ಭಾವನೆಗಳ ಸಮಾಗಮದಲ್ಲಿ ಒಂದಾಗಿ ಜೀವನದ ಕ್ಷಣಗಳನ್ನು ಮೆಲುಕು ಹಾಕಿಸುತ್ತವೆ ಈ ಕವನಗಳು. ಅದೇನೋ ಬದುಕಲ್ಲಿ ಪ್ರೀತಿಯ ಹೆಸರು ಹೇಳಿದಾಗ ಅದರ ಜೊತೆ ಬರುವ ಸಾವಿರ ಭಾವನೆಗಳ ವ್ಯಕ್ತಪಡಿಸಲು ಸಾಧ್ಯವಾಗದೆ ಇರುವಾಗ ಸುಮ್ಮನೆ ನನ್ನ ಅನುಭವಗಳಲ್ಲಿ ಭಾಗಿಯಾಗಿ, ಒಂದು ಕವಿತೆ ಓದಿ.
ಬೆಳಗಾವಿ ನಗರದ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ ನಂತರ, ಸುಶ್ಮಿತಾ IT ಉದ್ಯಮದಲ್ಲಿ ಯಶಸ್ವಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಪದಗಳ ಮೂಲಕ ತಮ್ಮ ಅನುಭವಗಳನ್ನು ಬಿಚ್ಚಿಡುವುದು ಅವರ ಹವ್ಯಾಸ. ಈ ಪುಸ್ತಕ ಸುಶ್ಮಿತಾ ಗೆಜ್ಜಿಯವರ ಬರವಣಿಗೆಯ ಉತ್ಸಾಹ, ಪ್ರೀತಿಯ ಜಟಿಲತೆಗಳು ಮತ್ತು ಅದರ ಅಸಂಖ್ಯಾತ ಭಾವನೆಗಳನ್ನು ವ್ಯಕಪಡಿಸುತ್ತದೆ.
ಅವರು ತಮ್ಮ ಬರವಣಿಗೆ ಮತ್ತು ವೃತ್ತಿಪರ ಆಸಕ್ತಿಗಳಲ್ಲಿ ನಿರತರಾಗಿರುವಾಗ, ಪ್ರಯಾಣ, ಟ್ರೆಕ್ಕಿಂಗ್ ಮತ್ತು ಓದುವಿಕೆ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತಾರೆ. ಈ ವೈವಿಧ್ಯಮಯ ಅನುಭವಗಳು ತನ್ನ ಬರವಣಿಗೆಯನ್ನು ಉತ್ಕೃಷ್ಟಗೊಳಿಸುತ್ತವೆ ಮತ್ತು ಅವರ ಕಾವ್ಯಕ್ಕೆ ಆಳವನ್ನು ತರುತ್ತವೆ ಎಂದು ಅವರು ನಂಬುತ್ತಾರೆ.