ಭಾರತೀಯ ಮುಸ್ಲಿಂರ ನಡೆ : ಉಜ್ವಲ ಭವಿಷ್ಯದ ಕಡೆಯ ಪುಸ್ತಕವು ಮುಸ್ಲಿಂರಿಗೆ ಸಂಬಧಿಸಿದ ಹಲವಾರು ಸಮಸ್ಯೆಗಳ ಮೇಲೆ ಪ್ರಭಾವ ಬೀರುತ್ತದೆ. ಅವುಗಳೆಂದರೆ:
• ಭಾರತೀಯ ಮುಸ್ಲಿಂರು ಒಟ್ಟಾರೆಯಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಏಕೆ ಹಿಂದುಳಿದಿದ್ದಾರೆ? ಇದನ್ನು ಪರಿಹರಿಸಲು ಏನು ಮಾಡಬಹುದು?
• ಭಾರತೀಯ ಮುಸಲ್ಮಾನರ ಇಂದಿನ ಸ್ಥಿತಿಗತಿಗಳಿಗೆ ಮುಸ್ಲಿಂ ಧಾರ್ಮಿಕ ಮತ್ತು ರಾಜಕೀಯ ನಾಯಕರು ಎಷ್ಟು ಹೊಣೆಗಾರರು?
• ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ಸನ್ನಿವೇಶಕ್ಕೆ ಭಾರತೀಯ ಮುಸ್ಲಿಂರು ಹೇಗೆ ಸಂಬಧಿಸುತ್ತಾರೆ?
• ಭಾರತದ ಮುಸ್ಲಿಂರು ದೇಶದ ಇತರ ಸಮುದಾಯಗಳ ಜನರ ಅಭಿಮಾನವನ್ನು ಹೇಗೆ ಗಳಿಸಬಹುದು? ಅಂತರ ಸಮುದಾಯದ ಸಾಮರಸ್ಯವನ್ನು ಉತ್ತೇಜಿಸಲು ಅವರು ಮಾಡಬಹುದಾದ ಕೆಲವು ಪ್ರಾಯೋಗಿಕ ಕಾರ್ಯಗಳು ಯಾವುವು?
ಈ ಪುಸ್ತಕವು ಪ್ರಸ್ತುತ ಸಂದರ್ಭದಲ್ಲಿ ಭಾರತದ ಮುಸಲ್ಮಾನರ ಮುಂದಿನ ಉಜ್ವಲ ಭವಿಷ್ಯದ ಕಡೆಗೆ ಎಂಬುದರ ಬಗ್ಗೆ ಹೇಳುತ್ತದೆ. ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸುವಾಗ ಇಡೀ ದೇಶದ ಮತ್ತು ವಿಶಾಲ ಸಮಾಜದ ಸಾಮಾನ್ಯ ಒಳಿತಿಗಾಗಿಯೂ ಕೊಡುಗೆ ನೀಡುವಂತೆ ಈ ಪುಸ್ತಕ ಅವರಿಗೆ ಮನವಿ ಮಾಡುತ್ತದೆ. ದೇಶದ ಇತರ ಸಮುದಾಯಗಳಂತೆ, ಭಾರತದ ಮುಸ್ಲಿಂರಿಗೆ, ಈ ದೇಶವು ಅವರ ತಾಯ್ನಾಡು, ಅದುದರಿಂದ ಶಾಂತಿಯುತ ಸಹಬಾಳ್ವೆಯ ಕಲೆಯನ್ನು ಅಭ್ಯಾಸ ಮಾಡಬೇಕೆಂಬುದೇ ಪುಸ್ತಕದ ಮುಖ್ಯ ಅಂಶವಾಗಿದೆ. “ದೇವರು, ಅವರೆಲ್ಲರಿಗೂ ಇಲ್ಲಿ ಕೂಡಿ ಬಾಳಲು ನಿಗದಿಪಡಿಸಿದ್ದಾರೆ” ಎಂದು ಪ್ರತಿಯೊಬ್ಬರು ಹೇಳಬಹುದು ಎಂದು ಲೇಖಕರು ವಿವರಿಸಿದ್ದಾರೆ.