Share this book with your friends

Ee Mounava Taalenu... / ಈ ಮೌನವ ತಾಳೆನು... The Scream of Silence, Unveiled by the Power of LOVE. / ಮೌನದಲ್ಲಿ ಅಡಗಿರುವ ನೋವು ನಲಿವುಗಳನ್ನು ಅನಾವರಣಗೊಳಿಸುವ ಶಕ್ತಿಯೇ ಪ್ರೀತಿ.

Author Name: Nabha | Format: Paperback | Genre : Literature & Fiction | Other Details

ಇದು ಅವಳ ಕಥೆ.

ಮಾತಿನ ಮಲ್ಲಿ ಮೌನಕ್ಕೆ ಶರಣಾದ ಕಥೆ.

ದುರಂತಕ್ಕೆ ಒಳಗಾಗಿ ಸಂಬಂಧಗಳ ಹಾಗೂ ಜೀವನದ ಮೇಲಿನ ನಂಬಿಕೆ ಕಳೆದುಕೊಂಡ ಕಥೆ.

ಉದ್ಯಾನನಗರಿಯಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿರುವ ಇಪ್ಪತ್ತೆಂಟು ವರ್ಷದ ಸುಮನ್, ಏಳು ವರುಷಗಳ ಹಿಂದೆ ನಡೆದ ಕ್ರೂರ ಘಟನೆಯೊಂದರಲ್ಲಿ ಸಾವನ್ನು ಜಯಿಸಿ ಬಂದರೂ, ಮೌನದ ಕಣಿವೆಗೆ ಜಾರಿದ ಕಥೆ.

ತನ್ನೊಳಗಿನ ಕೀಳರಿಮೆಯನ್ನು ದೂರಗೊಳಿಸಲು ಅವಳು ನಡೆಸುವ ಆಂತರಿಕ ಯುದ್ಧದ ಕಥೆ. 

ಅವಳ ಮೌನವನ್ನು ಬೇಧಿಸಲು ಅವನು ನಡೆಸುವ ಪ್ರಯತ್ನಗಳ ಕಥೆ.

Read More...
Paperback
Paperback 1300

Inclusive of all taxes

Delivery

Item is available at

Enter pincode for exact delivery dates

Also Available On

ನಭಾ

ತನ್ನ ಹತ್ತನೆಯ ವಯಸ್ಸಿನಿಂದಲೇ ಅಶ್ವಿನಿ, ತ್ರಿವೇಣಿ, ಸಾಯಿಸುತೆ ಮುಂತಾದವರ ಕಥೆಗಳನ್ನು ಓದುತ್ತ ಬಂದು ಕಲ್ಪನೆಗಳ ಲೋಕದಲ್ಲೇ ಇರಲು ಬಯಸುವ ನಭಾ(ಉಪನಾಮ), 2020ನೇ ಇಸವಿಯಲ್ಲಿ ಕಥೆಗಳ ಲೋಕಕ್ಕೆ ಬರಹಗಾರ್ತಿಯಾಗಿ ಕಾಲಿಟ್ಟರು. 

ವಿಜ್ಞಾನ ಕ್ಷೇತ್ರದಲ್ಲಿ ಪದವೀಧರೆ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಉದ್ಯಮಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಪ್ರಸ್ತುತ ಉದ್ಯಾನನಗರಿಯಲ್ಲಿ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ. 

"ಜೇನ ಹನಿ ಮುತ್ತು", "ಈ ಮೌನವ ತಾಳೆನು" ಹಾಗೂ "ನಿರೀಕ್ಷೆಯಲ್ಲಿ - ಯದಾಹಂ ಜೀವಾಮಿ" ಎಂಬ ಮೂರು ಕಾದಂಬರಿಗಳ ಬರೆದಿರುವ ನಭಾರ ಬರಹ ಶೈಲಿ ಆಧುನಿಕ ಹಾಗೂ ಹಾಸ್ಯ ಪ್ರಧಾನವಾಗಿದೆ.

Read More...

Achievements