ಹದಿನಾರು ವರ್ಷ ತುಂಬುವುದರೊಳಗೆ ಶ್ರೀರಾಮರು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿ ನಂತರ ತೀರ್ಥಯಾತ್ರೆಯನ್ನು ಮುಗಿಸಿ ತನ್ನ ಭವನಕ್ಕೆ ಹಿಂದಿರುಗಿದ್ದರು. ತಂದೆ ದಶರಥ ಮಹಾರಾಜರು ತನ್ನ ಸುಪುತ್ರರಿಗೆ ಮದುವೆಯನ್ನು ಮಾಡಬೇಕೆಂದು ಸಂಕಲ್ಪಿಸಿದ ಸಮಯದಲ್ಲಿ ಶ್ರೀರಾಮರಿಗೆ ವೈರಾಗ್ಯವು ಉಂಟಾಯಿತು. ಆಗ ಮಹರ್ಷಿ ವಸಿಷ್ಠ ಜೊತೆಗೆ ಮಹರ್ಷಿ ವಿಶ್ವಾಮಿತ್ರರು ಶ್ರೀರಾಮರ ಸಂದೇಹಗಳಿಗೆ ಉತ್ತರಿಸಿ ಅವರ ಜವಾಬ್ದಾರಿಯನ್ನು ಮನನ ಮಾಡಿಸಿದರು. ಈ ಕೃತಿಯು ಕಾವ್ಯ ಹಾಗು ಸಂಭಾಷಣೆಗಳಿಂದ ಕೂಡಿದ್ದು ಈ ಒಂದು ಸಂದರ್ಭವನ್ನೇ ನಾಟಕ ರೂಪದಲ್ಲಿ ನಿರೂಪಿಸುವಂತಹ ಯತ್ನವಾಗಿದೆ.