ಉಡುಪಿ ಜಿಲ್ಲೆಯ ಪುರಾತನ ಶಿವ ದೇವಾಲಯಗಳನ್ನು ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಈ ದೇಗುಲಗಳನ್ನು ಏಳನೇ ಶತಮಾನದಿಂದ ಹದಿನಾರನೇ ಶತಮಾನದ ನಡುವಿನ ಕಾಲಘಟ್ಟದಲ್ಲಿ ನಿರ್ಮಿಸಲಾಗಿದ್ದು ಅಳುಪರಿಂದ, ತಮ್ಮ ಸಾಮಂತರ ಮೂಲಕ ವಿಜಯನಗರ ಸಾಮ್ರಾಟರಿಂದ ಮತ್ತು ಕೆಳದಿ ದೊರೆಗಳಿಂದ ಪೋಷಿಸಲ್ಪಟ್ಟಿವೆ. ಲಭ್ಯವಿರುವ ದಾಖಲೆಗಳ ಪ್ರಕಾರ ಹತ್ತು ಶತಮಾನಗಳವರೆಗೆ ಶಿವ ಭಕ್ತರ ಮೂಲಕ ಜಿಲ್ಲೆಯಲ್ಲಿ ಅಸಂಖ್ಯಾತ ದೇವಾಲಯಗಳು ನಿರ್ಮಿಸಲ್ಪಟ್ಟಿವೆ. ಇವುಗಳಲ್ಲಿ ನೂರಕ್ಕೂ ಮಿಕ್ಕಿ ದೇಗುಲಗಳು ಸಕ್ರಿಯ ಧಾರ್ಮಿಕ ಕೇಂದ್ರಗಳಾಗಿ ಇನ್ನೂ ಧರ್ಮದ ದೀವಿಗೆಯನ್ನು ಬೆಳಗುತ್ತಿರುವುದು ನಮ್ಮ ಅದೃಷ್ಟ.