ಶ್ರೀ ಮದ್ಭಾಗವತ ಭಾಸ್ಕರ ದರ್ಶನ
ಭಾರತೀಯ ಸಂಸ್ಕೃತಿಯ ತಳಹದಿಯೇ ಶೃತಿ, ಸ್ಮೃತಿ ಹಾಗೂ ಪುರಾಣಗಳು. ಶೃತಿ ಮತ್ತು ಸ್ಮೃತಿಗಳನ್ನು
ಅಪೌರುಷೇಯ ಎಂದು ಪರಿಗಣಿಸಿದ್ದರೆ ಪ್ರಮುಖ ೧೮ (ಅಷ್ಟಾದಶ) ಪುರಾಣಗಳನ್ನು, ವಿಷ್ಣುವಿನ
ಅವತಾರವೇ ಆದ ವೇದವ್ಯಾಸರು ಇವುಗಳ ಬಗ್ಗೆ ಬರೆದಿದ್ದಾರೆ. ಇದರಲ್ಲಿ ೧೨ ಸ್ಕಂದಗಳು, ೧೮೦೦೦
ಶ್ಲೋಕಗಳಿವೆ.
ಆ ೧೮ ಪುರಾಣಗಳಲ್ಲಿ ಪುರಾಣಗಳ ರಾಜ ಎಂದೇ ತಿಳಿಯಲ್ಪಡುವ “ಭಾಗವತ” ಎಂದು ಅತ್ಯಂತ ಶ್ರೇಷ್ಠ
ಹಾಗೂ ಪವಿತ್ರ ಗ್ರಂಥವಾಗಿದೆ. ಪಾಂಡಿತ್ಯದ ಪರೀಕ್ಷೆ ಭಾಗವತದಲ್ಲಿ, ಎಂಬ ಪ್ರತೀತಿ
ಇದೆ. “
ವಿದ್ಯಾವತಾಂಭಾಗವತೇ ಪರೀಕ್ಷಾ” ಭಗವಂತನ ಎಲ್ಲ ಅವರಾತಗಳು, ಭಗವಂತನ ಭಕ್ತರ ಕತೆಗಳು, ಭೂಗೋಲ
ಹಾಗೂ ವಿಶ್ವದ ಉತ್ಪತ್ತಿ, ಸ್ಥಿತಿ ಮುಂತಾದವುಗಳು ಮುಖ್ಯವಾಗಿ ಶ್ರೀಕೃಷ್ಣನ ವಿಶೇಷವಾದ ಚರಿತ್ರೆ ಇವೆಲ್ಲವು
ವಿವರವಾಗಿ ಇದರಲ್ಲಿ ಹೇಳಲ್ಪಟ್ಟಿವೆ. ನಾರದರ ಕೋರಿಕೆಯ ಮೇರೆಗೆ ಭಗವಾನ್ ವೇದವ್ಯಾಸರು ರಚಿಸಿದ
ವೇದಗಳಿಗೆ ಸಮಾನವಾದ ಮುಕ್ತಿದಾಯಕವಾದ ಸಮಾಧಿ ಭಾಷೆಯಲ್ಲಿರುವ (ನೇರವಾದ ಭಾಷೆ)
ಮಹಾನ್ ಗ್ರಂಥವಿದು.
“ಅರ್ಥೋಯಂ ಬ್ರಹ್ಮ ಸೂತ್ರಾಣಾಂ ಭಾರತಾರ್ಥ ವಿನಿರ್ಣಯಃ” ಎಂಬಂತೆ ಬಹ್ಮಸೂತ್ರಗಳ ಅರ್ಥ
ಮಹಾಭಾರತದಲ್ಲಿ ಬರುವ ಸಂಶಯಗಳ ನಿವಾರಣೆ, ಗಾಯತ್ರೀ ಮಂತ್ರದ ವಿವರಣೆ ಹಾಗೂ ಸಕಲ
ಪುರಾಣಗಳ ಸಾರಸಂಗ್ರಹವೇ ಈ ಭಾಗವತ. ಶ್ರೀಕೃಷ್ಣನ ಪ್ರತಿಮಾ ರೂಪವೇ ಶ್ರೀಮದ್‌ಭಾಗವತ
ಎಂಬದೂ ಪಸಿದ್ಧ. ಅದರಲ್ಲೂ ದಶಮ(ಹತ್ತನೇ) ಸ್ಕಂದ ಶ್ರೀಕೃಷ್ಣನ ಮುಖವೆಂದೇ" ವರ್ಣಿತವಾಗಿದೆ.
ಇದರಲ್ಲಿರುವ ತತ್ವಗಳು ಅಷ್ಟೆಲ್ಲ ಸ್ಪಷ್ಟವಾಗಿದ್ದರೂ ಜನಸಾಮಾನ್ಯರಿಗೆ ಕತ್ತಲಲ್ಲಿ ನಿಧಿಯು ಕಾಣದಂತೆ
ಸರಿಯಾಗಿ ಕಾಣುಸುವುದಿಲ್ಲ. ಅದರಲ್ಲಿಯೂ ಸೂಕ್ಷ್ಮ ವಿಷಯಗಳು, ಸೂರ್ಯನ ಪ್ರಕಾಶದಲ್ಲಿ ಸಕಲ
ವಸ್ತುಗಳೂ ಸ್ಪಷ್ಟವಾಗಿ ಗೋಚರಿಸುವಂತೆ ಈ ಗ್ರಂಥವು ಕೂಡ ಓದುಗರ/ಜಿಜ್ಞಾಸುಗಳ ಮುಂದೆ
ಭಾಗವತದ ವಿಭಿನ್ನ ವಿಷಯಗಳನ್ನು ಸ್ಪಷ್ಟವಾಗಿ ತರೆದಿಡುತ್ತದೆ. ಇದರ ಅಧ್ಯಯನದಿಂದ ಭಾಗವತದ
ಅರ್ಥ ಸರಳಭಾಷೆಯಲ್ಲಿ ಎಲ್ಲರಿಗೂ ತಿಳಿಯುತ್ತದೆ. ಅದನ್ನು ಅರ್ಥೈಸಿಕೊಂಡು ಜೀವನದಲ್ಲಿ
ಅನುಷ್ಠಾನಗೊಳಿಸಿದಾಗ “ಪರಮಾತ್ಮನ ಅನುಗ್ರಹ ದೊರೆತು ಇಹ ಪರಗಳಲ್ಲಿ ಸುಖ ಸಂತೋಷ
ಸಮೃದ್ಧವಾಗುತ್ತದೆ ಎನ್ನುವ ಆಶಯದಿಂದ ಈ ಗ್ರಂಥವನ್ನು ಓದುಗರ ಮುಂದೆ ಇಡಲಾಗುತ್ತಿದೆ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners