Share this book with your friends

Srimad Bhagavad Gita Arpana - In 126 Chosen Shlokas (Kannada) / ಶ್ರೀಮದ್ಭಗವದ್ಗೀತಾ ಅರ್ಪಣಾ - ೧೨೬ ಆಯ್ದ ಶ್ಲೋಕಗಳು (ಕನ್ನಡ) Srimad Bhagavad Gita Arpana - 126 aayda shlokagalu (kannada)

Author Name: Sri Prabhuji | Format: Paperback | Genre : Educational & Professional | Other Details

ಶ್ರೀಮದ್ ಭಗವದ್ಗೀತೆಯು ಭಗವಂತನ ಮಧುರ ಗೀತೆಯಾಗಿದೆ. ಇದು ಯಾವುದೇ ಆಧ್ಯಾತ್ಮಿಕ ಅನ್ವೇಷಕನನ್ನು ಆಯಸ್ಕಾಂತದಂತೆ ಆಕರ್ಷಿಸುತ್ತದೆ. ಇದು ಜೀವನದ ಎಲ್ಲಾ ರೀತಿಯ ನೋವು ಮತ್ತು ಸಮಸ್ಯೆಗಳಿಗೆ ಸಂಜೀವಿನಿ (ಒಂದು ಅಮೃತ). ಇದು ಭವರೋಗಕ್ಕೆ (ಜೀವನದದಿಂದ ಬಳಲುವ ರೋಗ) ಒಂದು ಔಷಧಿ. ಇದು ಪರಮಾತ್ಮನ ಕಡೆಗೆ ನಡೆಯುವ ಉನ್ನತವಾದ ದಾರಿಯನ್ನು ತೋರುತ್ತದೆ. ಇದು ಜೀವನದ ಕಲೆಯನ್ನು ಕಲಿಸುವ ಯಜ್ಞಶಾಸ್ತ್ರ (ಕ್ರಿಯೆಯ ವಿಜ್ಞಾನದ ಕೈಪಿಡಿ). ಇದು ಮನಸ್ಸಿನ ವಿಜ್ಞಾನವನ್ನು ಕಲಿಸುವ ಮಾನಸಿಕ ಮಾರ್ಗದರ್ಶಿಯಂತಿದೆ. ಇದು ಯಾರೊಬ್ಬರ ಜಾತಿ, ಮತ, ಲಿಂಗ ಮತ್ತು ರಾಷ್ಟ್ರೀಯತೆಯನ್ನು ಮೀರಿ ಎಲ್ಲರಿಗೂ ಅನ್ವಯಿಸುತ್ತದೆ. ಅನಾದಿ ಕಾಲದಿಂದಲೂ ಮಹಾನ್ ನಾಯಕರು ಮಾನವೀಯತೆಗಾಗಿ ಈ ಶ್ರೇಷ್ಠ ಪುಸ್ತಕದಿಂದ ಸ್ಫೂರ್ತಿ ಪಡೆದಿದ್ದಾರೆ. ಈ ಮಹಾನ್ ಪುಸ್ತಕದಲ್ಲಿನ ಸತ್ಯಗಳನ್ನು ನೆನಪಿಟ್ಟುಕೊಳ್ಳಲು, ಆಯ್ದ ಕೆಲವು ಶ್ಲೋಕಗಳನ್ನು ಇಲ್ಲಿ ಸಂಕಲಿಸಲಾಗಿದೆ. ಈ ಪುಸ್ತಕದಲ್ಲಿರುವ ಸತ್ಯಗಳನ್ನು ಆಲೋಚಿಸುವವರು ಪರಮಾತ್ಮನ ಕೃಪೆಗೆ ಪಾತ್ರರಾಗಲಿ.

Read More...

Ratings & Reviews

0 out of 5 ( ratings) | Write a review
Write your review for this book
Sorry we are currently not available in your region.

ಶ್ರೀ ಪ್ರಭುಜಿ

ಶ್ರೀ ಪ್ರಭುಜಿ ಎಂದೇ ಎಲ್ಲರಿಗೂ ಪರಿಚಿತರಾಗಿರುವ ಆತ್ಮ ಜ್ಯೋತಿ ಸತ್ಸಂಗದ ಸಂಸ್ಥಾಪಕರಾದ ನರಸಿಂಹ ಪ್ರಭುಗಳು ಬಾಲ್ಯದಿಂದಲೇ ಆಧ್ಯಾತ್ಮದಲ್ಲಿ ಆಸಕ್ತಿವುಳ್ಳವರಾಗಿದ್ದರು. ಯೋಗ, ವೇದಾಂತಗಳ ಜ್ಞಾನವನ್ನು ಬಾಲ್ಯದಿಂದಲೇ ಪಡೆದ ಅವರು, ತಮ್ಮ ಗುರುಗಳಾದ ಶ್ರೀಯುತ ಪುತ್ತೂರಜ್ಜ ಅವರಿಂದ ಪ್ರೇರೇಪಿತರಾಗಿ, ಹಲವಾರು ಆಧ್ಯಾತ್ಮಿಕ ಸತ್ಸಂಗಗಳನ್ನೂ, ಆಧ್ಯಾತ್ಮಿಕ ಕಾರ್ಯಾಗಾರಗಳನ್ನೂ ಮಾಡಿ, ಜ್ಞಾನ ಯಜ್ಞದ ಮೂಲಕ ಭಗವತ್ ಸೇವೆಯನ್ನು ಮಾಡುತ್ತಿರುವರು. 


ವಿಖ್ಯಾತ ಐಐಟಿ ಮುಂಬೈ ನಲ್ಲಿ ಎಂ. ಟೆಕ್. ಮಾಡಿದ ನಂತರ 30 ವರ್ಷಗಳ ಕಾಲ ಸಾಫ್ಟ್ವೇರ್ ಉದ್ಯಮದಲ್ಲಿ(software industry) ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಯುತರು ಗೃಹಸ್ಥರಾಗಿದ್ದು, ಆಧ್ಯಾತ್ಮಿಕ ಚಿಂತನೆ, ಪ್ರವಚನಗಳ ಮೂಲಕ ಹಲವಾರು ಜನರಿಗೆ ಆಧ್ಯಾತ್ಮಿಕ ಮಾರ್ಗದಲ್ಲಿ ಮುಂದುವರೆಯಲು ಪ್ರೋತ್ಸಾಹ ಮತ್ತು ಮಾರ್ಗದರ್ಶನ ಮಾಡುತ್ತಿದ್ದಾರೆ. 

Read More...

Achievements

+9 more
View All