You cannot edit this Postr after publishing. Are you sure you want to Publish?
Experience reading like never before
Sign in to continue reading.
10 Years of Celebrating Indie Authors
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಚೆನ್ನುಡಿ
" ಕಾಲಾಯ ತಸ್ಮೈ ನಮಃ " ಎಂಬುದು ಭರ್ತ್ರ್ ಹರಿ ಕವಿಯ ಉಕ್ತಿ. ಎಲ್ಲ ದೃಷ್ಟಿಗಳಿಂದಲೂ ಅರ್ಥಪೂರ್ಣವಾದದ್ದು. ಕಾಲಾಯ ಎಂಬುದನ್ನ ’ ಕಲಾಯ ’ ಎಂದು ಮಾರ್ಪಡಿಸಿಕೊಂಡರೂ ತಪ್ಪಲ್ಲ. ಕಾಲಕ್ಕೆ ತಕ್ಕಂತೆ ಕಲಾವತಾರಗಳು;
ಕವಿತಾ ಪ್ರಕಾರಗಳು !
ವರ್ತಮಾನ ಕಾಲ ಹನಿಗವನ(ಚುಟುಕು)ಗಳ ಯುಗ. ಒಂದು ಕಡೆ ಮಹಾಕಾವ್ಯಗಳು; ಇನ್ನೊಂದು ಕಡೆ ಅವುಗಳೊಂದಿಗೆ ಸ್ಪರ್ಧಿಸುವಂತೆ ಮಹಾ ’ವಾಕ್ಯ’, ಅರ್ಥಾತ್ ಚುಟುಕುಗಳಣ ಇಂಥ ಪದ್ಯದಪರಿಧಿಯೊಳಕ್ಕೆ ಲೇಖಕರ ಪ್ರಶಸ್ತ ಪ್ರವೇಶ !
ಚಕ್ರವ್ಯೂಹವ?? ಹೊಕ್ಕಿದ್ದಾರೆ, ಈ ಅಭಿಮನ್ಯು; ಅಷ್ಟು ಮೋಹಕವಾದದ್ದು, ಮಾರಕವಾದುದಲ್ಲ,ಬಿಂದು ಪದ್ಯ ಪ್ರಪಂಚ.
ಈ ಕವಿ ತಮ್ಮನ್ನು "ಅನಾಮಿಕ" ಎಂದು ವಿನಯಪೂರ್ವಕ ಕರೆದುಕೊಂಡಿದ್ದಾರೆ. ಅನಾಮಿಕ ಅಲ್ಲ, ಅನೇಕ ಮುಖ, ಅನನ್ಯಮುಖ ಎನ್ನಬಹುದು ! ಬದುಕಿನ ವೈಚಿತ್ರ್ಯ, ವೈವಿಧ್ಯಗಳು, ತಿರುವು, ಮುರುವು ಮರ್ಮಗಳು, ಪತ್ಯ, ಮಿಥ್ಯ, ಮಾಯೆಗಳು, ಸಿಹಿಕಹಿಗಳು, ಪ್ರಕೃತಿ ವಿಕೃತಿಗಳು ಇಲ್ಲಿನ ’ಹನಿ-ಕುಡಿ ಕವನ’ ಗಳಲ್ಲಿ ಪ್ರತಿಫಲಿತವಾಗಿವೆ. ಗಾಂಭೀರ್‍ಯ, ಹಾಸ್ಯ, ವಿಡಂಬನೆ, ಚಮತ್ಕಾರಗಳ
ಚದುರಂಗದಾಟವನ್ನು ಇಲ್ಲಿ ಕಂಡು ವಿ’ಸ್ಮಿತ’ರಾಗುತ್ತೇವೆ !
ದಿಟ, ಕೆಲವು ರಚನೆಗಳು ಪ್ರಾಸಗಳ ಹಾಸಿಗೆ ಬಲಿಯಾಗಿವೆ; ಆದರೆ ಬಹುತೇಕ ಮುಕ್ತಕಗಳು ಪ್ರಾಸ ’ಮುಕ್ತ’ವಾಗಿ ಉತ್ತಮಿಕೆಯ ಕಡೆಗೆ ಹಸ್ತಚಾಚಿವೆ ಎಂಬುದನ್ನು ಒಪ್ಪಬೇಕು !
ಒಟ್ಟಿನ ಮೇಲೆ ಇಲ್ಲುಂಟು ಆಸ್ವಾದ್ಯವಾದ, ಯಾವುದೂ ಅಸಾಧ್ಯವೆನಿಸದ ಕವನ ಪರಂಪರೆ. ಸಾಮಾನ್ಯವಾದ, ಅಂತೆಯೆ ಮಾನ್ಯ ರೋಚಕವಾದ ಹನಿಗಳು ಇಲ್ಲಿ ಮನೆ ಮಾಡಿವೆ. ಮತ್ತೊಂದು ಗಮನಾರ್ಹ ಅಂಶ; ಇಲ್ಲಿ ಸಮಕಾಲೀನತೆಯಿದೆ; ಅದಕ್ಕನುಗುಣವಾಗಿ ಭಾಷೆಯ ಮೇಲೆ ಹಿಡಿತವಿದೆ.
ಹಿಂದು ಇಂದುಗಳನ್ನು ಧ್ವನಿಸುವ ಒಂದೇ ಒಂದು ಪದ್ಯವನ್ನು ಉದ್ದರಿಸಿ ಮುಗಿಸಬಹುದು :
ಸತ್ಯ, ಅಹಿಂಸೆ, ಧರ್ಮ
ಹಿಂದಿನವರ ಗಳಿಕೆ
ಇಂದಿಗೆ ಅವೆಲ್ಲ
ಕೇವಲ ಪಳೆಯುಳಿಕೆ !
ಪೂರ್ತಿ ’ ಪಳೆಯುಳಿಕೆ ’ ಯಲ್ಲದ, ಫಳಫಳಿಸುವ ಕವನಸರಣಿಯನ್ನು ಕೊಟ್ಟಿರುವ ಕವಿಗೆ ಅಭಿನಂದನೆಗಳು. ಈ ಪ್ರಗತಿಪರತೆ , ಫಸಲು ಹೆಚ್ಚಲಿ ; ಸಹೃದಯ ರಸಿಕರಿಗೆ ಮೆಚ್ಚಾಗಲಿ !
ಡಾ || ಸಿ.ಪಿ.ಕೆ.
೨೩-೦೪-೨೩
"ವಿದ್ಯಾಸ್ವರೂಪ್"
ಅನಾಮಿಕ !!
ಪ್ರಾಣಿ, ಪಕ್ಷಿಗಳಿಗಿಲ್ಲ ಹೆಸರು. ಗಿಡ ಮರಗಗಳಿಗಿಲ್ಲ ಹೆಸರು.
ಹೂವು, ಹಣ್ಣುಗಳಿಗಿಲ್ಲ ಹೆಸರು. ಬೆಟ್ಟ, ಗುಡ್ಡಗಳಿಗಿಲ್ಲ ಹೆಸರು.
ಊರು, ಕೇರಿ, ಹಾದಿ, ಬೀದಿ, ನದಿ, ವನ ಹೀಗೆ ಎಲ್ಲದಕ್ಕೂ
ಹೆಸರಿಟ್ಟವ ಮಾನವ, ತಾನು ಗುರುತಿಸುವಿಕೆ ಸುಲಭ
ಮಾಡಿಕೊಳ್ಳಲು.
ಸಂಗೀತಕ್ಕೆ ತಾನ್ ಸೇನ್, ನೃತ್ಯಕ್ಕೆ ಶಾಂತಲೆ,
ಶಿಲ್ಪಿಗೆ ಜಕಣಾಚಾರಿ, ಚಿತ್ರಕಲೆಗೆ ಮೈಕೆಲೇಂಜಾಲೊ
ಹೀಗೆ ಯಾವುದದಾರೂ ಸಾಧನೆಯೊಡನೆ ಗುರುತಿಸಿ
ಶಾಶ್ವತ ನೆಲೆ ಕಂಡುಕೊಳ್ಳುವಂತಿರಬೇಕು ಹೆಸರು.
ಜಾತಕದಲ್ಲಿ ಕೂಡಿಬಂದದ್ದು, ಪೋಷಕರು ಇಟ್ಟಿದ್ದು,
ಗೆಳೆಯರು ಗೇಲಿಗೆ ಕರೆದದ್ದು, ಇನ್ಯಾವುದೋ ಕಾರಣಕ್ಕೆ
ಸಮಾಜ ಬಲವಂತವಾಗಿ ಹೇರಿದ ಅಡ್ಡಹೆಸರುಗಳ್ಯಾವುವು
ನನ್ನ ಅನ್ವರ್ಥನಾಮವಲ್ಲ !!
ಈ ಸ್ಥಿತಿಯಲ್ಲಿ, ಇದ್ಯಾವುದರ ನೆಲೆಗಟ್ಟಿನಲ್ಲಿ ತಳುಕು
ಹಾಕಿಕೊಳ್ಳದೇ ಉಳಿಯಲಿಚ್ಚಿಸುವ ನಾನು -
ಅನಾಮಧೇಯ !!
The items in your Cart will be deleted, click ok to proceed.