You cannot edit this Postr after publishing. Are you sure you want to Publish?
Experience reading like never before
Sign in to continue reading.
Discover and read thousands of books from independent authors across India
Visit the bookstore"It was a wonderful experience interacting with you and appreciate the way you have planned and executed the whole publication process within the agreed timelines.”
Subrat SaurabhAuthor of Kuch Woh Palಓಟಿಜಿ - ಆನ್ ದಿ ಗೋ ಎನ್ನುವ ಈ ಕಿರು ಪುಸ್ತಕ, ಕನ್ನಡ ಕಾವ್ಯ ಸಂಕಲನವಾಗಿದೆ, ಸಮಯ ಸಿಕ್ಕಾಗಲೆಲ್ಲ ಮೊಬೈಲ್ ತೆರೆದು ಟೈಪ್ ಮಾಡಿದ ಒಂದೊಂದು ಪದ, ಆ ಒಂದೊಂದು ಘಳಿಗೆಗಳು ಎಲ್ಲವೂ ಈ ಪುಸ್ತಕವನ್ನು ಪ್ರಕಟಿಸುವ ಈ ಸಮಯದಲ್ಲಿ ಒಂದೊಂದಾಗಿ ಕಣ್ಣು ಮುಂದೆ ಬರುತ್ತಿವೆ. ಓದುಗರ ಮನಸ್ಸಿಗೆ ಹತ್ತಿರವಾಗಲೆಂದು ಪ್ರತಿ ಕಾವ್ಯದ ನಂತರ ಅದರ ಸಾರಾಂಶವನ್ನು ಸಹ ನೀಡಲಾಗಿದೆ ತಪ್ಪದೇ ಓದಿ.
ಓಟಿಜಿ ಎಂದರೆ ಆನ್ ದಿ ಗೋ - ಈ ಕವನ ಸಂಕಲನಕ್ಕೆ ಒಂದು ಅದ್ಭುತ ಹೆಸರು - ನಿಮ್ಮ ಬಳಿ ಇರುವ ಮೊಬೈಲ್ ಫೋನ್ ಗೆ ನಿಮ್ಮ ಪೆನ್ ಡ್ರೈವ್ ಕನೆಕ್ಟ್ ಮಾಡಬೇಕು ಅಂದರೆ ಖಂಡಿತ ಈ ಓಟಿಜಿ ಬೇಕೇ ಬೇಕು - ಹಾಗೆಯೇ ನಿಮ್ಮ ತನು ಮತ್ತು ಮನವನ್ನು ಸೃಷ್ಟಿಯ ಬೇರೆಯೇ ಆಯಾಮದಲ್ಲಿರುವ ಮತ್ತೊಂದು ಲೋಕಕ್ಕೆ ಕನೆಕ್ಟ್ ಮಾಡಬಹುದು ಎಂದರೆ ಬಹುಷಃ ಈ ಪುಸ್ತಕ ಸಹಾಯವಾಗಬಹುದು. ಪ್ರತಿಯೊಂದು ಕಾವ್ಯದ ನಂತರ ಅದರ ಸಾರಾಂಶವನ್ನು ಸಹ ನೀಡಲಾಗಿದೆ. ಕನ್ನಡಲ್ಲಿ ಅನೇಕ ಪುಸ್ತಕಗಳನ್ನು ಈಗಾಗಲೇ ಬರೆದಿದ್ದರೂ ಸಹ, ಅಧಿಕೃತವಾಗಿ ಪ್ರಕಟಿತಗೊಳ್ಳುತ್ತಿರುವ ನನ್ನ ಮೊದಲ ಕನ್ನಡ ಪುಸ್ತಕವಿದು. ಬಹಳಷ್ಟು ಲಾಲನೆ ಪಾಲನೆ ಮಾಡಿ ಓದುಗರ ಮಡಿಲಿಗೆ ಅರ್ಪಿಸುತ್ತಿದ್ದೇನೆ. ಇದರಲ್ಲಿ ಇರುವ ಯಾವುದೋ ಒಂದು ಪುಟ ಅಥವಾ ಆ ಪುಟದಲ್ಲಿರುವ ಪದ ಅಥವಾ ಆ ಪದದಲ್ಲಿರುವ ಆ ಒಂದು ಅಕ್ಷರ ನಿಮ್ಮನ್ನು ಉತ್ತಮ ಜೀವನದ ಆಯಾಮವನ್ನು ನೋಡಲು ಮತ್ತು ಅರ್ಥ ಮಾಡಿಕೊಳ್ಳಲು ಪ್ರೇರೇಪಿಸಿದರೆ, ಈ ಪುಸ್ತಕದ ಹಿಂದಿನ ಉದ್ದೇಶ ಸಾಕಾರಗೊಳ್ಳುತ್ತದೆ.
ಮಹೇಶ್ವರ ಶಾಸ್ತ್ರಿ
ಮಹೇಶ್ವರ ಶಾಸ್ತ್ರಿ ಅವರು ಕಥಾ ನಿರೂಪಣೆಯಲ್ಲಿ ಆಳವಾದ ಉತ್ಸಾಹ ಹೊಂದಿರುವ ಪ್ರಸಿದ್ಧ ಭಾರತೀಯ ಲೇಖಕರಾಗಿದ್ದಾರೆ. ಆಟೋಮೊಬೈಲ್ ಇಂಜಿನಿಯರ್ ಆಗಿ ಮತ್ತು ಕಂಪ್ಯೂಟರ್ ಸೈನ್ಸ್ ಅಧ್ಯಾಪಕರಾಗಿ ಅವರ ವ್ಯಾಪಕ ವೃತ್ತಿಜೀವನದ ಜೊತೆಗೆ, ಮಹೇಶ್ವರ ಶಾಸ್ತ್ರಿ ಅವರು ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ, ನಮ್ಮಲ್ಲಿ ಪ್ರತಿಯೊಬ್ಬರಲ್ಲಿರುವ ಸ್ವಯಂ-ನಂಬಿಕೆಯ ವಿಷಯಗಳು ಮತ್ತು ಬಳಸದ ಸಾಮರ್ಥ್ಯವನ್ನು ಅನ್ವೇಷಿಸಿದ್ದಾರೆ. ಅವರ ಸಾಹಿತ್ಯಿಕ ರಚನೆಗಳ ಮೂಲಕ ಇತರರನ್ನು ಪ್ರೇರೇಪಿಸುವ ಅವರ ಸಮರ್ಪಣೆಯು ಅವರಿಗೆ ಇಂಟರ್ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್ 2023, ನ್ಯಾಷನಲ್ ಅಚೀವರ್ ಅವಾರ್ಡ್ 2023, ವರ್ಷದ 2023 ರ ಕಾಲ್ಪನಿಕ ಲೇಖಕರು ಮತ್ತು ಇಂಡಿಯಾ ಸ್ಟಾರ್ ವರ್ಲ್ಡ್ ರೆಕಾರ್ಡ್ಸ್ ಶೀರ್ಷಿಕೆಗಳನ್ನು ಗಳಿಸಿದೆ, ಇದು ಸಾಹಿತ್ಯಿಕ ಐಕಾನ್ ಆಗಿ ಅವರ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
The items in your Cart will be deleted, click ok to proceed.