You cannot edit this Postr after publishing. Are you sure you want to Publish?
Experience reading like never before
Read in your favourite format - print, digital or both. The choice is yours.
Track the shipping status of your print orders.
Discuss with other readersSign in to continue reading.

"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palನವೀನತೆ ಪ್ರತಿ ವ್ಯಕ್ತಿಯಲ್ಲೂ ಅಡಗಿದೆ. ಆದರೆ ಆ ನವೀನ ಶಕ್ತಿಯು ಯಥಾವತ್ತಾಗಿ ಬೆಳೆಸದೆ ಹೋದರೆ, ಅದು ಪೂರ್ಣವಾಗಿ ವ್ಯಕ್ತವಾಗದು. ಇದನ್ನು ಬೆಳೆಸಲು ದೃಢ ನಿಟ್ಟಿನ ಪ್ರಯತ್ನಗಳು ಅಗತ್ಯವಿರುತ್ತವೆ. ಈ ಮನೋಭಾವವನ್ನು ಸಕಾಲದಲ್ಲಿ ಮತ್ತು ಶಿಸ್ತುಪೂರ್ವಕವಾಗಿ ಬೆಳೆಸದೆ ಹೋದರೆ, ವ್ಯಕ್ತಿಯು ತನ್ನ ಶಕ್ತಿಗಳ ಮೇಲೆ ನಂಬಿಕೆಯನ್ನು ಕಳೆದುಕೊಳ್ಳಬಹುದು ಅಥವಾ ಅನಾವಶ್ಯಕವಾಗಿ ಹೋರಾಡಬೇಕಾದ ಪರಿಸ್ಥಿತಿಯನ್ನೆದುರಿಸಬೇಕಾಗಬಹುದು.
ಈ ತತ್ವಾಧಾರಿತ ಪುಸ್ತಕವನ್ನು ನವೀನ್ ಲಕ್ಕುರ್ ರಚಿಸಿದ್ದು, ಪ್ರತಿಯೊಬ್ಬರಲ್ಲೂ ಇದ್ದು ಮರೆತುಹೋದ ಆಂತರಿಕ ಶಕ್ತಿಯನ್ನು ಪುನರ್ಜೀವಿತಗೊಳಿಸುವ ಉದ್ದೇಶದಿಂದ, ಅವರ ವಿಶಿಷ್ಟ ಹನ್ನೆರಡು ಜೋಡಿತತ್ವಗಳನ್ನು ಆಧರಿಸಿ. ಒಟ್ಟಾಗಿ ಒಂದು ಗುರಿಯ ಕಡೆಗೆ ಸಾಗುತ್ತಿರುವ ತಂಡದ ಸದಸ್ಯರು ತಮ್ಮ ಪೂರ್ಣ ಶಕ್ತಿಯನ್ನು ಅರಿತುಕೊಳ್ಳಲು, ತಮ್ಮ ಪ್ರಯಾಣವನ್ನು ಆನಂದಪೂರಿತವಾಗಿಸಿ, ಇಂಟ್ರಪ್ರಿನಿಯರಶಿಪ್ ಅಥವಾ ಎಂಟ್ರಪ್ರಿನಿಯರಶಿಪ್ ಗುರಿ ತಲುಪುವ ಮಾರ್ಗವನ್ನು ಸುಲಭಗೊಳಿಸಲು ಈ ಪುಸ್ತಕ ಸಹಾಯಕವಾಗಲಿದೆ. ಇದನ್ನು ವಿಶೇಷವಾಗಿ ಮಹತ್ವಾಕಾಂಕ್ಷೆಯುಳ್ಳ ಯುವಮನಸ್ಸುಗಳಿಗೆ ಉದ್ದೇಶಿಸಲಾಗಿದ್ದು, ಅವರು ಎದುರಿಸಬಹುದಾದ ಅನೇಕ ಅಡೆತಡೆಯನ್ನು ತಪ್ಪಿಸಿಕೊಳ್ಳಲು ನೆರವಾಗುವುದು.
ಪ್ರತಿಯೊಬ್ಬರಿಗೂ ಸಮಯವು ಸೀಮಿತವಾಗಿದ್ದು, ಇತ್ತೀಚೆಗೆ ಗಮನ ವಹಿಸುವ ಶಕ್ತಿಯೂ ಕಡಿಮೆಯಾಗಿದೆ. ಆದರೂ ಮಾನವ ಇತಿಹಾಸದ ಆರಂಭದಿಂದಲೂ ಸಮಯ, ಗಮನ ಮತ್ತು ಕಲ್ಪನೆಗೆ ಸೆಳೆಯುವ ಶಕ್ತಿಯುಳ್ಳ ಸಂವಹನ ವ್ಯವಸ್ಥೆ ಏನೆಂದರೆ ಅದು ಕಥಾ ಹೇಳುವ ಕಲೆ. ಸಾಮಾನ್ಯ ವ್ಯಾಪಾರ ಪುಸ್ತಕ ಶೈಲಿಯಲ್ಲಿ ಶಕ್ತಿಶಾಲಿಯಾದ ಈ ತತ್ವಗಳನ್ನು ಒದಗಿಸುವ ಬದಲು, ಲೇಖಕರು ಸುಲಭವಾಗಿ ಓದಬಹುದಾದ ಕಥಾ ರೂಪದಲ್ಲಿ ಆವಿಷ್ಕರಿಸಿದ್ದಾರೆ. ಎರಡು ಆನೆಗಳು — ಆಪಿ ಮತ್ತು ಪ್ರಾಪಿ — ತಮ್ಮ ಅನುಭವದ ಕಣ್ಣಿನಿಂದ ಈ ತತ್ವಗಳನ್ನು ಹೇಳುವ ರೋಚಕ ಕಥೆಗಳ ಮೂಲಕ ನಿರೂಪಿಸುತ್ತವೆ. ಇವರಿಗೆ ಲಕ್ಕಿ ಎಂಬ ವ್ಯಕ್ತಿಯೊಂದಿಗಿನ ಅಕಸ್ಮಾತ್ ಭೇಟಿಯಿಂದ ಈ ಹನ್ನೆರಡು ಜೋಡಿತತ್ವಗಳ ಕುರಿತಂತೆ ನಡವಳಿಕೆಯ ಸರಣಿ ಆರಂಭವಾಗುತ್ತದೆ.
ಈ ಹನ್ನೆರಡು ಜೋಡಿತತ್ವಗಳಲ್ಲಿ ಪ್ರತಿ ಒಂದೂ ವ್ಯಕ್ತಿಯು ತನ್ನ People, Purpose & Performance ಅನ್ನು ಪುನರ್ಜೀವಿತಗೊಳಿಸಲು ಸ್ಪೂರ್ತಿದಾಯಕವಾಗಿರಬಹುದು.
ಈ "ಅವಳಿ ಜವಳಿ ಸೂತ್ರಗಳು" ಪುಸ್ತಕವನ್ನು ಕನ್ನಡಕ್ಕೆ ಕವಿತಾ ಪರಮೇಶ್ ಅವರು ಅನುವಾದಿಸಿದ್ದಾರೆ.
It looks like you’ve already submitted a review for this book.
Write your review for this book (optional)
Review Deleted
Your review has been deleted and won’t appear on the book anymore.ನವೀನ್ ಲಕ್ಕೂರ್
ಲೇಖಕರ ಬಗ್ಗೆ
ಸೃಜನಶೀಲ ಕಲ್ಪನೆಯನ್ನು ಸಾಮಾಜಿಕ ಜವಾಬ್ದಾರಿಯುತ, ಲಾಭದಾಯಕ ಉದ್ಯಮವಾಗಿಸುವುದು ಇದು ನವೀನ್‍ಲಕ್ಕೂರ್ ರವರನ್ನು ವರ್ಣಿಸುವ ಸಾಲು. ನವೀನ್ ಒಬ್ಬ ಸರಣಿ ಉದ್ಯಮಿ, ಉದ್ಯಮ ಪೋಷಕ.
ಎರಡು ದಶಕಗಳಿಗೂ ಹೆಚ್ಚು ವೃತಿಪರ ಅನುಭವವಿರುವ ನವೀನ್ ಸೃಜನಶೀಲ ಆಲೋಚನೆಗಳನ್ನು ಜಾಗತಿಕ ಮಟ್ಟದಲ್ಲಿ ಲಾಭದಾಯಕ ಉದ್ಯಮವಾಗಿಸುವ ಖ್ಯಾತಿಯನ್ನು ಹೊಂದಿದ್ದಾರೆ.
ನವೀನ್ ನವೀಕರಣ, ನಾಯಕತ್ವ, ಉದ್ಯಮಶೀಲತೆ ಹಾಗೂ ಮಾಹಿತಿ ತಂತ್ರಜ್ಞಾನದ ಬಗ್ಗೆ ಹಲವು ಭಾಷಣಗಳನ್ನು ಲೇಖನಗಳನ್ನು ಪ್ರಕಟಿಸಿದ್ದಾರೆ.
ಉದ್ಯಮಶೀಲತೆಯನ್ನು ಪೋಷಿಸುವುದು ನವೀನ್‍ರವರಿಗೆ ಉತ್ಸಾಹದಾಯಕ. ಅದರಲ್ಲೂ ಸಾಮಾಜಿಕ ಪ್ರಭಾವ ಬೀರುವಂತಹ ಉದ್ಯಮಗಳೆಂದರೆ ನವೀನ್‍ರವರಿಗೆ ಅಚ್ಚು ಮೆಚ್ಚು.
“ಲವ್ ಆಲ್ - ಸರ್ವ ಆಲ್”ಎಂಬುದು ನವೀನ್‍ರ ಮಂತ್ರ. ನವೀನ್‍ರವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು www.NaveenLakkur.comನ್ನು ಸಂದರ್ಶಿಸಿ.
ಅನುವಾದಕರು
ಕವಿತಾ ಪರಮೇಶ್, CA, MBL, ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯಲ್ಲಿ ತೊಡಗಿದ್ದು, ಇನ್ಕಮ್ ಟ್ಯಾಕ್ಸ್, ಕಾರ್ಪೊರೇಟ್ ಲಾ, ಬಿಸಿನೆಸ್ ಅಡ್ವೈಸರಿ ಸರ್ವಿಸಸ್ ಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಹಲವು ದೇಶೀಯ ಹಾಗೂ ಬಹುರಾಷ್ಟ್ರೀಯ ಉದ್ಯಮಗಳಿಗೆ ಸಲಹೆಗಾರರಾಗಿ, ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದ್ಯಮಗಳ ಏಳು ಬೀಳುಗಳನ್ನು ಅತಿ ಸಮೀಪದಿಂದ ಕಂಡಿರುವ ಅವರು, ಉದ್ಯಮಿಗಳನ್ನು ಅದರಲ್ಲೂ ಗ್ರಾಮೀಣ ಪ್ರದೇಶದ ಉದ್ಯಮಿಗಳನ್ನು, ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರಿಗೆ ಮಾರ್ಗದರ್ಶಿಯಾಗಿರಲೆಂದು ನವೀನ್ ಲಕ್ಕೂರ್ ರವರ “ಇನ್ಸೆಪೆರೆಬಲ್ ಟ್ವಿನ್ಸ್” ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಕವಿತಾರವರು ಸಮಾಜ ಕಳಕಳಿ ಇರುವ ಹಲವು ಲೇಖನಗಳನ್ನು ದಿನಪತ್ರಿಕೆಗಳಲ್ಲಿ ಹಾಗೂ ಸಾಮಾಜಿಕ ಹಾಗೂ ವೃತ್ತಿಪರ ತಾಣಗಳಲ್ಲಿ ಪ್ರಕಟಿಸಿದ್ದಾರೆ. ರೋಟರಿ ಸಂಸ್ಥೆಯಂತಹ ಸಾಮಾಜಿಕ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವವನ್ನು ಹೊಂದಿದ್ದಾರೆ. ವೀಣಾಭ್ಯಾಸ ಹಾಗೂ ಮ್ಯಾರಾಥಾನ್ ರನ್ನಿಂಗ್ ಇವರ ಇತರೆ ಆಸಕ್ತಿಗಳು.
India
Malaysia
Singapore
UAE
The items in your Cart will be deleted, click ok to proceed.