Share this book with your friends

Hanumadaasana Ramayana Mahakavya / ಹನುಮದಾಸನ ರಾಮಾಯಣ ಮಹಾಕಾವ್ಯ

Author Name: Sanjay Desai | Format: Paperback | Genre : Poetry | Other Details

   “ಕೋವಿಡ್ 19” ಎಂಬ “ರಾವಣ”ನಂತಹ ಅಸುರನು ಜಗತ್ತಿಗೆ ಭಯಪಡಿಸಿದ್ದು ಎಲ್ಲರ ಮನದಲ್ಲಿ ಅಚ್ಚು ಹಾಕಿದಂತಿದೆ. ಭಿನ್ನ ಭಿನ್ನ ವಯಸ್ಸಿನ ಎಷ್ಟೋ ಜನರು ಈ ಕಷ್ಟಕ್ಕೆ ಬಲಿಯಾದರು. ಮನಸ್ಸಿನ ವೇದನೆ ಅಳಿಯಲಾರದಂತದು. ಲೇಖಕರ ಹಾಗೆ ಅನುಭವಿಸಿದರೆ ಅದರ ಬಗ್ಗೆ ಗೊತ್ತಾಗುವುದು. ಯಾರು ಇಂತಹ ಯಾತನೆಗೆ ಒಳಗಾಗಬಾರದೆಂದು ದೇವರಲ್ಲಿ ಪ್ರಾರ್ಥನೆ. ಕಾಯಿಲೆ ವಾಸಿ ಮಾಡಲು ಹೆಚ್ಚಿನ ಶಕ್ತಿಯಾಗಿ ದೇವರ ರೂಪದಲ್ಲಿ ಬಂದ ವೈದ್ಯರು, ಔಷಧಿ, ಪ್ರಮುಖವಾಗಿ ಅವುಗಳಲ್ಲಿ ಇಟ್ಟ ನಂಬಿಕೆ ಅವರನ್ನು ಕಾಪಾಡಿತು. ಹನುಮನ ಬಗ್ಗೆ ಕವನ ಬರೆಯಲು ಇದೇ ಒಂದು ಸ್ಪೂರ್ತಿ ಆಯಿತು. ಅದೇ ಬರಹ ಪರಿವರ್ತಿಸಿ, ಹನುಮನ ಪ್ರಭುಗಳಾದ ಶ್ರೀರಾಮನಾಮದಲ್ಲಿ ಮುಂದೆ “ರಾಮಾಯಣ ಮಹಾಕಾವ್ಯ”ಎಂದು ರೂಪಗೊಂಡಿತು. 

    “ಹನುಮದಾಸ”, ಎಂಬ ಕಾವ್ಯನಾಮ ಇಟ್ಟುಕೊಂಡು, ಈ ಕಾವ್ಯವನ್ನು “ಹನುಮದಾಸನ ರಾಮಾಯಣ ಮಹಾಕಾವ್ಯ” ಎಂಬ ಹೆಸರಿನ ಕೃತಿಯನ್ನಾಗಿ ರಚಿಸಲಾಗಿದೆ. ವಾಲ್ಮೀಕಿ ರಾಮಾಯಣ, ಟಿವಿ ಹಾಗು ಪೌರಾಣಿಕ ಚಲನಚಿತ್ರಗಳಿಂದ ಸ್ಪೂರ್ತಿಗೊಂಡ ಕವಿ, ಮೂಲ ರಾಮಾಯಣದ ಸಾರ ಬದಲಾಗದಂತೆ, ಹಾಸ್ಯ ಮತ್ತು ವಿನೋದದ ಮಾತುಗಳನ್ನು ಉಪಯೋಗಿಸಿ ಈ ಕಾವ್ಯವನ್ನು ಓದುವವರಿಗೆ ಉತ್ಸಾಹ ತುಂಬಿದ್ದಾರೆ. ಧರ್ಮಾಧರ್ಮದಿ ಹೋರಾಡಿದ ಎಷ್ಟೋ ಪಾತ್ರಗಳನ್ನು ವಿವರಿಸಿದ್ದಾರೆ. ಶ್ರೀರಾಮನ ಸೇವೆ ಮಾಡುವ ವಾನರರು, ನಾಯಕತ್ವದ ನೀತಿ ಪಾಠಗಳು, ಪರಾಕ್ರಮ, ತ್ಯಾಗ, ನಿಷ್ಠೆ, ಭಗವಂತ ಹಾಗೂ ಕರ್ತವ್ಯಗಳಲ್ಲಿ ತೋರಿಸಿದ ಭಕ್ತಿ ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಿದಂತೆ ಅದನ್ನು ಕವಿಯು ತಮ್ಮ ಅಕ್ಷರಗಳಲ್ಲಿ ಬರೆದಿದ್ದಾರೆ.

Read More...
Paperback
Paperback 250

Inclusive of all taxes

Delivery

Item is available at

Enter pincode for exact delivery dates

Also Available On

ಸಂಜಯ ದೇಸಾಯಿ

    ಗ್ರೂಪ ಕ್ಯಾಪ್ಟನ ಸಂಜಯ ದೇಸಾಯಿ ಅವರ ವೃತ್ತಿ ಕನ್ನಡ ಲೇಖಕರ ರೂಪದಲ್ಲಿ ಪ್ರಾರಂಭಿಸಿದ್ದು ಇದೇ ಕೃತಿಯಿಂದ. ಅವರು ಭಾರತೀಯ ವಾಯುಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಾ, ಭಾರತದ ರಾಜಧಾನಿ ಇಂದ್ರಪ್ರಸ್ಥ ಅಂದರೆ, ನವ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಕವನ ಬರೆಯುವ ಅವರ ಹವ್ಯಾಸ ಮಹಾವಿದ್ಯಾಲಯದಲ್ಲಿಯೇ ಆರಂಭವಾಗಿತ್ತು. “ಬಾರ್ಡರ್” ಎಂಬ ಹಿಂದಿ ಚಲನಚಿತ್ರವನ್ನು ನೋಡಿ ಆಂಗ್ಲ ಭಾಷೆಯಲ್ಲಿ “ದ ಬ್ಯಾಟಲ್ ಆಫ್ ಲೊಂಗೆವಾಲಾ” ಎಂಬ ಕವನ ಬರೆದರು. ಪ್ರಸ್ತುತ ಮಹಾಕಾವ್ಯದ ಚಿಕ್ಕರೂಪವಾದ “ರಾಮಾಯಣ” ಆಂಗ್ಲ ಭಾಷೆಯಲ್ಲಿ ೨೦೧೦ ರಲ್ಲಿ ಬರೆದಿದ್ದು, ಈ ಕೃತಿಯ ನಿವೇದನೆಯ ಅನುಬಂಧವಾಗಿ ಸೇರಿಸಿದೆ. ಇನ್ನೂ ಹಲವು ಕೃತಿಗಳನ್ನು ರಚಿಸುವ ಯೋಜನೆ ಇದೆ, ಪ್ರಮುಖವಾಗಿ ಪೌರಾಣಿಕ ಮತ್ತು ದೇಶಭಕ್ತಿಯ ವಿಷಯಗಳಲ್ಲಿ. 
  ಭಾರತ ಮಾತೆಗೆ ಜಯವಾಗಲಿ.

Read More...

Achievements

+6 more
View All