‘ಪುಟ್ಟೀ’ ಪುಸ್ತಕಗಳು ಪುಟ್ಟ ಮಕ್ಕಳ ಸುತ್ತಲಿನ ಸೂಕ್ಷ್ಮ ಸಂವೇದನೆಗಳನ್ನು ಹೊತ್ತು ತರಲಿವೆ. ಪುಟ್ಟ ಮಕ್ಕಳ ಜಗತ್ತೇ ಒಂದು ವಿಶಿಷ್ಟವಾದುದು, ಸೊಗಸಿನದು. ಅದು ಪ್ರೀತಿ, ವಾತ್ಸಲ್ಯಗಳನ್ನ ತುಂಬಿಕೊಂಡುದು. ಪುಟ್ಟೀ ಕತೆಗಳು ನಮ್ಮ ಸುತ್ತಲಿನ ಮಕ್ಕಳಿಗಾಗಿ ; ನಮ್ಮೆಲ್ಲರ ಒಳಗಿನ ಮಗುವಿಗಾಗಿ !
ಆಕಾಶವಾಣಿಯಲ್ಲಿ ನಿರ್ದೇಶಕ ವೃತ್ತಿ ಮುಗಿಸುತ್ತ ಡಾ. ಆನಂದ ಪಾಟೀಲ ಅವರು ತಮ್ಮ ಒಲವಿನ ಕ್ಷೇತ್ರವಾದ ಮಕ್ಕಳ ಸಾಹಿತ್ಯವನ್ನು ಆಪ್ತವಾಗಿಸಿಕೊಂಡರು. ಕರ್ನಾಟಕದಲ್ಲಿ ವಾಸಿಸುವ ಅವರು ಕಳೆದ ೩೦ ವರ್ಷಗಳಿಂದ ಕನ್ನಡದಲ್ಲಿ ಸಾಧ್ಯವಾದ ಎಲ್ಲ ಬಗೆಗಳಲ್ಲಿ ಮಕ್ಕಳ ಸಾಹಿತ್ಯದಲ್ಲಿ ಸಾಧನೆ ಮಾಡುತ್ತ ಬಂದಿದ್ದಾರೆ. ಅವರು ಮಕ್ಕಳಿಗಾಗಿ ಕಾವ್ಯ, ಕತೆ, ಕಾದಂಬರಿ, ವಿಮರ್ಶೆ, ಅಧ್ಯಯನ ಹೀಗೆ ಎಲ್ಲ ವಿಧಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಕನ್ನಡ ಹಾಗೂ ಇಂಗ್ಲೀಷನಲ್ಲಿ ವಿದ್ವತ್ ಮಟ್ಟದ ಅಂತರ್ಜಾಲ ಪತ್ರಿಕೆ ಕೂಡ ತೋರುತ್ತಿದ್ದಾರೆ. ಅನೇಕ ರಾಷ್ಟ್ರ ಮಟ್ಟದ, ರಾಜ್ಯಮಟ್ಟದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡಿದ್ದಾರೆ. ಅನೇಕ ಪ್ರತಿಷ್ಠಿತ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ ಕೂಡ.