Share this book with your friends

Uttaradina dakshinakke payana / ಉತ್ತರದಿಂದ ದಕ್ಷಿಣಕ್ಕೆ ಪಯಣ pravasa kathana

Author Name: Sachun Karbari | Format: Paperback | Genre : Travel | Other Details

ಉತ್ತರದಿಂದ ದಕ್ಷಿಣಕ್ಕೆ ಪಯಣ 

.

ಉತ್ತರದಿಂದ ದಕ್ಷಿಣಕ್ಕೆ ಪಯಣ ಮೂಲತಃ ಬಾಲ ಸಾಹಿತಿ ಬಾಲ್ಯದಲ್ಲೇ ಬರೆದ ಪ್ರವಾಸ ಕಥನವಾಗಿದ್ದು ಸರಳ ಸ್ಪಷ್ಟವಾಗಿ ಮೂಡಿಬಂದಿದೆ,ತಾ ಕಂಡ ಕರ್ನಾಟಕವನ್ನು ಉತ್ತರದ ತುದಿಯಿಂದ ದಕ್ಷಿಣದವರೆಗಿನ ಅನುಭವ ನಿರಾಳವಾಗಿ ಗೀಚಿದ್ದಾನೆ, ಪ್ರತಿಯೊಂದರಲ್ಲೂ ಸೂಕ್ಷ್ಮತೆಯ ಸರಳತೆಯ ನೋಟ ಕಾಣಬಹುದು,ಅದಕ್ಕಿಂತ ಮಿಗಿಲಾಗಿ ಎಲ್ಲಾದರ ಹಿನ್ನೆಲೆಯೂ ತಿಳಿದು ಪುಟದಲ್ಲಿ ಬಳಿದಿದ್ದು ಇನ್ನೂ ವಿಶೇಷ
ಕನ್ನಡದ ಕಣಕಣದ ಸೌಗಂಧ ಅಂದವಾಗಿ ಕಾಣಬಹುದು 
ಕನ್ನಡವ ಕೊಂಡಾಡಿದರ ಕುಡಿದ್ಹಂಗ ಕುಡ್ಲಾದೇಳನೀರ ಎನ್ನುವ ಅವರ ನುಡಿಯಂತೆ ಸ್ವಚ್ಚಂದವಾಗಿದೆ, ಮಲೆನಾಡ ಪ್ರಕ್ರತಿ ಸೌಂದರ್ಯವನ್ನು ಸವಿಯುತ್ತಾ ಅವರು ಬರೆದ ಸಾಲುಗಳು ಇಂತಿವೆ....
ಮೇಘ ಮದ್ಯದಿ 
ದೂತನು ನಾನು,
ಸೊಂಕುವ ಮಂಜನು
ಸರಿಸುವ ಭಾನು!

ಮನಮೋಹನ ಮಡಗುವ
ಮನಮೋಹಕ ನೀನು,
ಹಾಡುತ-ಓಡುತ
ಹರಿ-ಗಿರಿರಾರಿ ಬಂದೇನು!

ಸಸ್ಯಶ್ಯಾಮಲ ಕಣ-ಕಣದಲು
ಇಳಿದುಳಿದ ಮಂಜಿನ ಹನಿಯಲು,
ಗಂಧ-ಸುಗಂಧ ಬೀರಲು
ತಂಪಲಿ ಇಂಪು ಕಾರಲು,

ಎಲ್ಲೆಯೂ ನಿನೇ,
ಎಲ್ಲೆಲ್ಲಿಯೂ ನಿನೇ!
ಒಲವಿನ ಚೆಲುವೆ,
ನಿನ್ನೆ ಕಂಡೆ, ನಿನ್ನೆ ಉಂಡೆ!

ಅವರು ಈ ಹೊತ್ತಿಗೆ ಬರೆದು ಎರಡು ವರ್ಷಗಳಾದರೂ ಮುದ್ರಣ ಮಾಡಿಸಲು ಗೊತ್ತಾಗದೆ ಇದ್ದರಿಂದ ಹಾಗೇ ಉಳಿದಿತ್ತು, ಓದುಗರ ಮಡಿಲು ಮುಟ್ಟಲು ಅರ್ಧ ದಶಕ ತೆಗೆದುಕೊಂಡಿತು ಆದರೂ ಕೊನೆಗಿಂದು ಇದು ನಿಮ್ಮ ಕೈಯಲ್ಲಿದೆ,ಹೊತ್ತಿಗೆಯಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ಅದರ ಹಿನ್ನೆಲೆ,ಮಲೆನಾಡಿನ ಕಾಡು ತಂಪಾದ ಬೀಡು, ಮಂಡಗದ್ದೆ ಪಕ್ಷಿಧಾಮ, ಜೋಗಿ ಜಲಪಾತ ತುಳುಕುವ ಬಳುಕುವ ಶೈಲಿ,ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಸೊಬಗು, ದಕ್ಷಿಣ ಭಾಗದ ಜನರ ಜೀವನ ಶೈಲಿ, ಧರ್ಮಸ್ಥಳದ ಮಾತುಬೀಡದ ಮಂಜುನಾಥರ ಮಹಿಮೆ, ಕುವೆಂಪುರವರ ಕವಿಮನೆ ಕವಿಶಚಲದ ಶಾಮಲದ ನಿಸರ್ಗ ಸೌಂದರ್ಯ ರಮಣೀಯವಾಗಿ ವಿವರಿಸಿದ್ದಾರೆ, ದಕ್ಷಿಣದ ಚಿರಾಪುಂಜಿ ಆಗುಂಬೆಯ ತಿರುವುಗಳು, ಶ್ರಂಗೇರಿಯ ಸೊಬಗುಗಳು,ಶಿಲ್ಪ ಸೌಂದರ್ಯದ ಕೈ ಚಳಕದಲ್ಲಿ ಭಾವ ಪುಳಕ, ಚಿಕ್ಕಮಗಳೂರಿನ ಕಾಫಿ ತೋಟ,ಮುಗಿಲಿನಲ್ಲಿನ ಮೇಘದೋಟ,ಬೇಲೂರಿನ ಐತಿಹಾಸಿಕ ಛಾಯೆ ಕಲ್ಲಲ್ಲೇ ಮೂಡಿಬಂದ ಮಾಯೆ!  ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ,ಹಳೆಯ ಕಲ್ಲಿನ  ಬುರುಜು,ಅಲ್ಲಿಂದ ಸಾಂಸ್ಕೃತಿಕ ನಗರಿ ಮೈಸೂ

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

ಸಚಿನ್ ಕಾರಬಾರಿ

ಸಾಹಿತ್ಯದ ಸುಳಿಯಲ್ಲಿ ಸಿಕ್ಕಿದವರನ್ನೆಲ್ಲ ಸಾಹಿತಿಗಳಾಗೋದಿಲ್ಲಾ ಅಂತಹುದರಲ್ಲಿ ಬಾಲ್ಯದಿಂದಲೇ ಸಾಹಿತ್ಯದಲ್ಲೇ ಮೈ ತೊಳೆಯುತ್ತಿರುವ ಸಚಿನ್ ಕಾರಬಾರಿಯವರು ತಾನು ಪದವಿ ಹಂತದಲ್ಲಿರುವಾಗಲೇ ೩ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಸಂಚಾಲಕ ಭಾಷಣಕಾರರಾಗಿ ಪ್ರತ್ಯಾತರಾಗಿದ್ದಾರೆ.

ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದರೂ ವಿಜ್ಞಾನದೆಡೆಗೆ ಒಲವುಂಟು, ಪ್ರವಾಸ ಮಾಡುವುದೆಂದರೆ ಎಲ್ಲಿಲ್ಲದ ಹುಮ್ಮಸ್ಸು ಕಾರಣ ಹುಟ್ಟಿದ್ದು ವಿಶ್ವ ಪ್ರವಾಸೋದ್ಯಮ ದಿನದಂದು. ಬೀದರ್ ಜಿಲ್ಲೆಯಲ್ಲಿ 27 ಸೆಪ್ಟೆಂಬರ್ 2004ರಂದು ಶಿವಶಂಕರ್ ಕಾರಬಾರಿ ಹಾಗೂ ಕಲ್ಪನಾ ಕಾರಬಾರಿಯವರ ದ್ವಿತೀಯ ಮಗನಾಗಿ ಜನಿಸಿದ್ದು ಚಿಕ್ಕಂದಿನಿಂದ ಊಟ ಮಾಡುವಾಗ ಅಮ್ಮನ ಕಥೆ ಕೇಳುತ್ತಾ ಬೆಳೆದವರು ಉತ್ತಮ ಕಥೆಗಾರ,ಭಾಷಣಕಾರ,ನಾಟಕಕಾರ,ಸಂಚಾಲಕರಾಗಿ ಚಿಕ್ಕ ವಯಸ್ಸಿನಲ್ಲೇ ಪ್ರಖ್ಯಾತಿ ಪಡೆದಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಶ್ರೀ ಚೆನ್ನಬಸವೇಶ್ವರ ಗುರುಕುಲದಲ್ಲಿ ವಿದ್ಯಾಭ್ಯಾಸದ ಆನಂತರ ಇದೀಗ ಧಾರವಾಡದ ಜೆ.ಎಸ್.ಎಸ್ ನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಾರೆ, ಜೊತೆಗೆ ಮೈಸೂರಿನಲ್ಲಿ ಸಂಶೋಧಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ,ತಾ ಕಂಡ ಕರ್ನಾಟಕವನ್ನು ಉತ್ತರದ ತುದಿಯಿಂದ ದಕ್ಷಿಣದವರೆಗಿನ ಅನುಭವ ನಿರಾಳವಾಗಿ ಗೀಚಿದ್ದಾನೆ, ಪ್ರತಿಯೊಂದರಲ್ಲೂ ಸೂಕ್ಷ್ಮತೆಯ ಸರಳತೆಯ ನೋಟ ಕಾಣಬಹುದು,ಅದಕ್ಕಿಂತ ಮಿಗಿಲಾಗಿ ಎಲ್ಲಾದರ ಹಿನ್ನೆಲೆಯೂ ತಿಳಿದು ಪುಟದಲ್ಲಿ ಬಳಿದಿದ್ದು ಇನ್ನೂ ವಿಶೇಷ

ಕನ್ನಡದ ಕಣಕಣದ ಸೌಗಂಧ ಅಂದವಾಗಿ ಕಾಣಬಹುದು! 

"ಕನ್ನಡವ ಕೊಂಡಾಡಿದರ ಕುಡಿದ್ಹಂಗ ಕುಡ್ಲಾದೇಳನೀರ" ಎನ್ನುವ ಅವರ ನುಡಿಯಂತೆ ಸ್ವಚ್ಚಂದವಾಗಿದೆ, ಪ್ರವಾಸ ಹೋಗುವುದೆಂದರೆ ಪ್ರಂಚ ಪ್ರಾಣ ಸಮಯ ಸಿಕ್ಕಾಗಲೆಲ್ಲಾ ಪ್ರವಾಸ ಕೈಗೊಳ್ಳುವುದು,ಪುಸ್ತಕ ಓದುವುದು, ಹಾಗೂ ವಾದ-ವಿವಾದ ಮಾಡುವುದರಲ್ಲೂ ಬಲು ಆಸಕ್ತಿ ಅಂತೆ, ವಿಭಿನ್ನ ವಿಚಾರ ಶೈಲಿಯವರಾದ ಇವರು ಸದಾ ನಾವಿನ್ಯತೆಯ ಹುಡುಕಾಟದಲ್ಲಿರುತ್ತಾರೆ,ನಗುಮುಖ,ಮಗುವಿನ ಮನಸ್ಸು ಹೊಂದಿರುವ ಇವರ ವಿಚಾರಧಾರೆ ಹಿರಿಯವರು ಥರಾ ಇದ್ದರೂ ಹಾವು ಭಾವವೆಲ್ಲಾ ಚಿಕ್ಕ ಮಗುವಿನ ಹಾಗೆ ನೀರಾಳ.ಸಾಹಿತ್ಯದ ಸುಳಿಯಲ್ಲಿ ಸಿಕ್ಕಿದವರನ್ನೆಲ್ಲ ಸಾಹಿತಿಗಳಾಗೋದಿಲ್ಲಾ ಅಂತಹುದರಲ್ಲಿ ಬಾಲ್ಯದಿಂದಲೇ ಸಾಹಿತ್ಯದಲ್ಲೇ ಮೈ ತೊಳೆಯುತ್ತಿರುವ ಸಚಿನ್ ಕಾರಬಾರಿಯವರು ತಾನು ಪದವಿ ಹಂತದಲ್ಲಿರುವಾಗಲೇ ೩ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, ಸಂಚಾಲಕ ಭಾಷಣಕಾರರಾಗಿ ಪ್ರತ್ಯಾತರಾಗಿದ್ದಾರೆ.ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದರೂ ವಿಜ್ಞಾನದೆಡೆಗೆ ಒಲವುಂಟು, ಪ್ರವಾಸ ಮಾಡುವುದೆಂದರೆ ಎಲ್ಲಿಲ್ಲದ ಹುಮ್ಮಸ್ಸು ಕಾರಣ ಹುಟ್ಟಿದ್ದು ವಿಶ್ವ ಪ್ರವಾಸೋದ್ಯಮ ದಿನದಂದು. ಬೀದರ್ ಜಿಲ್ಲೆಯಲ್ಲಿ 27 ಸೆಪ್ಟೆಂಬರ್ 2004ರಂದು ಶಿವಶಂಕರ್ ಕಾರಬಾರಿ ಹಾಗೂ ಕಲ್ಪನಾ ಕಾರಬಾರಿಯವರ ದ್ವಿತೀಯ ಮಗನಾಗಿ ಜನಿಸಿದ್ದು ಚಿಕ್ಕಂದಿನಿಂದ ಊಟ ಮಾಡುವಾಗ ಅಮ್ಮನ ಕಥೆ ಕೇಳುತ್ತಾ ಬೆಳೆದವರು ಉತ್ತಮ ಕಥೆಗಾರ,ಭಾಷಣಕಾರ,ನಾಟಕಕಾರ,ಸಂಚಾಲಕರಾಗಿ ಚಿಕ್ಕ ವಯಸ್ಸಿನಲ್ಲೇ ಪ್ರಖ್ಯಾತಿ ಪಡೆದಿದ್ದಾರೆ. ಕಲ್ಯಾಣ ಕರ್ನಾಟಕದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಶ್ರೀ ಚೆನ್ನಬಸವೇಶ್ವರ ಗುರುಕುಲದಲ್ಲಿ ವಿದ್ಯಾಭ್ಯಾಸದ ಆನಂತರ ಇದೀಗ ಧಾರವಾಡದ ಜೆ.ಎಸ್.ಎಸ್ ನಲ್ಲಿ ಪದವಿ ಅಧ್ಯಯನ ಮಾಡುತ್ತಿದ್ದಾರೆ, ಜೊತೆಗೆ ಮೈಸೂರಿನಲ್ಲಿ ಸಂಶೋಧಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ,ತಾ ಕಂಡ ಕರ್ನಾಟಕವನ್ನು ಉತ್ತರದ ತುದಿಯಿಂದ ದಕ್ಷಿಣದವರೆಗಿನ ಅನುಭವ ನಿರಾಳವಾಗಿ ಗೀಚಿದ್ದಾನೆ, ಪ್ರತಿಯೊಂದರಲ್ಲೂ ಸೂಕ್ಷ್ಮತೆಯ ಸರಳತೆಯ ನೋಟ ಕಾಣಬಹುದು,ಅದಕ್ಕಿಂತ ಮಿಗಿಲಾಗಿ ಎಲ್ಲಾದರ ಹಿನ್ನೆಲೆಯೂ ತಿಳಿದು ಪುಟದಲ್ಲಿ ಬಳಿದಿದ್ದು ಇನ್ನೂ ವಿಶೇಷ ಕನ್ನಡದ ಕಣಕಣದ ಸೌಗಂಧ ಅಂದವಾಗಿ

Read More...

Achievements