Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Pal
"ನಾನಲ್ಲದ ನಾನು" ಒಂದು ವಿಶಿಷ್ಟ, ಕುತೂಹಲಭರಿತ ಕಾದಂಬರಿ. ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ವಿವೇಕ್ ಒಂದು ರಾತ್ರಿ ಎದ್ದಾಗ ತಾನು ಯಾವುದೋ ಅಪರಿಚಿತ ಜಾಗದಲ್ಲಿ ಮಲಗಿರುವೆ ಎನಿಸುತ್ತದೆ! ಪಕ್ಕದಲ್ಲಿ ಹೆಂಗಸೊಬ್
"ನಾನಲ್ಲದ ನಾನು" ಒಂದು ವಿಶಿಷ್ಟ, ಕುತೂಹಲಭರಿತ ಕಾದಂಬರಿ. ಹಿಂದಿ ಚಿತ್ರರಂಗದ ಸೂಪರ್ ಸ್ಟಾರ್ ವಿವೇಕ್ ಒಂದು ರಾತ್ರಿ ಎದ್ದಾಗ ತಾನು ಯಾವುದೋ ಅಪರಿಚಿತ ಜಾಗದಲ್ಲಿ ಮಲಗಿರುವೆ ಎನಿಸುತ್ತದೆ! ಪಕ್ಕದಲ್ಲಿ ಹೆಂಗಸೊಬ್ಬಳು ಮಲಗಿರುತ್ತಾಳೆ! ಗಾಬರಿಯಾಗುತ್ತಾನೆ! ತಾನು ಮದುವೆಯಾದ ನೆನಪೇ ಬರುವುದಿಲ್ಲ! ತಾನು ಸಿನಿಮಾ ನಟನೂ ಅಲ್ಲ ಎನಿಸುತ್ತಿದೆ. ತಾನು ಯಾರು? ಈ ಜಾಗ ಯಾವುದು? ತನ್ನ ಅಸಲಿ ರೂಪ ಬೇರೇನೋ ಇದೆ ಎನ್ನುವ ಭಾವನೆ ತೀವ್ರವಾಗಿ ಕಾಡುತ್ತದೆ. ತಾನು ಯಾರೆಂದು ತಿಳಿಯುವ ಅಪಾಯಕಾರಿ ಶೋಧನೆಗೆ ತೊಡಗುತ್ತಾನೆ! ಪರಿಣಾಮ ವಿಚಿತ್ರವಾಗಿರುತ್ತದೆ. ಹತ್ತಾರು ಅಪಾಯಕಾರಿ ಜನರನ್ನು ಎದುರಿಸಬೇಕಾಗುತ್ತದೆ! ಕೊನೆಯಲ್ಲಿ ತಾನಾರು ಎನ್ನುವುದು ತಿಳಿಯುತ್ತದೆ!
ಶಾಮ್ ಎನ್ನುವ ಇಂಜಿನಿಯರ್ ತನ್ನ ಕೆಲಸ ಮುಗಿಸಿ ಅರವತ್ತು ಮೈಲಿ ದೂರದಲ್ಲಿರುವ ತನ್ನ ಊರು ಮೈಸೂರಿಗೆ ಹೊರಡುತ್ತಾನೆ. ಅದು ಅಮಾವಾಸ್ಯೆಯ ದಿನ. ಧೋಧೋ ಎನ್ನುವ ಮಳೆ ಬೇರೆ ಹಿಡಿದಿರುತ್ತದೆ. ಕಂಪೆನಿಯ ಮ್ಯಾನೇಜರ್ ಇಂತ
ಶಾಮ್ ಎನ್ನುವ ಇಂಜಿನಿಯರ್ ತನ್ನ ಕೆಲಸ ಮುಗಿಸಿ ಅರವತ್ತು ಮೈಲಿ ದೂರದಲ್ಲಿರುವ ತನ್ನ ಊರು ಮೈಸೂರಿಗೆ ಹೊರಡುತ್ತಾನೆ. ಅದು ಅಮಾವಾಸ್ಯೆಯ ದಿನ. ಧೋಧೋ ಎನ್ನುವ ಮಳೆ ಬೇರೆ ಹಿಡಿದಿರುತ್ತದೆ. ಕಂಪೆನಿಯ ಮ್ಯಾನೇಜರ್ ಇಂತಾ ಪರಿಸ್ಥಿತಿಯಲ್ಲಿ ಪ್ರಯಾಣ ಬೇಡ ಎಂದು ಎಚ್ಚರಿಸುತ್ತಾನೆ. ಮೈಸೂರಿನ ದಾರಿಯ ಮೂವತ್ತೈದನೆ ಮೈಲಿಕಲ್ಲಿನಲ್ಲಿ ಅನಿಷ್ಟಗಳು ಘಟನೆಗಳು ಸಂಭವಿಸಿವೆ. ಇಂದು ಪ್ರಯಾಣ ಬೇಡ ಎಂದು ಎಚ್ಚರಿಸಿದರೂ ಶಾಮ್ ಕಾರಿನಲ್ಲಿ ಹೊರಡುತ್ತಾನೆ. ಆ ಹುಚ್ಚು ಮಳೆಯಲ್ಲಿ ಪ್ರಯಾಣ ಪ್ರಯಾಸವಾಗುತ್ತದೆ. ಮೂವತ್ತೈದನೆಯ ಮೈಲಿಕಲ್ಲಿನ ಬಳಿ ಕಾರು ನಿಂತೇ ಹೋಗುತ್ತದೆ. ಮಿಂಚಿನ ಬೆಳಕಲ್ಲಿ ಸುಂದರ ಯುವತಿಯೊಬ್ಬಳು ಕಾಣಿಸುತ್ತಾಳೆ…ಶಾಮ್ ಸಮ್ಮೋಹಿನಿಗೆ ಒಳಗಾದಂತಾಗುತ್ತದೆ…ಮುಂದೆ..ಆಗಬಾರದ್ದು ಆಗಿಯೇತೀರುತ್ತದೆ…!
ಮದುವೆಯಾಗಿ ಒಂದು ವರ್ಷ ಕಳೆದಿದ್ದ ಮಡದಿ ಪ್ರತಿದಿನವೂ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು, ಪತಿಗೆ ತಿಳಿಯದಂತೆ ಎಲ್ಲಿಗೋ ಹೋಗಿ ಒಂದು ಗಂಟೆಯ ನಂತರ ವಾಪಸ್ಸು ಬಂದು, ಏನೂ ಆಗಿಲ್ಲದಂತೆ ಮಲಗುತ್ತಿದ್ದರೆ ಪಾಪ ಆ ಪ
ಮದುವೆಯಾಗಿ ಒಂದು ವರ್ಷ ಕಳೆದಿದ್ದ ಮಡದಿ ಪ್ರತಿದಿನವೂ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು, ಪತಿಗೆ ತಿಳಿಯದಂತೆ ಎಲ್ಲಿಗೋ ಹೋಗಿ ಒಂದು ಗಂಟೆಯ ನಂತರ ವಾಪಸ್ಸು ಬಂದು, ಏನೂ ಆಗಿಲ್ಲದಂತೆ ಮಲಗುತ್ತಿದ್ದರೆ ಪಾಪ ಆ ಪತಿರಾಯನಿಗೆ ಏನೆನ್ನಿಸಬೇಕು? ಆ ರಹಸ್ಯ ಹುಡುಕಲು ಪಣತೊಟ್ಟು ಪ್ರಯತ್ನಿಸ ಹೊರಟ ಪತಿಗೆ, ಹತ್ತಾರು ವಿಚಿತ್ರವೆನಿಸುವ ಘಟನೆಗಳು ಎದುರಾಗುತ್ತವೆ! ಜೀವಕ್ಕೆ ಮುಳುವಾಗುವ ಸಂದರ್ಭಗಳಿಗೂ ಈಡಾಗುತ್ತಾನೆ!
ಕೊನೆಗೂ ಆ ರಹಸ್ಯದ ಅನಾವರಣವಾದಾಗ ಭಯ, ವಿಸ್ಮಯಗಳಿಂದ ಪತಿ ಮೂಕನಾಗುತ್ತಾನೆ! ಕೊನೆಯ ಪದದವರೆಗೂ ನಿಮ್ಮನ್ನು ಈ ಕಾದಂಬರಿ ತುದಿಗಾಲಲ್ಲಿ ನಿಲ್ಲಿಸುವುದು!
ಕೊಡವರ ಸಂಪ್ರದಾಯಸ್ಥ, ಶ್ರೀಮಂತ ಕುಟುಂಬದ ಸುಂದರಿ ತನ್ನ ಮದುವೆಯ ಹಿಂದಿನ ದಿನ ವಿಚಿತ್ರ ರೀತಿಯಲ್ಲಿ ಅದೃಶ್ಯಳಾಗುತ್ತಾಳೆ! ಮನೆಮಂದಿಗೆ ಧಿಗ್ಬ್ರಮೆ! ಷಾಕ್! ಅಂತಾ ವಿಚಿತ್ರಕ್ಕೆ ಕಾರಣ ಯೋಚಿಸುವಲ್ಲಿ ಮನೆಯವರು
ಕೊಡವರ ಸಂಪ್ರದಾಯಸ್ಥ, ಶ್ರೀಮಂತ ಕುಟುಂಬದ ಸುಂದರಿ ತನ್ನ ಮದುವೆಯ ಹಿಂದಿನ ದಿನ ವಿಚಿತ್ರ ರೀತಿಯಲ್ಲಿ ಅದೃಶ್ಯಳಾಗುತ್ತಾಳೆ! ಮನೆಮಂದಿಗೆ ಧಿಗ್ಬ್ರಮೆ! ಷಾಕ್! ಅಂತಾ ವಿಚಿತ್ರಕ್ಕೆ ಕಾರಣ ಯೋಚಿಸುವಲ್ಲಿ ಮನೆಯವರು ಹೈರಾಣಾಗುತ್ತಾರೆ! ಆ ದಿನ ಹುಚ್ಚು ಮಳೆ! ಇಡೀ ಕೊಡಗನ್ನೇ ಅಲ್ಲೋಲ ಕಲ್ಲೋಲ ಮಾಡುವಂತ ರಣ ಮಳೆ! ಘಟನೆ ನಡೆಯುವುದು ಕಾಡಿನ ಮಧ್ಯದ ವಂಶದ ಐನ್ಮನೆಯಲ್ಲಿ!! ಸುತ್ತ ಕಾಡು, ಮುಖ್ಯ ರಸ್ತೆಗೆ ಕಾಡು ದಾರಿ! ಕಥಾನಾಯಕಿ ಅದೃಶ್ಯ! ಸಮಸ್ಯೆ ಗಾಢವಾಗುತ್ತದೆ. ಘಟನೆ ನೂರು ಸಾಧ್ಯತೆಗಳಿಗೆ ಕಾರಣವಾಗುತ್ತದೆ!! ಆ ಸಾಧ್ಯತೆಗಳನ್ನು ಕಾದಂಬರಿ ವಿಶ್ಲೇಷಿಸುತ್ತಾ ಕಥಾನಾಯಕಿಯನ್ನು ಮುಂದೆ ಅನಾವರಣಗೊಳಿಸುತ್ತದೆ.
ಸಾಮಾನ್ಯರ ಬದುಕಿನಲ್ಲಿ ನಡೆಯುವ ಒಂದು ಸಣ್ಣ ಘಟನೆ ಅಲ್ಲೋಲಕಲ್ಲೋಲವನ್ನುಂಟು ಮಾಡಿ, ಬದುಕನ್ನೇ ಬುಡಮೇಲು ಮಾಡುವುದರ ಜೊತೆಗೆ ಅಸಹಜ ಆಸೆಗಳನ್ನು ಬಿತ್ತುತ್ತವೆ! ಕೊನೆಗೆ ಆ ಆಸೆಗಳು, ಅಮಿಷಗಳು ಸಾಕಾರಗೊಳ್ಳುತ್ತ
ಸಾಮಾನ್ಯರ ಬದುಕಿನಲ್ಲಿ ನಡೆಯುವ ಒಂದು ಸಣ್ಣ ಘಟನೆ ಅಲ್ಲೋಲಕಲ್ಲೋಲವನ್ನುಂಟು ಮಾಡಿ, ಬದುಕನ್ನೇ ಬುಡಮೇಲು ಮಾಡುವುದರ ಜೊತೆಗೆ ಅಸಹಜ ಆಸೆಗಳನ್ನು ಬಿತ್ತುತ್ತವೆ! ಕೊನೆಗೆ ಆ ಆಸೆಗಳು, ಅಮಿಷಗಳು ಸಾಕಾರಗೊಳ್ಳುತ್ತವೆಯೇನು? ಬದುಕು ಮತ್ತೆ ಮೊದಲಿನ ಹಳಿಗೆ ಮರಳುವುದೇನು? ಇಂತ ಹತ್ತಾರು ಆಯಾಮಗಳನ್ನು ಪ್ರಸ್ತುತ ಕಾದಂಬರಿ ಅನ್ವೇಷಣೆ ಮಾಡುತ್ತದೆ. ಜೊತೆಗೆ ಅನೇಕ ಕುತೂಹಲಕಾರಿ ತಿರುವುಗಳೊಂದಿಗೆ ನಿಮ್ಮ ಕುತೂಹಲವನ್ನು ಹಿಡಿದಿಡುತ್ತಲೇ.. ರಂಜಿಸುತ್ತದೆ.
ಶ್ರೀಮಂತ ಯಶವಂತರಾಯರು ಸತ್ತಾಗ ಅದು ಯಾರಿಗೂ ಕೊಲೆ ಎನಿಸಿರಲಿಲ್ಲ. ಅದು ಕೊಲೆ ಎಂಬ ಮೂಕರ್ಜಿ ಪೋಲೀಸರಿಗೆ ಸಿಗುತ್ತದೆ. ಪೋಲೀಸರು ಶವ ಪರೀಕ್ಷೆಗೆ ಸಮಾಧಿ ತೆಗೆದಾಗ ಅಲ್ಲಿ ಶವ ನಾಪತ್ತೆಯಾಗಿರುತ್ತದೆ. ಯಾರಾದರೂ
ಶ್ರೀಮಂತ ಯಶವಂತರಾಯರು ಸತ್ತಾಗ ಅದು ಯಾರಿಗೂ ಕೊಲೆ ಎನಿಸಿರಲಿಲ್ಲ. ಅದು ಕೊಲೆ ಎಂಬ ಮೂಕರ್ಜಿ ಪೋಲೀಸರಿಗೆ ಸಿಗುತ್ತದೆ. ಪೋಲೀಸರು ಶವ ಪರೀಕ್ಷೆಗೆ ಸಮಾಧಿ ತೆಗೆದಾಗ ಅಲ್ಲಿ ಶವ ನಾಪತ್ತೆಯಾಗಿರುತ್ತದೆ. ಯಾರಾದರೂ ಶವವನ್ನು ಏಕೆ ಅಪಹರಿಸುತ್ತಾರೆ ಎನ್ನುವುದು ಯಶವಂತರಾಯರ ಮನೆಯವರಿಗೆ ಅಪಶಕುನದಂತೆ ಕಾಣಿಸುತ್ತದೆ. ಯಾವ ಕಾರಣಕ್ಕಾಗಿ ಶವ ಅಪಹರಿಸಿದ್ದಾರೆ ಎಂದು ತಿಳಿಯಲು ಸಾಧ್ಯವಾಗದೆ ಸೋತು ಸುಣ್ಣವಾಗುತ್ತಾರೆ. ಯಶವಂತರಾಯರ ಅಳಿಯ ಮೂರ್ತಿ ಡಿಟೆಕ್ಟೀವ್ ವಿಕ್ರಮರಿಗೆ ಕೇಸು ವಹಿಸುತ್ತಾರೆ. ಯಶವಂತರಾಯರ ಶವ ಅಪಹರಣಕ್ಕೆ ಕಾರಣ ಅದು ಕೊಲೆ ಇರಬಹುದು! ಶವ ಪೋಲೀಸರ ಕೈಗೆ ಸಿಕ್ಕರೆ ಪೋಸ್ಟ್ ಮಾರ್ಟಮ್ ನಡೆಯುತ್ತದೆ. ಆಗ ಕೊಲೆಗಾರನನ್ನು ಹುಡುಕಲು ಸಹಾಯವಾಗುತ್ತದೆ. ಈ ಕಾರಣದಿಂದಲೇ ಶವದ ಅಪಹರಣವಾಗಿದೆ ಎನ್ನುವ ಸುಲಭ ತರ್ಕ ಎಂದು ವಿಕ್ರಮ್ ಯೋಚಿಸುತ್ತಾನೆ. ಯಶವಂತರಾಯರ ಶ್ರೀಮಂತಿಕೆಯ ಫಲಾನುಭವಿಗಳ ಮೇಲೆಯೇ ಮೊದಲ ಅನುಮಾನ. ಶೋಧನೆ ಮಾಡುತ್ತಾ ಹೋದಂತೆ ಕೊಲೆಯಾಗಿರಬಹುದಾದ ಯಶವಂತರಾಯರ ಜೀವನದಲ್ಲಿ ಸಂಬಂಧ ಹೊದ್ದಿದ್ದವರ ಕಗ್ಗಂಟು ಎಳೆಎಳೆಯಾಗಿ ಬಿಡಿಸಿಕ್ಕೊಳ್ಳುತ್ತದೆ. ಒಂದು ಲಕೋಟೆ ಹೇಗೆ ಕೊಲೆಯ ರಹಸ್ಯವನ್ನು ಬಿಡಿಸಿ ಕೊಲೆಗಾರನನ್ನು ಹಿಡಿಯಲು ಸಹಾಯವಾಗುತ್ತದೆ ಎನ್ನುವ ರಹಸ್ಯವನ್ನು ಕಾದಂಬರಿ ಹಿಡಿದಿಟ್ಟಿದೆ.
ವಿಕ್ರಮ್ ಈ ಸಾವಿನ ರಹಸ್ಯ ಹೇಗೆ ಬಿಡಿಸುತ್ತಾನೆ ಎನ್ನುವ ಕುತೂಹಲ ಅವನ ಪಾರ್ಟ್ನರ್ ಶರತ್ಗೆ.
ಶುದ್ಧ ಪತ್ತೇದಾರಿ ಕಾದಂಬರಿಗಳು ಎಪ್ಪತ್ತರ ದಶಕದಿಂದ ವಿರಳವಾಗಿವೆ. ಆ ಕೊರತೆಯನ್ನು ಈ ಕಾದಂಬರಿ ತುಂಬುವುದು ಎಂಬ ಆಶಯ ಲೇಖಕರದ್ದು.
The Plight! Rajiv was getting ready for the factory. Dressed, he stood in front of the dressing mirror, looking at his reflection. He touched the area just below his belly button, where he had seen that spot! A small part of skin which looked like shining metal. It looked like a small Read More...
Are you sure you want to close this?
You might lose all unsaved changes.
The items in your Cart will be deleted, click ok to proceed.