ಐ ಅಮ್ 22
ಪ್ರತಿಯೊಬ್ಬರ ಜೀವನದಲ್ಲಿ ಬಹಳಷ್ಟು ಮರೆಯಲಾರದಂತಹ ಸನ್ನಿವೇಶಗಳು ನಡೆದಿರುತ್ತದೆ. ಅಂತಹ ಸನ್ನಿವೇಶಗಳನ್ನು ಅಥವಾ ಆ ಸಂದರ್ಭವನ್ನು ನಾವು ಎಂದಿಗೂ ಮರೆಯುವುದಿಲ್ಲ. ಸಿಹಿಯಾಗಿರಲಿ ಕಹಿಯಾಗಿರಲಿ ಪ್ರತಿಯೊಂದು ಘಟನೆಯೂ ನಮಗೆ ವಿಶೇಷವಾದ ಅನುಭವಗಳನ್ನು ತರುತ್ತದೆ. ಪ್ರತಿಯೊಂದು ಘಟನೆಯೂ ನಮಗೆ ವಿಭಿನ್ನವಾದ ಪಾಠವನ್ನು ಕಲಿಸಿರುತ್ತದೆ. ಖುಷಿಯಾದ ಸಂದರ್ಭಗಳು ಆನಂದ ಬಾಷ್ಪವನ್ನುಂಟು ಮಾಡಿದರೆ, ದುಃಖದ ಸಂದರ್ಭಗಳು ಕಣ್ಣೀರನ್ನು ಉಂಟುಮಾಡುತ್ತದೆ. ಹಳೆಯದನ್ನು ಮರೆಯದೇ ಕಲಿತಿದ್ದ ಪಾಠವನ್ನು ನೆನಪಿನಲ್ಲಿಟ್ಟುಕೊಂಡು ಮುಂದೆ ಬರುವ ಸವಾಲುಗಳನ್ನು ಎದುರಿಸುವುದೆ ಜೀವನ.
ಐ ಅಮ್ 22, ಎಂಬುವುದು ಲೇಖಕಿಯ ಜೀವನದಲ್ಲಿ ನಡೆದ ಕೆಲವು ಮರೆಯಲಾರದಂತಹ ಘಟನೆಗಳನ್ನು ಜೀವಂತವಾಗಿಸಲು ಈ ಪುಸ್ತಕದ ಮೂಲಕ ಪ್ರಯತ್ನಿಸಿದ್ದಾರೆ. ಲೇಖಕಿಯು ತಮ್ಮ ಜೀವನದ ಘಟನೆಗಳನ್ನು ಕವಿತೆಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಪುಸ್ತಕವು 22 ಕವಿತೆಗಳನ್ನು ಒಳಗೊಂಡ ಲೇಖಕಿಯ ಜೀವನದಲ್ಲಿ ನಡೆದಂತಹ ಸನ್ನಿವೇಶವನ್ನು ಸವಿವಿಸ್ತಾರವಾಗಿ ವರ್ಣಿಸಿದ್ದಾರೆ. ಈ ಪುಸ್ತಕವನ್ನು ಲೇಖಕಿಯು ತಮ್ಮ 22ನೇ ವರ್ಷದ ಹುಟ್ಟುಹಬ್ಬದ ದಿನದಂದು ಬಿಡುಗಡೆ ಮಾಡುತ್ತಿರುವುದು ಇದರ ವಿಶೇಷ. ಲೇಖಕಿಗೆ ಕನ್ನಡದ ಮೇಲೆ ಬಹಳ ಅಭಿಮಾನವಿರುವುದರಿಂದ ತಮ್ಮ ಮೊದಲನೇ ಪುಸ್ತಕ ಕನ್ನಡದಲ್ಲಿ ಇರಬೇಕೆಂದು ಇಚ್ಚಿಸಿ. ಅವರು ಈ ಪ್ರಯತ್ನವನ್ನು ಮಾಡಿದ್ದಾರೆ.