Share this book with your friends

#Boss Lady / #ಬಾಸ್ ಲೇಡಿ ಹಾರು ಹಾರು, ಏರು & ಮಿನುಗು

Author Name: Smita Shetty | Format: Paperback | Genre : Self-Help | Other Details

ಸಾರಾಂಶ
ಜೀವನದಲ್ಲಿ ಇನ್ನೂ ಎತ್ತರ ಕ್ಕೆ ಹಾರುವ ಕನಸು ಕಾಣುತ್ತಿದ್ದೀರಾ? ಬಾಸ್ ಮಹಿಳೆಯಾಗಲು ಯಾವ ತಡೆ ಇದೆ ನಿಮಗೆ
'ಬಿ ಎ ಬಾಸ್ ಲೇಡಿ' ಪುಸ್ತಕದಲ್ಲಿ ಲೇಖಕಿ ತಮಗಾದ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ ಮತ್ತು ತಾನು ಕಲಿತುಕೊಂಡ ಅಂಶಗಳು ತನ್ನ ವ್ರತ್ತಿ ಜೀವನದ ಬೆಳವಣಿಗೆಗೆ ಹೇಗೆ ಸಹಾಯ ಮಾಡಿದವು ಎಂಬ ಬಗ್ಗೆ ಹೇಳಿಕೊಂಡಿದ್ದಾರೆ. ದೊಡ್ಡ ಕನಸು ಕಾಣುತ್ತಿರುವ ಮಹಿಳೆಯರನ್ನು ಇನ್ನಷ್ಟು ಬಲಪಡಿಸಲು ಲೇಖಕಿಯ ಹ್ರದಯಾಂತರಂಗದಿಂದ ಬಂದ ಮಾತುಗಳಿವು. ಇನ್ನೂ ಹೆಚ್ಚಿನದನ್ನು ಬಯಸುವ ಮಹಿಳೆಯರಿಗೆ ತನ್ನ ಮಾತುಗಳು ಪ್ರೇರಣೆ ಆಗಬೇಕು, ಅವರು ಮುಂದಿನ ಹೆಜ್ಜೆಯನ್ನು ಧೈರ್ಯದಿಂದ ಇಡಬೇಕು ಎನ್ನುವುದು ಈ ಪುಸ್ತಕದ ಏಕೈಕ ಉದ್ದೇಶ. ಇದು ಬಯಕೆಗಳನ್ನು ಹೊತ್ತ ಮಹಿಳೆಯರನ್ನು ಬೆಂಬಲಿಸುತ್ತಿರುವ ಪುರುಷರಿಗಾಗಿಯೂ ಹೌದು. ಪ್ರತಿ ಮಹಿಳೆಯ ಒಳಗೂ ಒಂದು ವಿಶೇಷ ಕಿಡಿ ಇರುತ್ತದೆ. ಅದು ಬೆಳಕಾಗುವಂತೆ ಮಾಡಬೇಕಾಗುತ್ತದೆ ಅಷ್ಟೆ. ಲೇಖಕಿ ಯ ಹ್ರದಯಕ್ಕೆ ಹೆಚ್ಚು ಸನಿಹವಾದ ವಿಷಯ ಇದು. ಈ ಪುಸ್ತಕ ನಿಮಗೊಬ್ಬ ಸ್ನೇಹಿತ/ಸ್ನೇಹಿತೆಯಂತೆ, ಜೀವನದ ಕವಲುದಾರಿಯಲ್ಲಿ ಮಾರ್ಗದರ್ಶಕ‌ನ ಪಾತ್ರ ವಹಿಸಬಲ್ಲದು. ನಿನ್ನಿಂದ ಏನೂ ಆಗದು, ಸುಮ್ಮನಿರು ಎಂದು ಎಲ್ಲರೂ ನಿನಗೆ ಹೇಳಿದಾಗ ಈ ಪುಸ್ತಕ ನಿನ್ನನ್ನು ಹುರಿದುಂಬಿಸುತ್ತದೆ. ಪ್ರತಿಯೊಬ್ಬ ಮಹಿಳೆಯೂ ತಾನು ಈ ತನಕ ಸಾಧಿಸಿದಕ್ಕಿಂತಲೂ ಹೆಚ್ಚು ಸಾಧಿಸಬೇಕು ಎನ್ನುವುದೇ ಲೇಖಕಿಯ ಬಯಕೆ. ಇದಕ್ಕಾಗಿ ಜೀವನದಲ್ಲಿ ತನ್ನ ಅನುಭವಗಳನ್ನು ಆಕೆ ಹಂಚಿಕೊಂಡ ಉದ್ದೇಶ ನೀವು ಶೀಘ್ರವಾಗಿ ಇನ್ನೂ ಎತ್ತರ ಕ್ಕೆ ಏರುವಂತಾಗಲಿ ಎನ್ನುವುದು ಮಾತ್ರ.

Read More...
Paperback
Paperback 150

Inclusive of all taxes

Delivery

Item is available at

Enter pincode for exact delivery dates

Also Available On

ಸ್ಮಿತ ಶೆಟ್ಟಿ

ಲೇಖಕಿಯ ಬಗ್ಗೆ
ಸ್ಮಿತಾ ಶೆಟ್ಟಿಯವರು ಓರ್ವ ಪ್ರಮುಖ ವಿಶ್ವ ವ್ಯಾಪಾರದ  ಬಗ್ಗೆ ಮಾಹಿತಿ ನೀಡಬಲ್ಲ ನಾಯಕಿ, ಮುಂಚೂಣಿಯ ಮತ್ತು "ಗ್ರಾಹಕ ರ ಮನ ಒಲಿಸಬಲ್ಲ ಸಾಮರ್ಥ್ಯ ಉಳ್ಳವರಾಗಿದ್ದಾರೆ. ಹಲವು ತಂಡಗಳಿಗೆ ಮಾರ್ಗದರ್ಶಕರಾಗಿದ್ದಾರೆ ಮತ್ತು ಹಲವು ತಂಡಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಐಎಸ್ ಬಿ  ಮತ್ತು ಐಐಎಮ್- ಬಿ ಇದರ ಹಳೆ ವಿದ್ಯಾರ್ಥಿ ನಿ ಯಾಗಿದ್ದಾರೆ. ಆಹಾರ ವಿಜ್ಞಾನ ಮತ್ತು ಪೌಷ್ಟಿಕ ಆಹಾರದ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅವರು ಪಡೆದುಕೊಂಡಿದ್ದಾರೆ. ವಿಶೇಷತಃ ಘಟಕಾಂಶ ವಹಿವಾಟು ನಡೆಸಿ ತನ್ನ ಸಾಮರ್ಥ್ಯ ಮತ್ತು ಗುಣಮಟ್ಟ ದಿಂದಾಗಿ ಕಚೇರಿ ವ್ಯವಹಾರದಲ್ಲಿ ಪಕ್ಕನೆ ಮೇಲೇರಿದವರು. ಸಹಾನುಭೂತಿಯುಳ್ಳ, ನಾಯಕತ್ವದ ಅರಿವನ್ನು ಹೊಂದಿರುವ ಅವರು ಅನೇಕ ಪ್ರಶಸ್ತಿಗಳನ್ನು, ಪದಕಗಳನ್ನು ಪಡೆದುಕೊಂಡಿದ್ದಾರೆ. ಉದ್ಯೋಗ ವನ್ನು ಆರಂಭಿಸಿದ ಅನೇಕ ಪುರುಷ ಮತ್ತು ಮಹಿಳೆಯರಿಗೆ ಅವರು ಮಾರ್ಗದರ್ಶನ ಮಾಡುವ ಮೂಲಕ ಹೆಸರು ಸಂಪಾದಿಸಿಕೊಳ್ಳುವಂತೆ ಮಾಡಿದ್ದಾರೆ. ಬರವಣಿಗೆ ಎಂದರೆ ಅವರಿಗೆ ಅಪ್ಯಾಯಮಾನ. ಜನರ ಮನಸ್ಸಿಗೆ ಮುಟ್ಟುವಂತೆ ಮಾತಾಡಬಲ್ಲವರು. ಕಿರು ವಯಸ್ಸಿನವರು ತಮ್ಮ ಕನಸುಗಳನ್ನು ಮತ್ತು ಬಯಕೆಗಳನ್ನು ಮುಕ್ತವಾಗಿ ಹೊರಹಾಕಲು ಅವಕಾಶ ಇರುವ  "ಸಖಿ ಟ್ರೈಬ್" ಎಂಬ ಹೆಸರಿನ ಮಹಿಳೆಯರ ಒಂದು ವರ್ಗವನ್ನೇ ಅವರು ಕಟ್ಟಿದ್ದಾರೆ. ಯುವತಿಯರನ್ನು ಇನ್ನೂ ಹೆಚ್ಚು ಆಶಿಸಲು ಪ್ರೇರೇಪಿಸುವುದೇ ಅವರ ಜೀವನದ ಗುರಿ.

Read More...

Achievements

+10 more
View All