ಮನಸ್ಸು ಹಾಗು ಭೌತಿಕ ದೇಹದ ಸಂಬಂಧದಲ್ಲಿ ಸಮತೋಲನವು ಪ್ರತಿ ಕ್ಷಣವೂ ಸಹ ಕ್ರಿಯಾತ್ಮಕವಾಗಿರುತ್ತದೆ. ದೇಹ ಹಾಗು ಮನಸ್ಸುಗಳೆರೆಡೂ ಸಹ ಈ ಕ್ರಿಯಾತ್ಮಕ ಸಮತೋಲನವನ್ನು ಪ್ರಭಾವಿತಗೊಳಿಸುತ್ತಿರುತ್ತದೆ. ಈ ಪ್ರಭಾವವು ಜೀವದ ಅಸ್ತಿತ್ವಕ್ಕೆ ವಿರುದ್ಧವಾದಾಗ ದೈಹಿಕ ಹಾಗು ಮಾನಸೀಕ ಸ್ತರದಲ್ಲಿ ವ್ಯತ್ಯಾಸಗಳು ಕಾಣಿಸಿಕೊಳ್ಳಬಹುದಾಗಿದೆ. ಅನಾದಿ ಕಾಲದಲ್ಲೇ ಈ ವಿಚಾರವನ್ನು ಗಮನಿಸಿದಂತಹ ಭಾರತೀಯ ವೇದ ಋಷಿಗಳು ಅಪೌರುಷೇಯ ಮಂತ್ರಗಳನ್ನು ಸಮತೋಲನಕ್ಕಾಗಿ ದರ್ಶಿಸಿರುತ್ತಾರೆ. ಯಾರೊಬ್ಬರೂ ಸಹ ಮನಸ್ಸು ಹಾಗು ದೇಹದ ಆರೋಗ್ಯಕ್ಕಾಗಿ ಇವುಗಳನ್ನು ಮಂತ್ರ, ಸಂಗೀತ ಸ್ವರಗಳು ಹಾಗು ಬೀಜಾಕ್ಷರಗಳ ಮುಖಾಂತರ ಕ್ರಿಯಾತ್ಮಕವಾಗಿ ಅನುಷ್ಠಾನಿಸಿ ಸ್ವ-ಧರ್ಮದ ಪ್ರಕಾರದಲ್ಲಿ ಸಮತೋಲನವನ್ನು ಗಳಿಸಿಕೊಳ್ಳಬಹುದಾಗಿದೆ. ಇದರಿಂದ ಆರೋಗ್ಯ ಹಾಗು ಭಾಗ್ಯಗಳನ್ನು ತಮ್ಮ ಜೀವನದಲ್ಲಿ ಪಡೆದುಕೊಳ್ಳಬಹುದಾಗಿದೆ.