“ಜಯಕರವಾಗಿ ಜೀವಿಸುವದಕ್ಕೆ ಕೀಲಿಗಳು” ಎಂಬದು ಕಾರ್ಯಪುಸ್ತಕವಾಗಿದ್ದು ಪರಿಪಕ್ವತೆಯುಳ್ಳ ಕ್ರೈಸ್ತರಾಗಲು ವಿಶ್ವಾಸಿಗಳನ್ನು ಬಲಪಡಿಸುತ್ತದೆ. ಪರಿಣಾಮಕಾರಿಯಾಗಿ ಇತರರನ್ನು ಶಿಷ್ಯರನ್ನಾಗಿ ಮಾಡಲು ನಾಯಕರನ್ನು ಸಜ್ಜುಗೊಳಿಸುವದಕ್ಕಾಗಿ ಈ ಕಾರ್ಯಪುಸ್ತಕವನ್ನು ಸಾಧನವಾಗಿ ರೂಪಿಸಲಾಗಿದೆ. ಶಿಷ್ಯತ್ವವು ಸ್ವಭಾವದ ರೂಪಾಂತರ ಮತ್ತು ಸಾಮರ್ಥ್ಯದ ವರ್ಗಾವಣೆಯ ಕುರಿತಾಗಿರಬೇಕು. ಯೇಸು ಕ್ರಿಸ್ತನು ಇದನ್ನು ತನ್ನ ಹನ್ನೆರೆಡು ಮಂದಿ ಶಿಷ್ಯರ ನಡುವೆ ತೋರ್ಪಡಿಸಿದನು; ದೇವರ ರಾಜ್ಯದ ಕುರಿತು ಯೇಸು ಕ್ರಿಸ್ತನು ಮಾಡಿದ ಬೋಧನೆಗಳು ಸಾಧಾರಣ ಜನರಾಗಿದ್ದ ಅವರ ಜೀವಿತಗಳನ್ನು ಮಾರ್ಪಡಿಸಿತು. ನಂತರದಲ್ಲಿ, ಆ ಶಿಷ್ಯರನ್ನು ಅಪೊಸ್ತಲರನ್ನಾಗಿ ನೇಮಕಮಾಡಲಾಯಿತು, ಅವರು ಪಟ್ಟಣಗಳನ್ನು ಮತ್ತು ಪ್ರದೇಶಗಳನ್ನು ಮಾರ್ಪಡಿಸಲು ಹೊರಟರು.
“ಜಯಕರವಾಗಿ ಜೀವಿಸುವದಕ್ಕೆ ಕೀಲಿಗಳು” ದೇವರು ಪ್ರತಿಯೊಬ್ಬ ಕ್ರೈಸ್ತನ ಬಗ್ಗೆ ಬಯಸುವ ಪ್ರಯಾಣದ ಪ್ರಾರಂಭವಾಗಿದೆ.