ಶ್ರೀಮಂತ ಯಶವಂತರಾಯರು ಸತ್ತಾಗ ಅದು ಯಾರಿಗೂ ಕೊಲೆ ಎನಿಸಿರಲಿಲ್ಲ. ಅದು ಕೊಲೆ ಎಂಬ ಮೂಕರ್ಜಿ ಪೋಲೀಸರಿಗೆ ಸಿಗುತ್ತದೆ. ಪೋಲೀಸರು ಶವ ಪರೀಕ್ಷೆಗೆ ಸಮಾಧಿ ತೆಗೆದಾಗ ಅಲ್ಲಿ ಶವ ನಾಪತ್ತೆಯಾಗಿರುತ್ತದೆ. ಯಾರಾದರೂ ಶವವನ್ನು ಏಕೆ ಅಪಹರಿಸುತ್ತಾರೆ ಎನ್ನುವುದು ಯಶವಂತರಾಯರ ಮನೆಯವರಿಗೆ ಅಪಶಕುನದಂತೆ ಕಾಣಿಸುತ್ತದೆ. ಯಾವ ಕಾರಣಕ್ಕಾಗಿ ಶವ ಅಪಹರಿಸಿದ್ದಾರೆ ಎಂದು ತಿಳಿಯಲು ಸಾಧ್ಯವಾಗದೆ ಸೋತು ಸುಣ್ಣವಾಗುತ್ತಾರೆ. ಯಶವಂತರಾಯರ ಅಳಿಯ ಮೂರ್ತಿ ಡಿಟೆಕ್ಟೀವ್ ವಿಕ್ರಮರಿಗೆ ಕೇಸು ವಹಿಸುತ್ತಾರೆ. ಯಶವಂತರಾಯರ ಶವ ಅಪಹರಣಕ್ಕೆ ಕಾರಣ ಅದು ಕೊಲೆ ಇರಬಹುದು! ಶವ ಪೋಲೀಸರ ಕೈಗೆ ಸಿಕ್ಕರೆ ಪೋಸ್ಟ್ ಮಾರ್ಟಮ್ ನಡೆಯುತ್ತದೆ. ಆಗ ಕೊಲೆಗಾರನನ್ನು ಹುಡುಕಲು ಸಹಾಯವಾಗುತ್ತದೆ. ಈ ಕಾರಣದಿಂದಲೇ ಶವದ ಅಪಹರಣವಾಗಿದೆ ಎನ್ನುವ ಸುಲಭ ತರ್ಕ ಎಂದು ವಿಕ್ರಮ್ ಯೋಚಿಸುತ್ತಾನೆ. ಯಶವಂತರಾಯರ ಶ್ರೀಮಂತಿಕೆಯ ಫಲಾನುಭವಿಗಳ ಮೇಲೆಯೇ ಮೊದಲ ಅನುಮಾನ. ಶೋಧನೆ ಮಾಡುತ್ತಾ ಹೋದಂತೆ ಕೊಲೆಯಾಗಿರಬಹುದಾದ ಯಶವಂತರಾಯರ ಜೀವನದಲ್ಲಿ ಸಂಬಂಧ ಹೊದ್ದಿದ್ದವರ ಕಗ್ಗಂಟು ಎಳೆಎಳೆಯಾಗಿ ಬಿಡಿಸಿಕ್ಕೊಳ್ಳುತ್ತದೆ. ಒಂದು ಲಕೋಟೆ ಹೇಗೆ ಕೊಲೆಯ ರಹಸ್ಯವನ್ನು ಬಿಡಿಸಿ ಕೊಲೆಗಾರನನ್ನು ಹಿಡಿಯಲು ಸಹಾಯವಾಗುತ್ತದೆ ಎನ್ನುವ ರಹಸ್ಯವನ್ನು ಕಾದಂಬರಿ ಹಿಡಿದಿಟ್ಟಿದೆ.
ವಿಕ್ರಮ್ ಈ ಸಾವಿನ ರಹಸ್ಯ ಹೇಗೆ ಬಿಡಿಸುತ್ತಾನೆ ಎನ್ನುವ ಕುತೂಹಲ ಅವನ ಪಾರ್ಟ್ನರ್ ಶರತ್‍ಗೆ.
ಶುದ್ಧ ಪತ್ತೇದಾರಿ ಕಾದಂಬರಿಗಳು ಎಪ್ಪತ್ತರ ದಶಕದಿಂದ ವಿರಳವಾಗಿವೆ. ಆ ಕೊರತೆಯನ್ನು ಈ ಕಾದಂಬರಿ ತುಂಬುವುದು ಎಂಬ ಆಶಯ ಲೇಖಕರದ್ದು.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners