ಭೌತಿಕ (ತಾಮಸಿಕ), ಮಾನಸಿಕ (ರಾಜಸಿಕ) ಹಾಗು ದೈವಿಕ ಸ್ತರಗಳಲ್ಲಿ (ಸಾತ್ತ್ವೀಕ) ವಿಕಾಸ, ಕ್ರಾಂತಿ ಹಾಗು ಗತಿಯನ್ನು ಹೊಂದಿದಂತಹ ನೈಜತೆ, ವಾಸ್ತವೀಕತೆ ಹಾಗು ಘನೀಕೃತದ ಮುಂದುವರಿಕೆಯು ಯಾವುದೇ ವ್ಯಕ್ತಿಯಲ್ಲಿ ಗಮನಿಸಿದಾಗ ಕಂಡುಬರುತ್ತದೆ. ಮುಂದುವರಿಕೆಯ ಅವಶ್ಯಕತೆಯು ಸ್ಪಷ್ಟೀಕರಣಗೊಂಡು, ಸ್ಥಿತ್ಯಂತರಗೊಂಡು, ಜ್ಯಾಮಿತೀಯ ಪ್ರಕ್ಷೇಪಗಳಾಗಿ ರೂಪಾಂತರಗೊಂಡು, ವಾಸ್ತವೀಕರಣವಾಗಿ ಸ್ವಂತ ಕ್ಷೇತ್ರದಲ್ಲಿ ವ್ಯಕ್ತೀಕರಣಗೊಂಡಿರುವುದು ಸಹ ಗಮನಿಸಿದವನ ಅರಿವಿಗೆ ಬರುತ್ತದೆ. ಈ ಒಂದು ಪ್ರಕ್ರಿಯೆಯು ಋತದ (ಅಂದರೆ, ವಿಶ್ವ ಕ್ರಮದ ವಿಧಿಯ ಸಾಮರ್ಥ್ಯದ / ಪುರುಷನ) ಪ್ರಕಾರದಲ್ಲಿ ಪ್ರಕೃತಿಯ (ಶಕ್ತಿ ಭೂಮಿಕೆಯ) ನಿಯಮವೇ ಆಗಿದೆ ಎಂದಾಗಿ ವೇದ ವಿಜ್ಞಾನಿಗಳು ನಮಗೆ ತೋರಿಸಿಕೊಟ್ಟಿರುತ್ತಾರೆ.