ಶಾಮ್ ಎನ್ನುವ ಇಂಜಿನಿಯರ್ ತನ್ನ ಕೆಲಸ ಮುಗಿಸಿ ಅರವತ್ತು ಮೈಲಿ ದೂರದಲ್ಲಿರುವ ತನ್ನ ಊರು ಮೈಸೂರಿಗೆ ಹೊರಡುತ್ತಾನೆ. ಅದು ಅಮಾವಾಸ್ಯೆಯ ದಿನ. ಧೋಧೋ ಎನ್ನುವ ಮಳೆ ಬೇರೆ ಹಿಡಿದಿರುತ್ತದೆ. ಕಂಪೆನಿಯ ಮ್ಯಾನೇಜರ್ ಇಂತಾ ಪರಿಸ್ಥಿತಿಯಲ್ಲಿ ಪ್ರಯಾಣ ಬೇಡ ಎಂದು ಎಚ್ಚರಿಸುತ್ತಾನೆ. ಮೈಸೂರಿನ ದಾರಿಯ ಮೂವತ್ತೈದನೆ ಮೈಲಿಕಲ್ಲಿನಲ್ಲಿ ಅನಿಷ್ಟಗಳು ಘಟನೆಗಳು ಸಂಭವಿಸಿವೆ. ಇಂದು ಪ್ರಯಾಣ ಬೇಡ ಎಂದು ಎಚ್ಚರಿಸಿದರೂ ಶಾಮ್ ಕಾರಿನಲ್ಲಿ ಹೊರಡುತ್ತಾನೆ. ಆ ಹುಚ್ಚು ಮಳೆಯಲ್ಲಿ ಪ್ರಯಾಣ ಪ್ರಯಾಸವಾಗುತ್ತದೆ. ಮೂವತ್ತೈದನೆಯ ಮೈಲಿಕಲ್ಲಿನ ಬಳಿ ಕಾರು ನಿಂತೇ ಹೋಗುತ್ತದೆ. ಮಿಂಚಿನ ಬೆಳಕಲ್ಲಿ ಸುಂದರ ಯುವತಿಯೊಬ್ಬಳು ಕಾಣಿಸುತ್ತಾಳೆ…ಶಾಮ್ ಸಮ್ಮೋಹಿನಿಗೆ ಒಳಗಾದಂತಾಗುತ್ತದೆ…ಮುಂದೆ..ಆಗಬಾರದ್ದು ಆಗಿಯೇತೀರುತ್ತದೆ…!