ಗಮಕಿ ಗಂಗಮ್ಮ ಕೇಶವಮೂರ್ತಿ.. ಜಗತ್ತಿಗೆ ಈಗಾಗಲೇ ಪರಿಚಯ ಇರುವಂತಹ ಹೆಸರು. ಹಲವಾರು ಪ್ರಶಸ್ತಿಗಳ ವಿಜೇತೆ. ಹಲವಾರು ಪ್ರಖ್ಯಾತಿಗಳ ಗಣಿ. ಅಸಂಖ್ಯ ಬಿರುದಾಂಕಿತೆ. ಗಮಕ ಕ್ಷೇತ್ರದಲ್ಲಿ ಇವರೊಂದು ದಂತ ಕಥೆಯೇ ಹೌದು. ಇವರ ಗಮಕಗಳು ಎಂದಿಗೂ ಸಿದ್ಧ, ಜಗತ್ಪ್ರಸಿದ್ಧ. ಆದರೆ ಇವರು ಈ ಮಟ್ಟಕ್ಕೆ ಏರಿದ್ದು... ಬಹುಶಃ ಅಲ್ಪ ಜನರಿಗೆ ಗೊತ್ತಿರಬಹುದು. ಇವರು ಸಾಧನೆಯ ಶಿಖರವನ್ನು ಮುಟ್ಟಿರುವ ಬಗೆಯನ್ನು ತಿಳಿಸಲೆಂದಾಗಿ ರಚಿಸಿರುವ ಕೃತಿಯಿದು, ದಂತ ಕಥೆಯಿದು. ಬನ್ನಿ.. ಅವರಿಂದಲೇ ತಿಳಿದು ಧನ್ಯರಾಗೋಣ, ನಾವುಗಳು ಕೂಡ ಏನನ್ನಾದರೂ ಹೀಗೆ ಸಾಧಿಸೋಣ.