You cannot edit this Postr after publishing. Are you sure you want to Publish?
Experience reading like never before
Sign in to continue reading.
"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಈ ಪುಸ್ತಕವು ಬ್ರಹ್ಮಾಂಡದ ದೈವಿಕ ಸೃಷ್ಟಿಯ ಶಕ್ತಿ "ಸ್ತ್ರೀ" ಬಗ್ಗೆ, ಲೇಖಕರು ಅತ್ಯಂತ ಅದ್ಭುತವಾದ ಕಲ್ಪನಾಲಹರಿಯನ್ನು ಪ್ರಸ್ತುತಪಡಿಸುತ್ತಿದ್ದಾರೆ. ಪುರಾಣಕಾಲದಿಂದಲೂ ಸ್ತ್ರೀಯನ್ನು "ಜಗನ್ಮಾತೆ" "ಆದಿಶಕ್ತಿ" ಯಾಗಿ ಆಹ್ವಾನಿಸಿ, ದುಷ್ಟ ಶಕ್ತಿಗಳ ಶಿಕ್ಷಕಿಯಾಗಿ ಶಿಷ್ಟರ ರಕ್ಷಕಿಯಾಗಿ "ಮಾತೆ" ಯಾಗಿ ಪೂಜೆಗೊಳ್ಳುತ್ತಾಳೆ. ಇಂದಿನ ಸಮಾಜಕ್ಕೆ ಇಂತಹ ಶಕ್ತಿಯ ಜಾಗೃತಾವಸ್ಥೆ ಅವಶ್ಯವಾಗಿದೆ. ಅನಾದಿಕಾಲದಿಂದಲೂ ಮಹಿಳೆಯರ ಸಾಮಾಜಿಕ ಸಮಸ್ಯೆಗಳು, ರೂಪ, ಬಣ್ಣ, ಶಿಕ್ಷಣದಂತಹ ಸವಾಲುಗಳನ್ನು ಎದುರಿಸಿ ಜಯಸಿದ ಪಾತ್ರಗಳು ಈ ಪುಸ್ತಕದ ಬರಹಕ್ಕೆ ಸ್ಫೂರ್ತಿಯಾಗಿದೆ. ಈ ಪುಸ್ತಕದ ಕಥಾನಾಯಕಿ "ಸಾವರಿ" ಅವರ ಬದುಕು ಪರಿಸ್ಥಿತಿಯ ಅಸಮತೋಲನದಿಂದಾಗುವ ಮಾನಸಿಕ ಖಿನ್ನತೆ, ಅಧೈರ್ಯದ ಗೊಂದಲಗಳಿಂದ ಅಚಾತುರ್ಯದ ನಡವಳಿಕೆಯನ್ನು ಬದಲಿಸಿ ಹಸನಾದ ಬಾಳನ್ನು ನಡೆಸುವ ಮಾರ್ಗಸೂಚಿಯಾಗಿದೆ.
ಅಕ್ಷಯ ನಾಡಿಗೇರ
ಶ್ರೀ. ಅಕ್ಷಯ ನಾಡಿಗೇರ ಅವರು ಸಿವಿಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ಪ್ರಸಿದ್ಧ ಕನ್ಸ್ಟ್ರಕ್ಷನ್ ಕಂಪೆನಿಯಾದ Larsen & Toubro (L&T) ಯಲ್ಲಿ ಅಸಿಸ್ಟೆಂಟ್ ಇಂಜಿನಿಯರಿಂಗ್ ಮ್ಯಾನೇಜರ್ ಆಗಿ ವೃತ್ತಿ ಸಲ್ಲಿಸುತ್ತಿದ್ದಾರೆ. ಅವರು ಏಷ್ಯಾ ಖಂಡದ "ಯಂಗೆಸ್ಟ್ ಚಾರ್ಟೆಡ್ ಇಂಜಿನಿಯರ" ಎಂದು "ಏಷ್ಯಾ ಬುಕ್ ಆಫ್ ರೆಕಾರ್ಡ್ಸ್" ನಲ್ಲಿ ದಾಖಲೆ ರಚಿಸಿದ್ದಾರೆ. ಅವರ ಪ್ರಾಥಮಿಕ ಸಾಹಿತ್ಯ ಕೃತಿಗಳು, ಕವಿತೆಗಳು, ಗೀತರಚನೆ, ಮತ್ತು ಹಲವಾರು ನಾಟಕಗಳಿಗೆ ಕಥೆಗಾರರಾಗಿ ಕಾಲೇಜಿನ ದಿನಗಳಲ್ಲಿ ಪ್ರಾರಂಭವಾದವು. ಅವರು ಸಮಾಜ, ಪ್ರಕೃತಿ, ಮತ್ತು ಪ್ರೀತಿಗೆ ಸಂಬಂಧಿಸಿದಂತೆ ೧೦೦ ಕ್ಕೂ ಹೆಚ್ಚು ಸಾಹಿತ್ಯ ಮತ್ತು ಕವಿತೆಗಳನ್ನು ರಚಿಸಿದ್ದಾರೆ. ಅವರಿಗೆ ೨೦೧೪-೨೦೧೫ ರಲ್ಲಿ "ಭೂಮಿ ತಿರುಗದೆ ನಿಲ್ಲಲ್ಲಿ" ಮತ್ತು “ಸನಿಹ ಸನಿಹ" ರಚನೆಗೆ "ಕವಿ ರತ್ನ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಅವರ ಪ್ರಮುಖ ತಾಂತ್ರಿಕ ಬರವಣಿಗೆಯ ಕೌಶಲ್ಯಗಳು SPRINGER, ELSEVIER, TECHNOPRESS, ASCE ಮುಂತಾದ ಅಂತರರಾಷ್ಟ್ರೀಯ ವೈಜ್ಞಾನಿಕ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆ. ಇಂಡಿಯನ್ ಕಾಂಕ್ರೀಟ್ ಇನ್ಸ್ಟಿಟ್ಯೂಷನ್ (IEI) ಮತ್ತು ಅಲ್ಟ್ರಾಟೆಕ್ನಿಂದ ೨೦೧೭ -೨೦೧೮ ರಲ್ಲಿ "ಕಾಂಕ್ರೀಟ್ ನಲ್ಲಿ ಅತ್ತ್ಯುತ್ತಮ ಸಂಶೋಧನೆ" ಪ್ರಶಸ್ತಿಗೆ ಪಾತ್ರರಾದರು.
ಅವರು ಆಂಗ್ಲ ಭಾಷೆಯಲ್ಲಿ ರಚಿಸಿದ "ಸಾವರಿ" ಎಂಬ ಕಾದಂಬರಿಯನ್ನು ಜಸ್ಟಿಸ್. ಶ್ರೀ. ಸಂತೋಷ್ ಹೆಗ್ಡೆ ಅವರು ಮುನ್ನುಡಿ ಬರೆದು ಬೆಂಬಲಿಸಿದರು. ಆ ಪುಸ್ತಕದ ೩೦,೦೦೦ ಅಧಿಕ ಪ್ರತಿಗಳು ಮಾರಾಟವಾಗಿ "ಮಹಿಳಾ ಕಲ್ಯಾಣ ಇಲಾಖೆ" ಗೆ ಸುಮಾರು ೧೫,೦೦,೦೦೦ ರೂಪಾಯಿಗಳನ್ನು ದಾನಮಾಡಿದ್ದಾರೆ. ಈ ಕಾರ್ಯಕ್ಕಾಗಿ ಬೆಂಬಲಿಸಿದ ಎಲ್ಲ ಓದುಗಾರರಿಗೆ ಹೃದಯ ಪೂರ್ವಕ ವಂದನೆಗಳನ್ನು ಅರ್ಪಿಸುತ್ತಾರೆ.
ತಮ್ಮ ಜೀವನದ ಪ್ರತಿ ಹಂತದಲ್ಲೂ ಆತ್ಮವಿಶ್ವಾಸ ತುಂಬಿ ಪ್ರೋತ್ಸಾಹಿಸಿದ ಡಾ.ಕೆ.ಎಂ ಮಿನಿ ಮತ್ತು ಡಾ.ಆರ್.ಬಿ.ಖಾದಿರನಾಯ್ಕರ್ ಅವರಿಗೆ ಧನ್ಯವಾದಗಳನ್ನು ವ್ಯಕ್ತಪಡಿಸುತ್ತಾರೆ.
ಬರವಣಿಗೆಯ ಕೌಶಲ್ಯದ ಹೊರತಾಗಿ ಗೌರವಾನ್ವಿತ ಮಾಜಿ ರಾಷ್ಟ್ರಪತಿ ಡಾ II ಎಪಿಜೆ ಅಬ್ದುಲ್ ಕಲಾಂ ಅವರು ಬೆಳಗಾವಿಯಲ್ಲಿ ಉದ್ಘಾಟಿಸಿದ "ಯು-ಯೂತ್ ಫೌಂಡೇಶನ್-ದಕ್ಷಿಣ" ಅಧ್ಯಕ್ಷರಾಗಿ ಪ್ರಮುಖ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದರು, "ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘದ" ಕೌನ್ಸಿಲ್ ಸದಸ್ಯರಾಗಿ, "ಏಕತಾ ಧರಂ - ವಿವಿಧ ಧರ್ಮಗಳನ್ನು ಒಂದುಗೂಡಿಸುವ ವೇದಿಕೆ" ಯಲ್ಲಿ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ. "ಇನ್ಸ್ಟಿಟಿಸ್ಟ್ ಆಫ್ ಇಂಜಿನಿಯರ್ಸ್" ನಲ್ಲಿ ಸದಸ್ಯ ಮತ್ತು ಚಾರ್ಟರ್ಡ್ ಇಂಜಿನಿಯರ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅವರು "ಮಹಿಳೆಯರ ಸುರಕ್ಷತೆ ಮತ್ತು ಮಹಿಳೆಯರ ಜೀವನದಲ್ಲಿ ಪುರುಷರ ಪಾತ್ರ" ಕುರಿತು TED-ED ಮಾತುಕತೆಗಳಿಗೆ ಆಹ್ವಾನಿತ ಭಾಷಣಕಾರರಾಗಿದ್ದರು. ಗಮನಾರ್ಹ ಭಾಷಣಕಾರರಾದ ಡಾ II ಶಶಿ ತರೂರ್, ಗೋಪಾಲ್ ಕೃಷ್ಣ ಗಾಂಧಿ, ಮತ್ತು ಮುಂತಾದ ಗಣ್ಯ ವ್ಯಕ್ತಿಗಳೊಂದಿಗೆ ಅವರು ವೇದಿಕೆಯನ್ನು ಹಂಚಿಕೊಂಡಿದ್ದಾರೆ.
The items in your Cart will be deleted, click ok to proceed.