10 Years of Celebrating Indie Authors

Share this book with your friends

ManoRekhegalu / ಮನೊರೇಖೆಗಳು hani kudi kavanagalu

Author Name: Vidyaswaroop | Format: Paperback | Genre : Letters & Essays | Other Details

ಅಂತಃಪ್ರಜ್ಞೆ

ಸಂಸ್ಕೃತಿ, ಸಂಸ್ಕಾರ, ಶಿಸ್ತು, ಸಂಯಮ ಸಹನೆ, ಸತ್ವ, ಶ್ರಮ, ಸ್ನೇಹ, 
ಸತ್ಯ ಹೀಗೆ ಶಿಲ್ಪಿಯ ಸೃಷ್ಟಿಯೆಂಬಂತೆ ಕಡೆದು ತಿದ್ದಿ ತೀಡಿ 
ಸಾಕಾರಗೊಂಡಿತ್ತು ಒಂದು ಭವ್ಯ ಮೂರ್ತಿ.


ಜನರ ಹಾವ, ಭಾವ, ರೀತಿ, ರಿವಾಜು, ನಡೆ, ನುಡಿ, ಕೃತಿ, 
ಕಾರ್ಯಗಳ ನಗ್ನ ದರ್ಶನ ಬದುಕಿನ ಹಲವಾರು ಮಜಲು, 
ಮಗ್ಗಲುಗಳ ಬಯಲುಗೊಳಿಸಿತ್ತು.


ಇವೆರಡರ ತೀಕ್ಷ್ಣ ಸಂಘರ್ಷದ ಪೆಟ್ಟುಗಳು ಭವ್ಯಮೂರ್ತಿಯನು 
ಭಗ್ನಗೊಳಿಸಿ ನಾಮಾವಶೇಷ ಮಾಡುವ ಮುನ್ನ ಎಚ್ಚೆತ್ತುಕೊಂಡಿತ್ತು 
ನಿಷ್ಕಪಟ, ನಿಷ್ಕಲ್ಮಶ, ನಿರ್ಮಲ, ಮುಗ್ಧ ಮನಸ್ಸು

Read More...
Paperback
Paperback 180

Inclusive of all taxes

Delivery

Item is available at

Enter pincode for exact delivery dates

Also Available On

"ವಿದ್ಯಾಸ್ವರೂಪ್"

ಅನಾಮಿಕ !!

 ಪ್ರಾಣಿ, ಪಕ್ಷಿಗಳಿಗಿಲ್ಲ ಹೆಸರು. ಗಿಡ ಮರಗಗಳಿಗಿಲ್ಲ ಹೆಸರು.
 ಹೂವು, ಹಣ್ಣುಗಳಿಗಿಲ್ಲ ಹೆಸರು. ಬೆಟ್ಟ, ಗುಡ್ಡಗಳಿಗಿಲ್ಲ ಹೆಸರು.

 ಊರು, ಕೇರಿ, ಹಾದಿ, ಬೀದಿ, ನದಿ, ವನ ಹೀಗೆ ಎಲ್ಲದಕ್ಕೂ 
 ಹೆಸರಿಟ್ಟವ ಮಾನವ, ತಾನು ಗುರುತಿಸುವಿಕೆ ಸುಲಭ 
 ಮಾಡಿಕೊಳ್ಳಲು.
 
  ಸಂಗೀತಕ್ಕೆ ತಾನ್ ಸೇನ್, ನೃತ್ಯಕ್ಕೆ ಶಾಂತಲೆ,
 ಶಿಲ್ಪಿಗೆ ಜಕಣಾಚಾರಿ, ಚಿತ್ರಕಲೆಗೆ ಮೈಕೆಲೇಂಜಾಲೊ
 ಹೀಗೆ ಯಾವುದದಾರೂ ಸಾಧನೆಯೊಡನೆ ಗುರುತಿಸಿ 
 ಶಾಶ್ವತ ನೆಲೆ ಕಂಡುಕೊಳ್ಳುವಂತಿರಬೇಕು ಹೆಸರು.
 
 ಜಾತಕದಲ್ಲಿ ಕೂಡಿಬಂದದ್ದು, ಪೋಷಕರು ಇಟ್ಟಿದ್ದು, 
 ಗೆಳೆಯರು ಗೇಲಿಗೆ ಕರೆದದ್ದು, ಇನ್ಯಾವುದೋ ಕಾರಣಕ್ಕೆ 
 ಸಮಾಜ ಬಲವಂತವಾಗಿ ಹೇರಿದ ಅಡ್ಡಹೆಸರುಗಳ್ಯಾವುವು
 ನನ್ನ ಅನ್ವರ್ಥನಾಮವಲ್ಲ !!
 
 ಈ ಸ್ಥಿತಿಯಲ್ಲಿ, ಇದ್ಯಾವುದರ ನೆಲೆಗಟ್ಟಿನಲ್ಲಿ ತಳುಕು 
 ಹಾಕಿಕೊಳ್ಳದೇ ಉಳಿಯಲಿಚ್ಚಿಸುವ ನಾನು - 
 ಅನಾಮಧೇಯ !! 

Read More...

Achievements

+5 more
View All