Share this book with your friends

POOJYANEEYA 'PURANA BARAHAGARTHI' S V NAGARATHNAMMA / ಪೂಜ್ಯನೀಯ 'ಪುರಾಣ ಬರಹಗಾರ್ತಿ' ಎಸ್.ವಿ. ನಾಗರತ್ನಮ್ಮ

Author Name: S V Upendra Charya | Format: Hardcover | Genre : Biographies & Autobiographies | Other Details

ಅಧ್ಯಾತ್ಮ ಚಿಂತಕರು, ಬರಹಗಾರರು, ಬೆಂಗಳೂರಿನ ಎಸ್.ವಿ. ನಾಗರತ್ನಮ್ಮನವರ ಬಗ್ಗೆ ಕರ್ಮವೀರ, ಡೆಕ್ಕನ್ ಹೆರಾಲ್ಡ್, ಹಿಂದೂ, ಟೈಮ್ಸ್ ಆಫ್ ಇಂಡಿಯಾ ಹಾಗೂ ಇನ್ನೂ ಹಲವಾರು ಜನಪ್ರಿಯ ಪತ್ರಿಕೆಗಳಲ್ಲಿ ಚಿತ್ರ ಬರಹಗಳು ಪ್ರಕಟವಾಗಿದ್ದು, ಕನ್ನಡದ ಹೆಸರಾಂತ ಲೇಖಕಿ ದಿವಂಗತ ನಾಗರತ್ನಮ್ಮನವರ ಬದುಕು ಬರಹಗಳನ್ನು ಕುರಿತ ಈ ಪತ್ರಿಕಾ ಪ್ರಕಟಣೆಗಳ ಹೃದಯಸ್ಪರ್ಷಿ ಸ್ಮರಣಾರ್ಥಕ ಸಂಕಲನಾ ಪುಸ್ತಕ - ಪೂಜ್ಯನೀಯ "ಪುರಾಣ ಬರಹಗಾರ್ತಿ" ಎಸ್.ವಿ. ನಾಗರತ್ನಮ್ಮ

ಪುಸ್ತಕದ ಲೇಖನಗಳು ಮತ್ತು ಛಾಯಾಚಿತ್ರಗಳ ಸಂಕಲನ ಮತ್ತು ಸಂಪಾದಕರು
ಎಸ್.ವಿ. ಉಪೇಂದ್ರಾಚಾರ್ಯ


ಹರಿಕಥೆ, ಪುರಾಣ ಪ್ರವಚನ ಜಾನಪದ ಯಕ್ಷಗಾನ ನಾಟಕ, ಎಲ್ಲೆಡೆಯೂ ಇರುವ ಸ್ವಾರಸ್ಯಗಳನ್ನೆಲ್ಲ ಜೇನುಹುಳುವಿನಂತೆ ಸಂಗ್ರಹಿಸಿ ಈ ರಸಫಲವನ್ನು ಶ್ರೀಮತಿ ನಾಗರತ್ನಮ್ಮನವರು ನಮ್ಮ ಮುಂದೆ ನೀಡಿದ್ದಾರೆ.  ಈ ಕಾರ್ಯದಿಂದ ಅವರು ನಮ್ಮ ಸಂಸ್ಕೃತಿಗೆ ದೊಡ್ಡ ಸೇವೆಯನ್ನು ನಮ್ಮ ಜನತೆಗೆ ಮಹೋಪಕಾರವನ್ನು ಮಾಡಿದ್ದಾರೆ.  ಇವರು ನಮ್ಮ ಜನತೆಯ ಮಿತ್ರರು.
|| ಗೊರೂರು ರಾಮಸ್ವಾಮಿ ಅಯ್ಯಂಗಾರ್

ಎಸ್.ವಿ ನಾಗರತ್ನಮ್ಮನವರು ಶ್ರೀಸಾಮಾನ್ಯನಿಗೆ ಮಹಾಭಾರತ, ಶ್ರೀಮದ್ ರಾಮಾಯಣ ಸಂಗ್ರಹಮಾಲ, ಭಾಗವತ ರಸಾಯನ ಮುಂತಾದ ಗ್ರಂಥಗಳನ್ನು ಪ್ರಕಟಿಸಿ ಕನ್ನಡ ನಾಡಿನ ಸಾರಸ್ವತಲೋಕದಲ್ಲಿ ಹೆಗ್ಗಳಿಕೆ ಗಳಿಸಿದ್ದಾರೆ.  ವಿಮರ್ಶಕರ, ಓದುಗರ, ಹಿರಿಯರ, ಪಂಡಿತರ ಮನಗೆದ್ದಿದ್ದಾರೆ.  ಭಗವಂತನ ಲೀಲೆಗಳು, ಅವನ ಸಾಕ್ಷಾತ್ಕಾರ, ಅವನು ಭೂಲೋಕದಲ್ಲಿ ಅವತರಿಸಿ ಮಾನವರೊಂದಿಗೆ ಮಾನವನಾಗಿ ಲೋಕಕಲ್ಯಾಣದ ಗುಟ್ಟುಗಳನ್ನು ತೋರಿಸುವ ಪ್ರೀತಿಯನ್ನು ಸರಳವಾಗಿ ಸುಲಭವಾಗಿ ಓದುಗರಿಗೆ ತಿಳಿಸುವಂತೆ ಸರಳ ಸುಂದರ ಭಾಷೆ ಬಳಸಿ ಬರೆದಿರುವ ನಾಗರತ್ನಮ್ಮನವರನ್ನು ಎಷ್ಟು ಹೊಗಳಿದರೂ ಸಾಲದು.
ಉಷಾನರತ್ನರಾಮ್

Read More...
Hardcover
Hardcover 575

Inclusive of all taxes

Delivery

Item is available at

Enter pincode for exact delivery dates

Also Available On

ಎಸ್.ವಿ. ಉಪೇಂದ್ರಾಚಾರ್ಯ

-

Read More...

Achievements

+7 more
View All