ಇಂದು ವಿದ್ಯಾಭ್ಯಾಸವು ಮಹತ್ತರ ಮಜಲನ್ನು ಕಂಡಿದ್ದರೂ, ಮೂಲಭೂತ ಸೃಜನತೆಯು ಬಹಳ ಮಂದಗತಿಯಲ್ಲಿ ಸಾಗುತ್ತಿದೆ. ಮಾನವನು ಪ್ರಕೃತಿಯ ಜೊತೆಗೆ ಒಡನಾಟವನ್ನು ಕಳೆದುಕೊಂಡಿರುವುದು, ಸ್ವಾಧ್ಯಾಯದ ಕೊರತೆ, ಕೇವಲ ವ್ಯಾವಹಾರಿಕ ನೋಟ, ಅಧಿಕ ಯಾಂತ್ರಿಕತೆ, ಇತ್ಯಾದಿ ಅಂಶಗಳೇ ಇದಕ್ಕೆ ಕಾರಣವಾಗಿದೆ. ಹೀಗಾಗಿ, ವೇದ ಸಿದ್ಧಾಂತಗಳನ್ನು ಗಮನಿಸಿ ಮೂಲಭೂತ ಸೃಜನತೆಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ಈ ಕಾದಂಬರಿಯಲ್ಲಿ ಚರ್ಚಿಸಲಾಗಿದೆ.