ಈ ಕಾದಂಬರಿಯು ನೈಜ ಘಟನೆಯನ್ನು ಆಧರಿಸಿದೆ. ಒಂದು ಸಂಸಾರದಲ್ಲಿ ಕಂಡುಬರುವಂತಹ ತೊಳಲಾಟಗಳ ಜೊತೆಗೆ ಹಿರಿಯರ ಮಧ್ಯೆ ಕಂಡುಬರುವಂತಹ ಭಿನ್ನಾಭಿಪ್ರಾಯದಲ್ಲಿ ಕುಟುಂಬದ ಚಿಕ್ಕ ವಯಸ್ಸಿನ ಸದಸ್ಯ ಸಿಲುಕಿಕೊಂಡರೆ ಏನಾಗಬಹುದು ಎಂಬ ಚಿತ್ರಣವಿದೆ. ಈ ಬರವಣಿಗೆಯ ವಿಶೇಷವೇನೆಂದರೆ, ಬಳಸಿರುವಂತಹ ಕನ್ನಡ ಭಾಷೆ... ಇದು ಅಪ್ಪಟ ಹಾಸನ ಜಿಲ್ಲೆಯ ಆಡುಭಾಷೆಯಲ್ಲಿದೆ.