ಈ ಪುಸ್ತಕದಲ್ಲಿ ಕೊಟ್ಟಿ ರುವಂತೆ, ಋತುಚಕ್ರಕ್ಕೆ ಸಂಬಂಧಿಸಿದ ಆಚರಣೆಗಳ ಹಿಂದಿನ ವಿಜ್ಞಾನದ
ಸಮರ್ಪಕ ಅರಿವು ಮಹಿಳೆಯರು ಋತುಸ್ರಾವಕ್ಕೆ ಸಂಬಂಧಿಸಿದ ಸಮಸ್ಯೆ ಯಿಂದ ಬಳಲುವುದನ್ನು
ತಪ್ಪಿಸಿ, ಋತುಸ್ರಾವದ ಕಡೆಗೆ ಸಕಾರಾತ್ಮ ಕ ಮನೋ ಭಾವವನ್ನು ಬೆಳೆಸಿಕೊಳ್ಳಲು, ಮತ್ತು
ಪ್ರಕೃತಿಯ ಋತುಚಕ್ರದೊಂದಿಗೆ ಹೊಂದಾಣಿಕೆಯೊಂದಿಗೆ ಕಾರ್ಯನಿರ್ವಹಿಸಲು ಕಲಿಯಲು
ಮಹಿಳೆಯರಿಗೆ ಸಹಕಾರಿಯಾಗುತ್ತದೆ.
ಸುಮಾರು ಒಂದು ದಶಕದ ಕಾಲ ಗ್ರಾಮೀಣ ಭಾರತದಲ್ಲಿ ಲೇಖಕಿಯು ನಡೆಸಿದ ಋತುಚಕ್ರದ
ಸ್ವಾ ಸ್ಥ್ಯಕ್ಕೆ ಸಂಬಂಧಿಸಿದ ಕಾರ್ಯಾಗಾರಗಳ ಭಾಗವಾಗಿ ನಡೆಯುತ್ತಿದ್ದ ಸಂವಾದಗಳಲ್ಲಿ
ಹದಿಹರೆಯದ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಹುಡುಕುವ
ಪ್ರಕ್ರಿಯೆಯಲ್ಲಿ ಹುಟ್ಟಿ ಬಂದಂತಹ ಕೃತಿ ಋತುವಿದ್ಯಾ. ಋತುಸ್ರಾವದ ಸಾಂಪ್ರದಾಯಿಕ
ಆಚರಣೆಗಳನ್ನು ಅರಿಯುವ ಪ್ರಯತ್ನವಾಗಿ ಲೇಖಕಿಯು ಭಾರತಾದ್ಯಂತ ಸಂಚರಿಸಿದ್ದಲ್ಲದೇ
ಷಡ್ದರ್ಶನ, ಆಯುರ್ವೇದ, ತಂತ್ರ , ಚಕ್ರ , ಯೋ ಗ, ಆಗಮಶಾಸ್ತ್ರ, ಜ್ಯೋತಿಷ ಶಾಸ್ತ್ರ, ಹಾಗೂ
ಅವುಗಳಿಗೆ ಸಂಬಂಧಿಸಿದ ಉಪಗ್ರಂಥಗಳನ್ನೂ ಒಳಗೊಂಡು ಹಲವಾರು ಪ್ರಾದೇಶಿಕ
ಜ್ಞಾನಪರಂಪರೆಯ ಅಧ್ಯಯನವನ್ನೂ ನಡೆಸಿದರು. ತತ್ಪರಿಣಾಮವಾಗಿ ಈ ಕೃತಿಯು ಸಾಂಸ್ಕೃ ತಿಕ
ಆಚರಣೆಗಳ ವಿವರಣೆಯನ್ನು ಮೀರಿ ಆ ಆಚರಣೆಗಳ ಉಗಮದ ಹಿಂದಿನ ತಾರ್ಕಿಕ ಮತ್ತು
ವೈಜ್ಞಾನಿಕ ಕಾರಣಗಳನ್ನೂ ಒಳಗೊಂಡಿದೆ.
ಋತುಸ್ರಾವಕ್ಕೆ ಸಂಬಂಧಿಸಿದ ಉತ್ತರ ಸಿಗದ ಪ್ರಶ್ನೆಗಳನ್ನು ಹೊಂದಿರುವ ಭಾರತೀಯ
ಮಹಿಳೆಯರಿಗಾಗಿ, ಋತುಸ್ರಾವದ ಆರೋ ಗ್ಯಕ್ಕೆ ಸಂಬಂಧಿಸಿ ಸಂಶೋ ಧನೆ ನಡೆಸಬಹುದಾದ
ವಿಷಯಗಳ ಖಜಾನೆಯನ್ನೇ ಕಂಡುಕೊಳ್ಳುವ ಋತುಚಕ್ರದ ಕುರಿತು ಅಧ್ಯಯನ ನಡೆಸುವ
ಸಂಶೋ ಧಕರಿಗಾಗಿ, ಮಹಿಳೆಯರ ಋತುಚಕ್ರಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಬದಲು
ಋತುಚಕ್ರಕ್ಕೆ ಹೊಂದಿಕೆಯಾಗುವಂತೆ ಕೆಲಸ ಮಾಡುವ ಪ್ರಾಚೀನ ತಂತ್ರಗಾರಿಕೆಯನ್ನು
ಕಂಡುಕೊಳ್ಳಲು ಮಹಿಳಾ ಕ್ರೀಡಾಪಟುಗಳಿಗಾಗಿ, ಹಾಗೂ ಋತುಸ್ರಾವಕ್ಕೆ ಸಂಬಂಧಿಸಿದ
ಆಚರಣೆಗಳೆಲ್ಲವನ್ನೂ ಮೌಢ್ಯ ಎಂದು ಪರಿಗಣಿಸಿ ಅವುಗಳನ್ನು ತೊಡೆದುಹಾಕಬೇಕು ಎಂದು
ಬಯಸುವ ಮಹಿಳಾವಾದಿಗಾಗಿ ಈ ಕೃತಿ.
ಋತು ಎಂದರೆ ಸಂಸ್ಕೃ ತದಲ್ಲಿ ಮುಟ್ಟನ್ನು ಸೂಚಿಸುವ ಒಂದು ಪದ. ವಿದ್ಯಾ ಎಂದರೆ ಜ್ಞಾನ.
ಇಂದಿನ ಕಾಲಕ್ಕೂಪ್ರಸ್ತುತವಾಗಿರುವಂತಹ, ಋತುಚಕ್ರ ವಿಜ್ಞಾನದ ಕುರಿತು ಮಾಹಿತಿ ನೀಡುವ
ವಿವಿಧ ಪ್ರಾದೇಶಿಕ ಜ್ಞಾನಪರಂಪರೆಗಳನ್ನು ಒಗ್ಗೂಡಿಸುವ ಪ್ರಯತ್ನವೇ ಋತುವಿದ್ಯಾ.
Sorry we are currently not available in your region. Alternatively you can purchase from our partners
Sorry we are currently not available in your region. Alternatively you can purchase from our partners