Share this book with your friends

Udupi Jilleya Pracheena Devalayagalu Bhaaga 1 - Udupi (Colour) / ಉಡುಪಿ ಜಿಲ್ಲೆಯ ಪ್ರಾಚೀನ ದೇವಾಲಯಗಳು ಭಾಗ ೧ - ಉಡುಪಿ (ವರ್ಣಮಯ)

Author Name: Rajesh Naik | Format: Paperback | Genre : Others | Other Details

ಈ ಪುಸ್ತಕವು ಉಡುಪಿ ತಾಲೂಕಿನ ಪ್ರಾಚೀನ ದೇವಾಲಯಗಳ ಸಂಕ್ಷಿಪ್ತ ವಿವರಗಳನ್ನು ಛಾಯಾಚಿತ್ರಗಳ ಜೊತೆಗೆ ಹೊಂದಿದೆ. ಕಲೆ ಮತ್ತು ಕೆತ್ತನೆಗಳ ದೃಷ್ಟಿಕೋನದಿಂದ ಅಷ್ಟೇನು ಮಹತ್ವ ಹೊಂದಿಲ್ಲದ ಈ ದೇವಾಲಯಗಳು, ಐತಿಹಾಸಿಕವಾಗಿ ಬಹಳ ಮಹತ್ವವನ್ನು ಹೊಂದಿವೆ. ದೇವಾಲಯಗಳ ಆಡಳಿತ ಮತ್ತು ಆಚರಣೆಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಈ ಎಲ್ಲಾ ಪ್ರಾಚೀನ ದೇವಾಲಯಗಳು ಇನ್ನೂ ಸಕ್ರಿಯವಾಗಿರುವುದಕ್ಕೆ ಮುಖ್ಯ ಕಾರಣ. ಕಣ್ಣ ಮುಂದೆ ಇದ್ದೂ ಕಾಣದಂತಿರುವ ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ, ಈ ಪುಸ್ತಕ.

Read More...
Paperback
Paperback 900

Inclusive of all taxes

Delivery

Item is available at

Enter pincode for exact delivery dates

Also Available On

ರಾಜೇಶ ನಾಯ್ಕ

ರಾಜೇಶ ನಾಯ್ಕ ಇವರು ಕಳೆದ ಹದಿನೈದು ವರ್ಷಗಳಿಂದ ರಾಜ್ಯದ ಪ್ರಾಚೀನ ದೇವಾಲಯಗಳಿಗೆ ಭೇಟಿಯಿತ್ತು ಅನುಭವ ಉಳ್ಳವರು. ದೇವಾಲಯಗಳ ಮಾಹಿತಿ ಸಂಗ್ರಹಣೆ ಮಾಡಿ ಅವನ್ನು ದಾಖಲಿಸುವುದು ಅವರ ಹವ್ಯಾಸ. ಪ್ರತಿಯೊಂದು ಪುರಾತನ ದೇವಾಲಯವು ನಮ್ಮ ಇತಿಹಾಸದ ಏನಾದರೊಂದು ವಿಷಯವನ್ನು ತನ್ನಲ್ಲಿ ಅಡಗಿಸಿಕೊಂಡು ಇಟ್ಟಿರುತ್ತದೆ. ಅದನ್ನು ಅರಿಯುವ ಮತ್ತು ತಿಳಿಯುವ ಆಸಕ್ತಿ ಮತ್ತು ಉತ್ಸಾಹ ಇರಬೇಕು ಎಂದು ಹೇಳುವ ಲೇಖಕರಿಗೆ ಇಂತಹ ದೇವಾಲಯಗಳನ್ನು ಹುಡುಕಿಕೊಂಡು ಪ್ರಯಾಣಕ್ಕೆ ಹೊರಡುವುದು ಬಹಳ ಅಚ್ಚುಮೆಚ್ಚು. ಪ್ರತೀ ಸಲವೂ ದೇವಾಲಯ ಯಾತ್ರೆಗೆ ತೆರಳಿದಾಗ ಜ್ಞಾನ ವೃದ್ಧಿಸುತ್ತದೆ, ಶಿಲ್ಪಕಲೆಯ ಬಗ್ಗೆ ಆಸಕ್ತಿ ಇನ್ನಷ್ಟು ಹೆಚ್ಚುತ್ತದೆ, ಶಿಲ್ಪ ಲಕ್ಷಣಗಳ ಕುರಿತು ಇನ್ನಷ್ಟು ಅರಿವು ಮೂಡುತ್ತದೆ ಹಾಗೂ ಸನಾತನ ಧರ್ಮದ ಭವ್ಯ ಇತಿಹಾಸದ ಕುರಿತು ಇನ್ನಷ್ಟು ಹೆಮ್ಮೆಯೆನಿಸುತ್ತದೆ. ದೇವಸ್ಥಾನಗಳು ಜ್ಞಾನ ಭಂಡಾರಗಳು. ಇಲ್ಲಿ ಕಲಿತರೆ ಕಲಿತಷ್ಟು ಇದೆ, ಕಲಿಯುವವರು ಬೇಕು ಎನ್ನುವುದು ಲೇಖಕರ ಅಭಿಪ್ರಾಯ.

Read More...

Achievements

+3 more
View All