ಈ ಪುಸ್ತಕವು ಹನ್ನೆರಡು ವಿಭಿನ್ನ ಚಾರಣ/ಪ್ರಯಾಣ ಕಥನಗಳನ್ನು ಹೊಂದಿದೆ. ಹಾದಿಗುಂಟ ಕಂಡ, ಕೇಳಿದ ಹಾಗೂ ಅನುಭವಿಸಿದ ವಿಷಯಗಳ ಬರಹ ರೂಪವು ಇಲ್ಲಿ ಕಂಡುಬರುತ್ತದೆ. ಚಾರಣದ ಹಾಗೂ ಪ್ರಯಾಣದ ಸಮಯದಲ್ಲಿ ಗಮ್ಯ ತಲುಪುವ ಧಾವಂತದಲ್ಲಿ ಹಲವು ಪ್ರಮುಖ ದೃಶ್ಯಗಳನ್ನು ಮತ್ತು ವಿಷಯಗಳನ್ನು ನಾವು ಕಂಡು ಕೇಳರಿಯದೆ ಇದ್ದು ಬಿಡುತ್ತೇವೆ. ಅವೆಲ್ಲವನ್ನೂ ದಾಖಲಿಸುವ ಪ್ರಯತ್ನ ಈ ಪುಸ್ತಕ.