಪರಿಚಯಿಸಬೇಕೆಂಬುದೇ, ಈ ಪುಸ್ತಕದಲ್ಲಿ ಅನೇಕ ಕವಿತೆಗಳು ನನ್ನ ಜೀವನದಲ್ಲಿ ನಡೆದ ಅನೇಕ ಘಟನೆಗಳಿಂದ ಪ್ರೇರಿತನಾಗಿ ಬರೆದಿರುವಂಥದ್ದು ಈ ಕವಿತೆಗಳು ಎಷ್ಟೋ ಜನರ ಭಾವನೆಯನ್ನು ತಿಳಿಯಪಡಿಸುತ್ತದೆ ಎಂದು ಭಾವಿಸುತ್ತೇನೆ.ಮನಸಿದ್ದರೆ ಮಾರ್ಗ ಎಂಬ ಈ ಒಂದು ಕನ್ನಡ ಗಾದೆ ಎಷ್ಟೋ ಜನರ ಬದುಕನ್ನು ರೂಪಿಸಿದೆ ಅದೇ ರೀತಿ ಓ ಮನಸೇ ನಿನಗಾಗಿ ಎಂಬ ಈ ಕಿರು ಹೊತ್ತಿಗೆಯನ್ನು ಓದಿದ ನಂತರ ನಿಮ್ಮಲ್ಲಿ ಕೆಲವು ಯೋಚನೆಗಳು ಬಂದಿರಬಹುದು ಈ ಒಂದು ಪದ್ಯಗಳನ್ನು ರಚಿಸಲು ಹೆಚ್ಚು ಸಮಯ ಬೇಕಾಗಲಿಲ್ಲ ಏಕೆಂದರೆ ಭಾವನೆಗಳನ್ನು ಭಾಷೆಯಲ್ಲಿ ವ್ಯಕ್ತಪಡಿಸುವುದು ತುಂಬಾ ಸುಲಭ, ಒಂದೊಂದು ಪದ್ಯವು ಹಲವು ಅರ್ಥಗಳನ್ನು ಒಳಗೊಂಡಿದೆ ಮತ್ತು ತಮಗೆ ಬೇಕಾದಾಗ ಬೇಕಾಗುವ ರೀತಿಯಲ್ಲಿ ಅವು ಅವುಗಳ ಅರ್ಥ ಬದಲಾಗುತ್ತಿರುತ್ತದೆ ಏನಾದರೂ ಅದು ಒಳ್ಳೆಯದಕ್ಕೆ ಆಗುತ್ತದೆ ಎಂಬುದನ್ನು ನಾನು ನಂಬಿದ್ದೇನೆ.