432 Hz ಪ್ರಕೃತಿಯ ಸಾಮರಸ್ಯದ ಸ್ವರಾವರ್ತನವಾಗಿದೆ. ಇದು ಬ್ರಹ್ಮಾಂಡದ ದೈವಿಕ ಅನುಪಾತ PHI (1.6180) ನೊಂದಿಗೆ ಕಂಪಿಸುತ್ತದೆ ಮತ್ತು ಜೀವಶಾಸ್ತ್ರ, DNA ಕೋಡ್ ಮತ್ತು ಪ್ರಜ್ಞೆಯೊಂದಿಗೆ ಬೆಳಕು, ಸಮಯ, ಸ್ಥಳ, ವಸ್ತು, ಗುರುತ್ವಾಕರ್ಷಣೆ ಹಾಗು ಕಾಂತೀಯತೆಯ ಗುಣಲಕ್ಷಣಗಳನ್ನು ಸಂಯೋಜಿಸುತ್ತದೆ. ಒಬ್ಬರು ಇದನ್ನು ತಮ್ಮ ಸ್ವ-ಧರ್ಮ ಕ್ಷೇತ್ರದಲ್ಲಿ ಅನುಷ್ಠಾನಿಸಿದರೆ ಅವರ ಮನೋದೈಹಿಕ (ಸೈಕೋಸೊಮ್ಯಾಟಿಕ್) ಚಲನಾತ್ಮಕತೆಯು ಪ್ರಕೃತಿಯ ಆವರ್ತನಕ್ಕೆ ಸಮೀಪಿಸಲು ಆರಂಭಿಸುತ್ತದೆ. ಈ ಸಮತೋಲನವು ಆ ವ್ಯಕ್ತಿಗೆ ಆರೋಗ್ಯದ ಜೊತೆಗೆ ವಿಕಾಸವನ್ನು ನೀಡಲಾರಂಭಿಸುತ್ತದೆ. ಹೀಗಾಗಿ, ಇವುಗಳನ್ನು ಋಷಿಗಳು ವೇದದ ಅಪೌರುಷೇಯ ಮಂತ್ರವಾಗಿ (1,000 ಸಂಖ್ಯೆಯಲ್ಲಿ) ಉದ್ಘೋಷಿಸಿದ್ದಾರೆ. ಈ ಮಂತ್ರಗಳನ್ನು ಹಾಗು ಸಂಬಂಧಿತ ಸ್ವರಗಳನ್ನು ಸಂಶೋದಿಸಿ ಅನುಷ್ಠಾನಕ್ಕೆ ಅನುಕೂಲವಾಗುವ ರೀತಿಯಲ್ಲಿ ಈ ಪುಸ್ತಕವನ್ನು ಬರೆಯಲಾಗಿದೆ.