ಭಗವಂತನ ಗೀತೆಯು ಕೃಷ್ಣ ಪರಮಾತ್ಮನು ಅರ್ಜುನನಿಗೆ ಕುರುಕ್ಷೇತ್ರದಲ್ಲಿ ಬೋಧಿಸಿದಂತಹ ವಿಚಾರವಾಗಿದೆ. ಇದನ್ನು ಗಮಕ ಕಲೆಯ ರೂಪಕ್ಕೆ ತರಲು ಚತುಷ್ಪಾದ (ಅಂದರೆ ನಾಲ್ಕು ಸಾಲು; ಒಂದು ಸಾಲಿಗೆ ನಾಲ್ಕು ಪದಗಳು) ಪ್ರಕಾರದಲ್ಲಿ ಕನ್ನಡದಲ್ಲಿ ಯತ್ನಿಸಿರುವುದಾಗಿದೆ.
ಡಾ. ಚಂದ್ರಮೌಳಿ ಎಂ.ಎಸ್. ರವರು ಒಬ್ಬ ಸತ್ಯವಾದ ಜಿಜ್ಞಾಸು, ಧನಾತ್ಮಕ ವಿಚಾರಗಳ ಪ್ರಾಮಾಣಿಕ ವಿನಿಮಯಕಾರರು, ವೇದ ವಿಜ್ಞಾನ ಹಾಗು ಮನಃಶಾಸ್ತ್ರದ ನಿಜವಾದ ತತ್ವಜ್ಞಾನಿ ಮತ್ತು ಪ್ರತಿಯೊಬ್ಬರೂ ಸಹ ಸಮಾಧಾನವಾಗಿ-ಸುಖವಾಗಿ-ಶಾಂತಿಯುತವಾಗಿ ಜೀವಿಸಬೇಕೆಂದು ಬಯಸುವ ಜೀವನದ ನಿಜವಾದ ಪ್ರೀತಿಯ ಮೂಲಕ ವಿಶ್ವ ಸಾಮರಸ್ಯದ ಅನ್ವೇಷಕರು.