Share this book with your friends

Bharatada Vaividhyamaya Janapada Kathegalu / ಭಾರತದ ವೈವಿಧ್ಯಮಯ ಜಾನಪದ ಕಥೆಗಳು

Author Name: Dr.B.R.Suhas | Format: Paperback | Genre : Literature & Fiction | Other Details

ಭಾರತದ ವಿವಿಧ ರಾಜ್ಯಗಳ ಮತ್ತು ಉಪಭಾಷೆಗಳ ವೈವಿಧ್ಯಮಯವಾದ ಜಾನಪದ ಕಥೆಗಳ ಸಂಗ್ರಹವಿದು. ಭಾರತದ ಸಂಸ್ಕøತಿಯು ಒಂದೇ ಆದರೂ ಅನೇಕ ಪ್ರಾದೇಶಿಕ ವೈವಿಧ್ಯತೆಗಳಿದ್ದು, ಅವು ಸ್ವಾರಸ್ಯಕರವಾಗಿವೆ. ಈ ವೈವಿಧ್ಯತೆಗಳನ್ನು ಅರಿಯಲು ಜಾನಪದ ಕಥೆಗಳು ಬಹಳ ಪ್ರಯೋಜನಕಾರಿಯಾಗಿವೆ. ಅಲ್ಲದೇ ಈ ಜಾನಪದ ಕಥೆಗಳಲ್ಲಿ, ಅತಿಮಾನುಷ ಕಥೆಗಳು, ಹಾಸ್ಯ ಕಥೆಗಳು, ಪ್ರಾಣಿಕಥೆಗಳು, ನೀತಿಕಥೆಗಳು, ಧಾರ್ಮಿಕ ಕಥೆಗಳು, ಬುದ್ಧಿಚಾತುರ್ಯದ ಕಥೆಗಳು, ಒಗಟಿನ ಕಥೆಗಳು, ಕಾರಣ ಕಥೆಗಳು, ಮೂರ್ಖರ ಕಥೆಗಳು, ರಾಜರಾಣಿಯರ, ರಾಜಕುಮಾರ, ರಾಜಕುಮಾರಿಯರ ಕಥೆಗಳು, ಪ್ರೇಮ ಕಥೆಗಳು, ಹಳ್ಳಿಗರ ಕಥೆಗಳು, ರಾಕ್ಷಸರ ಕಥೆಗಳು, ಮಾಯಾಮಂತ್ರದ ಕಥೆಗಳು, ತಂತ್ರಗಾರರು ಮೊದಲಾದ ಹಲವಾರು ಪ್ರಕಾರದ ಕಥೆಗಳಿವೆ. ಅನೇಕ ಕಥೆಗಳು ವಿವಿಧ ಪ್ರದೇಶಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿಂದ ಕೂಡಿದ್ದು ಬಹುತೇಕ ಒಂದೇ ಆಗಿರುತ್ತವೆ. ಇದಕ್ಕೆ ಕಾರಣ, ಪ್ರಯಾಣಿಕರು ಒಂದು ಸ್ಥಳದಿಂದ ಒಂದು ಸ್ಥಳಕ್ಕೆ ಪ್ರಯಾಣ ಮಾಡುತ್ತಾ ಇವುಗಳನ್ನು ಹರಡಿರುವುದೇ ಆಗಿರುತ್ತದೆ. ಹೀಗೆ ಬಾಯಿಂದ ಬಾಯಿಗೆ ಹರಿಡಿರುವ ಈ ಸ್ವಾರಸ್ಯಕರವಾದ ಕಥೆಗಳು ಇಂದಿನ ದಿನಗಳಲ್ಲಿ ಬಹಳ ಕಡಿಮೆಯಾಗುತ್ತಿವೆ. ಹಾಗಾಗಿ ಇಂಥ ಸಂಗ್ರಹಗಳು ಬಹಳ ಅವಶ್ಯವಾಗಿವೆ. 

Read More...
Paperback
Paperback 520

Inclusive of all taxes

Delivery

Item is available at

Enter pincode for exact delivery dates

Also Available On

ಡಾ. ಬಿ.ಆರ್. ಸುಹಾಸ್

ಡಾ|| ಬಿ.ಆರ್. ಸುಹಾಸ್‍ರವರು ವೃತ್ತಿಯಲ್ಲಿ ಚರ್ಮರೋಗತಜ್ಞ ವೈದ್ಯರಾಗಿದ್ದು, ಪ್ರವೃತ್ತಿಯಲ್ಲಿ ಲೇಖಕರಾಗಿದ್ದಾರೆ. ಪುಸ್ತಕಗಳನ್ನು ಸಂಗ್ರಹಿಸಿ ಓದುವುದು, ಸುಶ್ರಾವ್ಯವಾಗಿ ಹಾಡುವುದು, ಪ್ರವಾಸ ಮಾಡುವುದು, ಛಾಯಾಚಿತ್ರಗಳನ್ನು ತೆಗೆಯುವುದು ಹಾಗೂ ಕುಶಲ ಕಲಾಕೃತಿಗಳನ್ನು ಸಂಗ್ರಹಿಸುವುದು ಇವರ ಇತರ ಹವ್ಯಾಸಗಳಾಗಿವೆ. ಭಾರತೀಯ ಸಂಸ್ಕøತಿ, ಇತಿಹಾಸ, ಅಧ್ಯಾತ್ಮಗಳಲ್ಲಿ ಇವರಿಗೆ ಬಹಳ ಒಲವಿದೆ. ಸಂಸ್ಕøತ ಸಾಹಿತ್ಯ ಮತ್ತು ಪ್ರಾಚೀನ ಭಾರತದ ಕಥಾಸಾಹಿತ್ಯದಲ್ಲಿ ಇವರಿಗೆ ವಿಶೇಷ ಆಸಕ್ತಿ. ಇದುವರೆಗೂ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಸುಮಾರು ಐವತ್ತು ಪುಸ್ತಕಗಳನ್ನು ರಚಿಸಿದ್ದಾರೆ. ಪುರಾಣದ ಪ್ರೇಮ ಕಥೆಗಳು, ಶೃಂಗಾರ ಶುಕ ಕಥೆಗಳು, ಶೃಂಗಾರಲಹರಿ, ದಿನಕ್ಕೊಂದು ಸುಭಾಷಿತ, ಭರ್ತೃಹರಿಯ ಮೂರು ಶತಕಗಳು, ಬೇತಾಳನ ಬೆಡಗಿನ ಕಥೆಗಳು, eóÉನ್ ಕಥೆಗಳು, ಕಿರಿಯರ ಕಥಾಸರಿತ್ಸಾಗರ, ಚಾಣಕ್ಯನೀತಿ, ಭಾರತದ ವನ್ಯಧಾಮಗಳು, ಅದ್ಭುತರಾಮಾಯಣ, ಸುಶ್ರುತ, ಚರ್ಮದ ಕಾಯಿಲೆಗಳು, Immoಡಿಣಚಿಟ sಚಿಥಿiಟಿgs [ಆಂಗ್ಲ ಭಾಷಾಂತರ ಮತ್ತು ವಿವರಣೆಗಳೊಂದಿಗೆ ಸಂಸ್ಕøತ ಸುಭಾಷಿತಗಳ ಸಂಗ್ರಹ], ಇವು ಇವರ ಜನಪ್ರಿಯವಾದ ಕೆಲವು ಪುಸ್ತಕಗಳು. ಅನೇಕ ಪತ್ರಿಕೆಗಳಲ್ಲಿ ಲೇಖನಗಳನ್ನೂ ಬರೆದಿರುವ ಇವರು, ಅಂತರ್ಜಾಲ ಮಾಧ್ಯಮಗಳಲ್ಲೂ ಬಹಳ ಕ್ರಿಯಾಶೀಲರಾಗಿದ್ದಾರೆ ಹಾಗೂ ಫೇಸ್‍ಬುಕ್, ಯೂಟ್ಯೂಬ್ ಮೊದಲಾದ ಅಂತರ್ಜಾಲ ಮಾಧ್ಯಮಗಳಲ್ಲಿ ಪ್ರತ್ಯೇಕ ಪುಟ, ಸಮೂಹ ಹಾಗೂ ವಾಹಿನಿಗಳನ್ನು ಹೊಂದಿದ್ದಾರೆ. ಪ್ರಾಚೀನ ಭಾರತೀಯ ಕಥೆಗಳಲ್ಲಿ ಆಸಕ್ತರಾದವರು, ಇವರ ಫೇಸ್‍ಬುಕ್ ಸಮೂಹ(ಗ್ರೂಪ್)ವಾದ ಏಂಖಿಊಂ-ಂಟಿಛಿieಟಿಣ Iಟಿಜiಚಿಟಿ Sಣoಡಿies ಎಂಬ ಸಮೂಹವನ್ನು ಸೇರಬಹುದು. 
 ಡಾ|| ಬಿ.ಆರ್. ಸುಹಾಸ್‍ರವರು ಬೆಂಗಳೂರಿನಲ್ಲಿ ನೆಲಸಿದ್ದು ತಮ್ಮ ಖಾಸಗಿ ಚರ್ಮಚಿಕಿತ್ಸಾಲಯದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. 

Read More...

Achievements

+1 more
View All