Share this book with your friends

Shivamogga Jilla Pravasi Taanagalu / ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣಗಳು

Author Name: Dr. Ravi H | Format: Paperback | Genre : Reference & Study Guides | Other Details

ಶಿವಮೊಗ್ಗ ನಗರವು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುತ್ತದೆ. ಇಲ್ಲಿನ ಮೋಡಿಮಾಡುವ ನಿಸರ್ಗದ ಬೆಟ್ಟಗಳ ದೃಶ್ಯಾವಳಿ, ದಿಬ್ಬಗಳು, ಹಸಿರು ಕಣಿವೆಗಳು, ನದಿಗಳು. ತೊರೆಗಳು, ದಟ್ಟವಾದ ಕಾಡುಗಳು, ಕೋಟೆಗಳು, ದೇವಾಲಯಗಳು, ಚಾರಿತ್ರಿಕ ಸ್ಥಳಗಳು, ಶ್ರೀಗಂಧದ ಮರಗಳು, ಸಸ್ಯ ಮತ್ತು ವನ್ಯ ಜೀವಿಗಳು ಮನಸೂರೆಗೊಳ್ಳುತ್ತವೆ. ಜೊತೆಯಲ್ಲಿ ಬಾಯಲ್ಲಿ ನೀರೂರಿಸುವ ತಿನಿಸುಗಳು ಮತ್ತು ಹೃದಯ ಸ್ಪರ್ಶಿಸುವ ಆತಿಥ್ಯ ಇಲ್ಲಿನ ವೈಶಿಷ್ಟತೆ. ಇದುವೆ ಅಲ್ವಾ –“ಭೂಮಿಯ ಮೇಲಿನ ಸ್ವರ್ಗ”. ಈ ಹೆಸರಾಂತ ಜಿಲ್ಲೆಯ ಕುರಿತು ಓದಿ ಅಥವಾ ಕೇಳಿ ತಿಳಿದರೆ ಸಾಲದು ಅದನ್ನು ಅಲ್ಲಿರುವ ಪ್ರವಾಸಿ ತಾಣಗಳನ್ನು ಕಣ್ಣಾರೆ ಕಂಡಾಗ ಆಗುವ ಅನುಭವವೇ ಒಂದು ರೋಮಾಂಚನ. ಈ ಹಿನ್ನಲೆಯಲ್ಲಿ ಸಿಕ್ಕ ಕೆಲವು ಮಾಹಿತಿಗಳನ್ನು ಆಧರಿಸಿ ಸಿದ್ದಪಡಿಸಲಾರದ ಈ ಪುಸ್ತಕ ಪ್ರಕೃತಿ ಪ್ರಿಯರಿಗೆ, ಪ್ರವಾಸಿ ಪ್ರಿಯರಿಗೆ ಅಗತ್ಯದ ಮಾಹಿತಿಯನ್ನು ನೀಡಬಲ್ಲದು. 

Read More...
Paperback
Paperback 360

Inclusive of all taxes

Delivery

Item is available at

Enter pincode for exact delivery dates

Also Available On

ಡಾ. ರವಿ ಹೆಚ್

ಡಾ. ರವಿ ಹೆಚ್. ಸಹಾಯಕ ಪ್ರಧ್ಯಾಪಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ, ಶಿಕಾರಿಪುರ. ಇವರು  ೧೭-೦೮-೨೦೦೯ ರಿಂದ ೨೮-೧೨-೨೦೧೦ರ ವರೆಗೆ ಜುಬೇದಾ ಮಹಿಳಾ ಡಿ.ಇಡಿ ಕಾಲೇಜು, ಶಿಕಾರಿಪುರದಲ್ಲಿ ಪ್ರಾಚಾರ್ಯರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿ ನಂತರ ೨೯-೧೨-೨೦೧೦ರಿಂದ ಕರ್ನಾಟಕದ ಪ್ರತಿಷ್ಟಿತ ಬಿ.ಇಡಿ ಕಾಲೇಜುಗಳಲ್ಲಿ ಒಂದಾದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನಿರಂತರ ಸೇವೆಯನ್ನು ಸಲ್ಲಿಸುತ್ತಾ ಬೋಧನೆಯೊಂದಿಗೆ ವಿವಿಧ ಶೈಕ್ಷಣಿಕ ಸಮ್ಮೇಳನ, ಕಾರ್ಯಾಗಾರಗಳಲ್ಲಿ ಭಾಗವಿಸುತ್ತಾ, ಹಲವಾರು ಸಂಶೋಧನಾ ಮತ್ತು ಸೈದ್ದಾಂತಿಕ ಲೇಖನಗಳನ್ನು ಮಂಡಿಸಿದ್ದಲ್ಲದೇ ಅನೇಕ ಲೇಖನಗಳನ್ನು ಪ್ರತಿಷ್ಟಿತ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅಲ್ಲದೇ ಕನ್ನಡ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ ಹೊಂದಿದ ಇವರು ಸೃಜನಾತ್ಮಕವಾಗಿ ಏನಾದರೂ ಕಾರ್ಯನಿರ್ವಹಿಸಬೇಕೆಂದು ಆಲೋಚಿಸಿ ಈಗಾಗಲೇ “ಪಂಪ ಪ್ರಶಸ್ತಿ ಪುರಸ್ಕೃತರು” ಮತ್ತು "ಸಿರಿಗನ್ನಡ ಭಾಷಾಂಶ ಸಂಚಿ" ಎಂಬ ಕೃತಿಗಳನ್ನು ಹೊರತಂದಿದ್ದಲ್ಲದೇ ಪ್ರಸ್ತುತದಲ್ಲಿ ಸರಳವಾಗಿ ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣಗಳು ಕೃತಿಯ ಮೂಲಕ ಜಿಲ್ಲೆಯ ಪ್ರಮುಖ ಸ್ಥಳಗಳ ಪರಿಚಯ ಮಾಡುವ ಪ್ರಯತ್ನ ಮಾಡಿದ್ದಾರೆ.

Read More...

Achievements

+5 more
View All