ಐವರು ಸ್ನೇಹಿತರು....
ಹೊಸ ವ್ಯಕ್ತಿಯ ಸೇರ್ಪಡೆ!
ಮುಂದೆ ನಡೆದಿದ್ದೇನು?......
ಕಾಲೇಜು ಜೀವನ, ಗೆಳೆತನ, ಪ್ರೀತಿ, ದ್ರೋಹ, ಅಪರಾಧ , ಸಹಜೀವನ.....
ಈ ಕಾದಂಬರಿಯು, ಒಬ್ಬ ಪ್ರತಿಭಾವಂತ ಹುಡುಗನ ಜೀವನದ ಬಗ್ಗೆ ಹೇಳುತ್ತಾ ಹೋಗುತ್ತದೆ, "ಯುವಕನಾದಾಗ, ಅವನ ಆಯ್ಕೆಗಳು, ಕಾಲೇಜು ಜೀವನದಲ್ಲಿ ಅವನೊಡನೆ ಇದ್ದ ಸ್ನೇಹಿತರು ಹೇಗೆ ಅವನ ಜೀವನದ ಮೇಲೆ ಪ್ರಭಾವ ಬೀರುತ್ತವೆ? ಅವನ ಬಾಳಿನಲ್ಲಿ ಬಂದು ಹೋಗುವ ವ್ಯಕ್ತಿಗಳು, ಎಷ್ಟೆಲ್ಲಾ ಬದಲಾವಣೆಗಳಿಗೆ ಕಾರಣವಾಗುತ್ತಾರೆ? ಅವನ ಜೀವನ ಹೇಗೆ ತಿರುವು ಪಡೆದುಕೊಳ್ಳುತ್ತದೆ?" ಎಂಬುದೇ ಈ ಕಾದಂಬರಿಯ ಕಥಾವಸ್ತು.
ಪ್ರಕಾಶ್ ನಾರಾಯಣ ಕೆ. ಅವರು ಚಿಕ್ಕಮಗಳೂರಿನವರು. ವೃತ್ತಿಯಲ್ಲಿ ಇಂಜಿನಿಯರ್. ಬಾಲ್ಯದಿಂದಲೇ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ಇವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಆರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಿರುವುಗಳು ಭಾಗ-1 ಇವರ ಮೊದಲ ಕಾದಂಬರಿ.