ಏಕೋತ್ತರ ಶತಸ್ಥಲ ಸಾರಾಮೃತ ಮುಖ್ಯವಾಗಿ ಅಲ್ಲಮಪ್ರಭು, ಬಸವೇಶ್ವರರು ಹಾಗೂ ಚನ್ನಬಸವಣ್ಣ ಮೊದಲಾದ ಶರಣರು ರಚಿಸಿದ ಬೆಡಗಿನ ವಚನಗಳಿಗೆ ಟೀಕು ಕೊಡಲಾದ ತತ್ತ್ವ ಗ್ರಂಥ. ಈ ವಚನಗಳನ್ನು ಸಂಪಾದಿಸಿ ಸಂಗ್ರಹ ರೂಪ ಕೊಟ್ಟ ಕೀರ್ತಿ ಕಟ್ಟಿಗೆಹಳ್ಳಿ ಸಿದ್ಧಲಿಂಗ ಸ್ವಾಮಿಗಳದು. ಈ ಸಂಪಾದನೆಯು ಗೂಳೂರು ಸಿದ್ಧವೀರಣ್ಣೊಡೆಯರ ಶೂನ್ಯ ಸಂಪಾದನೆಯನ್ನು ಆಧರಿಸಿದೆ ಹಾಗೂ ಗೂಢ ತಾತ್ತ್ವಿಕ ಚಿಂತನೆಯ ವಿವರಣಾತ್ಮಕ ಟೀಕೆಯನ್ನು ಒದಗಿಸಿದೆ.
ಈ ಕೃತಿಯ ಪ್ರಾರಂಭ ಅಲ್ಲಮಪ್ರಭುಗಳ ವಚನದಿಂದ ಆಗಿದೆ. ನಾಡಿನ ಶರಣರ ನೇರ ಹಾಗೂ ಜಾಣ್ಮೆಯ ನುಡಿಗಟ್ಟುಗಳು ಗೂಢಾರ್ಥಸ್ವರೂಪವಾಗಿದ್ದ ಕಾರಣ ಅದರ ಮರ್ಮವನ್ನರಿಯಲು ಟೀಕಾ ಗ್ರಂಥದ ಅಗತ್ಯ ಬಿದ್ದಿತು.
ಇದು ಪಿಂಡಸ್ಥಲದಿಂದ ಪ್ರಾರಂಭವಾಗಿ ನೂರೊಂದನೆಯ ಜ್ಞಾನಶೂನ್ಯಸ್ಥಲದಲ್ಲಿ 393 ನೇ ವಚನದಿಂದ ಮುಕ್ತಾಯಗೊಳ್ಳುವ ಶಿವಾನುಭವ ಗ್ರಂಥ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners