ಭೂಮ್ಯಾಕಾಶ ಕವನ ಸಂಕಲನ ಒಟ್ಟು ೩೫ ಕವನಗಳ ಗುಚ್ಛ. ಇದರ ಪ್ರಮುಖ ಉದ್ದೇಶ ಮರೆಯಾಗುತ್ತಿರುವ ಕನ್ನಡ ಪದಗಳು ಸಾಮಾಜಿಕ ಮುಖ್ಯವಾಹಿನಿಗೆ ಮರಳಿ ಮನೆಮಾತಾಗಬೇಕು ಎಂಬುದಾಗಿದೆ.
ಕನ್ನಡ ಪ್ರೇಮದಿಂದ ಹೊರಡುವ ಓದಿನ ಹಾಯಿ, ಪ್ರೀತಿಯ ನದಿ ದಾಟಿ, ಜೀವನದ ಕಷ್ಟ ಕಾರ್ಪಣ್ಯಗಳನ್ನ ಅನುಭವಿಸಿ ಕೊನೆಗೆ ಪರಿಸರದ ಜಾಡು ಹಿಡಿದು ಕುಕ್ಕರಹಳ್ಳಿಯ ದಂಡೆ ತಲುಪುತ್ತದೆ. ಈ ಪುಸ್ತಕದ ಬಹುತೇಕ ಕವನಗಳು ನಾಲ್ಕು ಪಂಕ್ತಿ ಮತ್ತು ಪ್ರತಿ ಪಂಕ್ತಿಗೂ ನಾಲ್ಕು ಸಾಲುಗಳ ಶೈಲಿಯನ್ನು ಹೊಂದಿದ್ದರೂ ಸಹ ಕೆಲವು ಕವನಗಳ ವಿಶಿಷ್ಟ ರಚನೆ ಕಣ್ಸೆಳೆಯುತ್ತದೆ. ಉದಾಹರಣೆಗೆ ‘ಕನ್ನಡ ಕಾಗುಣಿತ’ ಕವನದಲ್ಲಿ ಕ ಅಕ್ಷರದ ಕಾಗುಣಿತವನ್ನು ಪ್ರತಿ ಸಾಲಿನ ಪ್ರಥಮ ಅಕ್ಷರವನ್ನಾಗಿ ಬಳಸಿ ರಚಿಸಿರುವುದು ವಿಶೇಷ.
ಈ ಪುಸ್ತಕದ ಸಾಲುಗಳಲ್ಲಿ ಪ್ರೀತಿಯು ಇದೆ, ಬದುಕುವ ಹಂಬಲವೂ ಇದೆ, ಬದುಕು ಏಕೆ ಎಂಬ ಜಿಜ್ಞಾಸೆಯು ಇದೆ.
ಇದು ಕೇವಲ ಕವನಗಳ ಪುಸ್ತಕವಲ್ಲ; ಇದು ಕನ್ನಡದ, ಜೀವನದ ಮತ್ತು ಭಾಷೆಯ ಸಂಭ್ರಮ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners