You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಎಲ್ಲಾ ರೀತಯ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿರುವ ಆದರೆ ದುರದೃಷ್ಟವಶಾತ್ ಅಸಂಘಟಿತವಾದ ಮತ್ತು ತೀರ ನಿರ್ಲಕ್ಷಿಕ್ಕೆ ಒಳಪಟ್ಟ ವಲಯವಾದ ಲಾಜಿಸ್ಟಿಕ್ಸ್ ಮೇಲೆ 3 ದಶಕಗಳ ದೀರ್ಘ ಕಾಲ ನಡೆಸಿದ ನಡೆಸಿದ ಪ್ರಯೋಗಗಳ ಸಾರವು ಭಾರತದ ವಾಣಿಜ್ಯ ಸಾರಿಗೆ ಕೈಪಿಡಿಯಲ್ಲಿದೆ. ಬಹುತೇಕ ಹೂಡಿಕೆದಾರರು ಈ ವ್ಯಾಪಾರವನ್ನು ಆಡಳಿತ ಮಾಡುವ ಕಾನೂನಿನ ಬಗ್ಗೆ ತೀರ ಅಜ್ಞಾನಿಯಾಗಿದ್ದಾರೆ, ಇದರಿಂದ ಅವರು ಶೋಷಣೆಗೆ ಒಳಗಾಗುತ್ತಾರೆ.
ಸುಲಭ ಮತ್ತು ಮಾಹಿತಿಯುಕ್ತ ಜ್ಞಾನವನ್ನು ನೀಡುವ ಉದ್ದೇಶದಿಂದ, ನಾನು ಸಂಕ್ಷಿಪ್ತ ರೂಪದಲ್ಲಿ ಸಮಗ್ರ ಮಾಹಿತಿಯನ್ನು ನೀಡುತ್ತಿದ್ದೇನೆ.
ಈ ಪುಸ್ತಕವು ವಾಣಿಜ್ಯ ವಾಹನದ ಖರೀದಿಯ ಬಗ್ಗೆ 12 ಅಧ್ಯಾಯಗಳನ್ನು ಒಳಗೊಂಡಿದೆ: ಹಣಕಾಸು; ವಿಮೆ ಖರೀದಿ ಬಗ್ಗೆ; ಖರೀದಿಯ ನಂತರ ಅಗತ್ಯವಾದ ಕಾನೂನುಬದ್ದ ದಾಖಲೆಗಳು; ವಿವಿಧ ಪರವಾನಿಗೆಗಳು ಮತ್ತು ದಾಖಲಾತಿಗಳು; ವ್ಯವಹಾರದ ಕಾರ್ಯಕರಣೆಯ ಪ್ರಮುಖವಾದ ವೆಚ್ಚಗಳ ಪರಿಚಯ; ಅಪಘಾತವಾದ ಸಂದರ್ಭಗಳಲ್ಲಿ ನೀಡಬೇಕಾದಂತ ನ್ಯಾಯಯುತ ದಾಖಲಾತಿಗಳು; ಮೂರನೇ ವ್ಯಕ್ತಿಯ ಹೊಣೆಗಾರಿಕೆಯ ಹಕ್ಕೊತ್ತಾಯವನ್ನು ಸಲ್ಲಿಸುವ ಪರಿಣಾಮಕಾರಿ ಮತ್ತು ಸುರಕ್ಷಿತವಾದ ಪ್ರಕ್ರಿಯೆ; ಸರ್ಕಾರ ವಾಹನದ ಕೋರಿಕೆಪತ್ರ ನೀಡಿದ ನಂತರದ ಪರಿಸ್ಥಿತಿ; ವಾಹನವನ್ನು ಮಾರಾಟ ಮಾಡುವಾಗ ಅನುಸರಿಸಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಮತ್ತು ವಾಣಿಜ್ಯ ವಾಹನವನ್ನು ಸ್ಕ್ರಾಪ್ ಆಗಿ ಮಾರಾಟ ಮಾಡುವಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವುದರ ಬಗ್ಗೆಗಿನ ವಿವರಗಳು;
ಪ್ರದೀಪ್ ಯಾದವ್
ಶ್ರೀ. ಪ್ರದೀಪ್ ಯಾದವ್ ಅವರು ಸಾರಿಗೆ ಕುಮಾರ್ ಪ್ರಶಸ್ತಿ ಪುರಸ್ಕೃತರು ಮತ್ತು ರೋಟರಿಯನ್. ಪ್ರದೀಪ್ ಅವರು ನಾಗಾಲ್ಯಾಂಡ್ ನ ದಿಮಾಪುರ್ ಅಲ್ಲಿ 1971 ನವೆಂಬರ್ 13 ನೇ ತಾರೀಖಿನಂದು ಜನಿಸಿದರು ಮತ್ತು ಗುರುಗಾವ್ ನಲ್ಲಿ ನೆಲೆಸಿದರು.
ಅಖಿಲ ಭಾರತ ಮೋಟಾರ್ ಸಾರಿಗೆ ಕಾಂಗ್ರೆಸ್ ನ ನಿರ್ವಹಣ ಸಮಿತಿಯ ಸದಸ್ಯರು, ವಾಣಿಜ್ಯಶಾಸ್ತ್ರದ ಪದವಿಧರ, ಮತ್ತು ಕಾನೂನು ಶಾಸ್ತ್ರದಲ್ಲಿ ಪದವಿಧರರು ಮತ್ತು ಲಾಜಿಸ್ಟಿಕ್ಸ್ ನಲ್ಲಿ 3 ದಶಕಗಳಷ್ಟು ಅನುಭವವದಾರರು.
ಜಪಾನಿನ ಕಾರ್ಪೊರೇಟ್ ನಿರ್ವಹಣ ಅಧ್ಯಾಯನ ಮತ್ತು ಅಹಮದಾಬಾದ್ ನ IIM ನಲ್ಲಿ ಸಾರಿಗೆ ಉದ್ಯಮಶೀಲತೆಯ ಅಧ್ಯಾಯನದ ಜೊತೆಗೆ ಜಪಾನ್ ನ AOTS ನಲ್ಲಿ ಲೋಗಿಸ್ಟಿಕ್ ನಿರ್ವಹಣೆಯ ಅಧ್ಯಾಯನ ಮಾಡಿದ್ದಾರೆ.
1997 ರಲ್ಲಿ ಸಾರಿಗೆ ಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ.
90ರ ಮದ್ಯದ ದಶಕದಲ್ಲಿ ಕುಮ್ಮಿನ್ಸ್ ಇಂಜಿನ್ ತಂತ್ರಜ್ಞಾನ, ಎಬಿಎಸ್ ಬ್ರೇಕ್ಸ್, ಏರ್ ಸಸ್ಪೆನ್ಶನ್,ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವವರಲ್ಲಿ ಮೊದಲಿಗರಾಗಿದ್ದರು. 2003 ರಲ್ಲಿ ಕ್ಲೌಡ್ ಆಧಾರಿತ ಆನ್ಲೈನ್ ERP ರಲ್ಲಿ ಶೇಕಡಾ 100 ರಷ್ಟು ನಿರ್ವಹಣ ಕಾರ್ಯಾಚರಣೆಯ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದರು. ಇದರಿಂದ ಜಿಪಿಎಸ್ ಅನ್ನು ಸಂಯೋಜಿಸಿದರು ಮತ್ತು ನೈಜ ಸಮಯದ ಮಾಹಿತಿಯನ್ನು ಹೂಡಿಕೆದಾರರಿಗೆ ಹಂಚಿಕೊಳ್ಳುತ್ತಿದ್ದರು.
The items in your Cart will be deleted, click ok to proceed.