.ಅಬಲೆಯ ಬಲೆ- ಪತ್ತೇದಾರ ಜೋಡಿ ವಿಜಯ್ ವಿಕ್ರಮ್ ಮಿಸಿಂಗ್ ಲೇಡಿ ಕೇಸ್ ಕೈಗೆತ್ತಿಕೊಂಡು ದೊಡ್ಡ ಮನಿಲಾಂಡರಿಂಗ್, ಬ್ಯಾಂಕ್ ದುರ್ವಿನಿಯೋಗ ಹಗರಣ, ಬ್ಲಾಕ್ ಮೇಲ್ ಮುಂತಾದ ಗುಪ್ತ ಅಪರಾಧಗಳ ಶೋಧದಲ್ಲಿ ತೊಡಗಿ ಪ್ರಾಣಾಪಾಯವನ್ನೇ ಅನುಭವಿಸಬೇಕಾಗುತ್ತದೆ.
ನನ್ನ ಹೆಸರು ನಾಗೇಶ್ ಕುಮಾರ್ ಸಿ ಎಸ್ ಎಂದು. ಬೆಂಗಳೂರಿನವನಾಗಿ, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಕೆಲಸದಿಂದ ನಿವೃತ್ತನಾಗಿದ್ದೇನೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.
ನಾನು ಹವ್ಯಾಸಿ ಬರಹಗಾರ. ನನ್ನ ನಾಲ್ಕು ಕಾದಂಬರಿಗಳು, ಎರಡು ಕಥಾ ಸಂಕಲನ, ವೈಜ್ಞಾನಿಕ ಕತೆ ಮತ್ತು ಲೇಖನಗಳು ಆನ್ ಲೈನ್ ಮತ್ತು ಮುದ್ರಿತ ಪಸ್ತಕಗಳಾಗಿ ಪ್ರಕಟವಾಗಿವೆ. ಹಲವು ಕತೆ ಕಾದಂಬರಿಗಳು ಸುಧಾ ತರಂಗ ಉತ್ಥಾನ , ತುಷಾರ ಮುಂತಾದ ಪತ್ರಿಕಗಳಲ್ಲಿ ಬೆಳಕು ಕಂಡಿವೆ ಮೈಲ್ಯಾಂಗ್,ವಿವಿಡ್ಲಿಪಿ, ಪ್ರತಿಲಿಪಿ, ಪುಸ್ತಕ ಮುಂತಾದ ಕಡೆ ಇಪುಸ್ತಕ ಮತ್ತು ಆಡಿಯೋ ಪುಸ್ತಕವಾಗಿ ದೊರೆಯುತ್ತಿದೆ